ನವದೆಹಲಿ :ಭೂತಾನ್​ ಪ್ರಜೆಗಳಿಗೆ ಭಾರತದ ರುಪೇ ನೆಟ್​ವರ್ಕ್​ ಬಳಸಿಕೊಳ್ಳಲು ಅನುವಾಗುವಂತಹ ರುಪೇ ಕಾರ್ಡ್​ ಫೇಸ್​ 2 ಅನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಭೂತಾನ್ ಪ್ರಧಾನಿ ಲೊಟೇ ಶೆರಿಂಗ್ ಅವರು ಶುಕ್ರವಾರ ಲೋಕಾರ್ಪಣೆ ಮಾಡಿದರು. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಪ್ರಧಾನಿ ಮೋದಿಯವರು ಭೂತಾನ್​ಗೆ ಭೇಟಿ ನೀಡಿದ ಸಂದರ್ಭದಲ್ಲಿ ರುಪೇ ಫೇಸ್​ ಒಂದರ ಲೋಕಾರ್ಪಣೆ ಆಗಿತ್ತು.
ಉಭಯ ರಾಷ್ಟ್ರಗಳ ನಡುವೆ ಉತ್ತಮ ದ್ವಿಪಕ್ಷೀಯ ಸಂಬಂಧವಿದ್ದು, ಭೂತಾನ್​ನ ಉಪಗ್ರಹಗಳನ್ನು ಬಾಹ್ಯಾಕಾಶ ಕಕ್ಷೆಗೆ ಸೇರಿಸಲು ಇಸ್ರೋ ಸಿದ್ದತೆ ನಡೆಸಿದೆ. ಇದೇ ರೀತಿ ಮೂರನೇ ಅಂತಾರಾಷ್ಟ್ರೀಯ ಇಂಟರ್​ನೆಟ್ ಗೇಟ್​ವೇ ಸಂಬಂಧಿಸಿದ ಒಪ್ಪಂದವನ್ನು ಭೂತಾನ್ ಬಿಎಸ್​ಎನ್​ಎಲ್​ ಜತೆಗೆ ಮಾಡಿದೆ. ಕರೊನಾ ಸಂಕಷ್ಟದಲ್ಲೂ ಭೂತಾನ್​ಗೆ ಭಾರತ ಆಸರೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಇದನ್ನೂ ಓದಿ:2025ರವರೆಗೆ ಆರ್ಥಿಕ ಸಂಕಷ್ಟ – ಆಕ್ಸ್​ಫರ್ಡ್ ಇಕನಾಮಿಕ್ಸ್ ವರದಿಯಲ್ಲಿ ಉಲ್ಲೇಖ
ಮೊದಲ ಹಂತದ ರುಪೇ ಕಾರ್ಡ್ ನಲ್ಲಿ ಭೂತಾನ್​ ಪ್ರಜೆಗಳು ಭಾರತಕ್ಕೆ ಬಂದಾಗ ಇಲ್ಲಿ ವಹಿವಾಟು ನಡೆಸುವುದಕ್ಕೆ ಅನುಕೂಲವಾಗುವಂತೆ ರೂಪಿಸಲಾಗಿತ್ತು. ಈಗ ಎರಡನೇ ಹಂತದ ರೂಪೇ ಕಾರ್ಡ್​ನಲ್ಲಿ ಅವರು ಭೂತಾನದ ಕಾರ್ಡ್​ ಮೂಲಕವೂ ರುಪೇ ನೆಟ್​ವರ್ಕ್​ನಲ್ಲಿ ವಹಿವಾಟು ನಡೆಸಬಹುದಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್)
ಚುನಾವಣಾ ಕಣಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ‘ಕೊರೊನಾ’ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
