ನವದೆಹಲಿ:ಉತ್ತರ ಪ್ರದೇಶಕ್ಕೆ ಅಂಟಿಕೊಂಡಿದ್ದ ಗೂಂಡಾರಾಜ್ ಕಳಂಕವನ್ನು ಯೋಗಿ ಅದಿತ್ಯನಾಥರ ನೇತೃತ್ವದ ಸರ್ಕಾರ ಈ ಐದು ವರ್ಷದಲ್ಲಿ ತೊಡೆದುಹಾಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ವರ್ಚುವಲ್ ಮೂಲಕ ಸೋಮವಾರ ಮೊದಲ ಚುನಾವಣಾ ರ‍್ಯಾಲಿ ನಡೆಸಿದ ಅವರು, ರಾಜ್ಯದಲ್ಲಿ ವಿಶೇಷವಾಗಿ ಪಶ್ಚಿಮ ಭಾಗದಲ್ಲಿ ಧನಬಲ, ಬಾಹುಬಲ ಇದ್ದವರದ್ದೇ ಆಡುಂಬೊಲ ಆಗಿತ್ತು. ಇಂಥದ್ದನ್ನು ಬಿಜೆಪಿ ಸರ್ಕಾರ ಹೊಗಲಾಡಿಸಿ ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆಯನ್ನು ಸರಿಪಡಿಸಿ ಜನರು ನೆಮ್ಮದಿಯಿಂದ ಬದುಕುವಂತೆ ಮಾಡಿದೆ. ದೊಂಬಿ, ದರೋಡೆ, ಹತ್ಯೆಗಳು ಇಲ್ಲವಾಗಿದೆ. ವ್ಯಾಪಾರಿಗಳ ಸುಲಿಗೆಗೆ ಕಡಿವಾಣ ಬಿದ್ದಿದೆ. ಸಂಜೆ ನಂತರ ಹೆಣ್ಣುಮಕ್ಕಳು ನಿರಾಂತಕವಾಗಿ ಓಡಾಡುವ ಸನ್ನಿವೇಶ ಇದೆ. ಹಿಂದಿನ ಸರ್ಕಾರ ಪೋಷಿಸುತ್ತಿದ್ದ ಗೂಂಡಾಗಳನ್ನು ಮಟ್ಟಹಾಕಲಾಗಿದೆ. ಹೊತ್ತಿ ಉರಿಯುತ್ತಿದ್ದ ಪ್ರದೇಶದಲ್ಲಿ ಈಗ ಸಂಭ್ರಮ ಮನೆ ಮಾಡಿದೆ ಎಂದರು. ಕನಸು ಕಾಣುವವರು ನಿದ್ರಿಸುತ್ತಲೇ ಇರುತ್ತಾರೆ. ಸಿಎಂ ಯೋಗಿ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ ಎಂದರು.
ಕೇಂದ್ರ ಗೃಹ ಸಚಿವರು ಹಾಕುವ ಎಲ್ಲ ಸವಾಲನ್ನು ಸ್ವೀಕರಿಸಲು ಸಿದ್ಧ. ಸತ್ಯ ಹೇಳಲು ಸಿದ್ಧತೆ ಬೇಕಿಲ್ಲ. ಸಮಾಜವಾದಿ ಪಕ್ಷದ ಆಡಳಿತದಲ್ಲಿ ಅಪರಾಧ ಪ್ರಕರಣ ಕುರಿತಂತೆ ಸುಳ್ಳು ಹೇಳುತ್ತಿರುವ ಅವರೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧ.
|ಅಖಿಲೇಶ್ ಯಾದವ್ಸಮಾಜವಾದಿ ಪಕ್ಷದ ಅಧ್ಯಕ್ಷ
ರ‍್ಯಾಲಿ ನಿರ್ಬಂಧ ಮುಂದುವರಿಕೆ:ಪಂಚ ರಾಜ್ಯಗಳಲ್ಲಿ ಚುನಾವಣಾ ರ್ಯಾಲಿಗೆ ವಿಧಿಸಿದ್ದ ನಿಷೇಧವನ್ನು ಚುನಾವಣಾ ಆಯೋಗ ಫೆ. 11ರವರೆಗೆ ವಿಸ್ತರಿಸಿದೆ. ಇದರ ಅನ್ವಯ ರೋಡ್ ಷೋ, ಪಾದಯಾತ್ರೆ, ವಾಹನಗಳ ರ್ಯಾಲಿಗಳನ್ನು ರಾಜಕೀಯ ಪಕ್ಷಗಳು ನಡೆಸುವಂತಿಲ್ಲ. ಆದರೆ, ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯಕ್ಕೆ ಯಾವುದೇ ತಡೆ ಇಲ್ಲ. ಈ ಸಂಖ್ಯೆಯನ್ನು ಹಾಲಿ 10ರಿಂದ 20 ಜನಕ್ಕೆ ಏರಿಸಲಾಗಿದೆ. ಮತ್ತು 500 ಮಂದಿಗೆ ಮಿತಿ ಹಾಕಿದ್ದ ಬಯಲು ಪ್ರದೇಶದಲ್ಲಿನ ಪ್ರಚಾರ ಸಭೆಯನ್ನು ಒಂದು ಸಾವಿರಕ್ಕೆ ಹೆಚ್ಚಿಸಲಾಗಿದೆ ಎಂದು ಆಯೋಗ ಹೇಳಿಕೆಯಲ್ಲಿ ತಿಳಿಸಿದೆ.
ಸಮಾಜವಾದಿ ಪಕ್ಷದ ಆಡಳಿತದಲ್ಲಿ ಕೈರಾನಾ ಮತ್ತು ಮುಜಾಫರ್​ನಗರಗಳಲ್ಲಿ ಮೇ ಹಾಗೂ ಜೂನ್​ನಲ್ಲಿ ಕಾವೇರುತ್ತಿದ್ದವು. ಆದರೆ, ಈಗ ಶಿಮ್ಲಾದಷ್ಟೆ ತಣ್ಣಗೆ ಇವೆ.
|ಯೋಗಿ ಆದಿತ್ಯನಾಥಉತ್ತರ ಪ್ರದೇಶ ಸಿಎಂ
ಅಖಿಲೇಶ್ ವಿರುದ್ಧ ಕೇಂದ್ರ ಸಚಿವ:ಮೈನ್​ಪುರಿಯ ಜಿಲ್ಲೆ ಕರ್ಹಾಲ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ವಿರುದ್ಧ ಕೇಂದ್ರ ಸಚಿವ ಎಸ್.ಪಿ. ಸಿಂಗ್ ಬಘೇಲ್ ಬಿಜೆಪಿ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದರು. ಆಗ್ರಾ ಲೋಕಸಭಾ ಕ್ಷೇತ್ರದ ಸದಸ್ಯರಾಗಿರುವ ಬಘೇಲ್, ಕೇಂದ್ರದಲ್ಲಿ ಕಾನೂನು ಮತ್ತು ನ್ಯಾಯ ಖಾತೆಯ ರಾಜ್ಯಸಚಿವರಾಗಿದ್ದಾರೆ. ಅಖಿಲೇಶ್ ಕೂಡ ಸೋಮವಾರವೇ ನಾಮಪತ್ರ ಸಲ್ಲಿಸಿದ್ದಾರೆ.
ಬಾದಲ್ ದೇಶದ ಹಿರಿಯ ಉಮೇದುವಾರ:ಮಾಜಿ ಸಿಎಂ, ಶಿರೋಮಣಿ ಅಕಾಲಿ ದಳದ ಅಗ್ರೇಸರ ಪ್ರಕಾಶ್ ಸಿಂಗ್ ಬಾದಲ್ (94) ಲಂಬಿ ಕ್ಷೇತ್ರದಿಂದ ಸೋಮವಾರ ನಾಮಪತ್ರ ಸಲ್ಲಿಸಿದರು. ಈ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ದೇಶದ ಹಿರಿಯ ನಾಯಕ ಎಂಬ ದಾಖಲೆಯನ್ನೂ ತಮ್ಮದಾಗಿಸಿಕೊಂಡರು. ಕೇರಳದ ವಿ.ಎಸ್.ಅಚ್ಯುತಾನಂದನ್ 2016ರ ಚುನಾವಣೆಗೆ ಸ್ಪರ್ಧಿಸಿದ್ದಾಗ ಅವರಿಗೆ 92 ವರ್ಷ ವಯಸ್ಸಾಗಿತ್ತು. ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಟಿಯಾಲ ನಗರ ಕ್ಷೇತ್ರದ ಅಭ್ಯರ್ಥಿಯಾಗಿ ಉಮೇದುವಾರಿಕೆ ಪತ್ರ ಸಲ್ಲಿಸಿದರು.
‘ಜೇಮ್ಸ್’ಗೆ ದಾರಿ ಮಾಡಿಕೊಟ್ಟ ರಾಜಮೌಳಿ: ‘ಅದೂ ಅಲ್ಲ, ಇದೂ ಅಲ್ಲ’ ಎಂದು ‘ಆರ್​ಆರ್​ಆರ್’​​ ಬಿಡುಗಡೆಗೆ ಹೊಸ ದಿನಾಂಕ ನಿಗದಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + thirteen =
Remember me
