ಲಖನೌ:ಮೋದಿಯವರ ಜೀವನವನ್ನು ಕಂಡು ಅದರ ಸ್ಫೂರ್ತಿಯಿಂದ ಚಾಯ್ ಅಂಗಡಿಯೊಂದನ್ನು ತೆರೆದಿದ್ದ ವೃದ್ಧನನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಕೊಲೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಬಲರಾಮ್ ಸಂಚನ್ ಹೆಸರಿನ ವೃದ್ಧ ಕಾನ್ಪುರದ ಘತಂಪುರ ಕೊಟ್ವಾಲಿಯ ಜಹನ್‌ಬಾದ್ ರಸ್ತೆಯ ಬಳಿ ಟೀ ಶಾಪ್​ ಅನ್ನು ತೆರೆದಿದ್ದ. ಹಗಲೆಲ್ಲ ಟೀ ಮಾರಾಟ ಮಾಡುತ್ತಿದ್ದ ಆತ ರಾತ್ರಿ ವೇಳೆ ಅಲ್ಲೇ ಇದ್ದ ಕಾಟ್​ನಲ್ಲಿ ಮಲಗುತ್ತಿದ್ದ. ಅಂಗಡಿಯಿಂದ ಬಂದ ಹಣವನ್ನು ಕುಟುಂಬಕ್ಕಾಗಿ ಬಳಸಿಕೊಳ್ಳುತ್ತಿದ್ದ. ಅದಷ್ಟೇ ಅಲ್ಲದೆ ಬಿಜೆಪಿ ಕಾರ್ಯಕ್ರಮಗಳಲ್ಲಿ ವೇದಿಕೆ ಮೇಲೆ ನಿಂತು ಹಾಡು ಹೇಳುವ ಅವಕಾಶವೂ ಆತನಿಗೆ ಆಗಾಗ ಸಿಗುತ್ತಿತ್ತಂತೆ.
ಆತನ ಅಂಗಡಿಗೆ ಹತ್ತಿರದಲ್ಲಿದ್ದ ರೆಸಾರ್ಟ್ ಒಂದರಲ್ಲಿ ಅಖಂಡ ರಾಮಾಯಣ ಕಾರ್ಯಕ್ರಮವನ್ನು ಮಂಗಳವಾರ ರಾತ್ರಿ ಆಯೋಜಿಸಲಾಗಿತ್ತಂತೆ. ಕಾರ್ಯಕ್ರಮದಲ್ಲಿ ಬಲರಾಮ್​ ಹಾಡಿ, ಅಲ್ಲಿಂದ ವಾಪಸು ಬಂದು ಅಂಗಡಿಯಲ್ಲಿದ್ದ ಕಾಟ್​ನಲ್ಲಿ ಮಲಗಿದ್ದ. ರಾತ್ರಿ ಮಲಗಿದ್ದ ಆತನ ಮೇಲೆ ಯಾರೋ ದುಷ್ಕರ್ಮಿಗಳು ದಾಳಿ ನಡೆಸಿದ್ದು ಕೊಲೆ ಮಾಡಿದ್ದಾರೆ. ಆರೋಪಿಗಳು ಮೃತನ ತಲೆಯ ಮೇಲೆ ಇಟ್ಟಿಗೆ ಹಾಕಿ ಕೊಲೆ ಮಾಡಿರುವುದಾಗಿ ಸ್ಥಳೀಯರೊಬ್ಬರು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)
ಮಹಾರಾಷ್ಟ್ರದಲ್ಲಿ ಏಕಾಏಕಿ ಏರಿದ ಕರೊನಾ ಮೃತರ ಸಂಖ್ಯೆ! ಒಂದೇ ದಿನದಲ್ಲಿ 3656 ಸಾವಿನ ವರದಿ

8 ಕಾಲು, 2 ಸೊಂಟವಿರುವ ಮೇಕೆಯ ಜನನ! ವೈರಲ್ ಆಯ್ತು ಫೋಟೋ

ಅರೆಸ್ಟ್ ಆಗಿರುವ ಗಂಡನಿಂದ ಶಿಲ್ಪಾ ಶೆಟ್ಟಿ ಸಿನಿಮಾಕ್ಕೂ ಎಫೆಕ್ಟ್?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
