ನವದೆಹಲಿ:ಎಪ್ಪತ್ತೇಳನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಕೆಂಪು ಕೋಟೆಯಲ್ಲಿ ಮಂಗಳವಾರ ಬೆಳಗ್ಗೆ 7.30ಕ್ಕೆ ರಾಷ್ಟ್ರಧ್ವಜಾರೋಹಣ ನೆರವೇರಿಸಿ ದಾಖಲೆ ನಿರ್ವಿುಸಲಿದ್ದಾರೆ. ಸತತ 10 ಬಾರಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ದಾಖಲೆ ಸರಿಗಟ್ಟಲಿದ್ದಾರೆ. ಅತಿ ಹೆಚ್ಚು ಬಾರಿ ಧ್ವಜಾರೋಹಣ ನೆರವೇರಿಸಿದ ಮೂರನೆಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಭಾಜನರಾಗಲಿದ್ದಾರೆ.
ಇಲ್ಲಿಯವರೆಗೆ, ಭಾರತ 15 ಪ್ರಧಾನಿಗಳನ್ನು ಕಂಡಿದೆ. ಈ 15 ಪ್ರಧಾನಿಗಳ ಪೈಕಿ 13 ಮಂದಿ ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿ ದ್ದಾರೆ. ಗುಲ್ಜಾರಿಲಾಲ್ ನಂದಾ ಮತ್ತು ಚಂದ್ರಶೇಖರ್ ಅವರಿಗೆ ಸ್ವಾತಂತ್ರ್ಯ ದಿನದಂದು ತ್ರಿವರ್ಣ ಧ್ವಜವನ್ನು ಹಾರಿಸುವ ಅವಕಾಶ ಸಿಗಲಿಲ್ಲ. ಗರಿಷ್ಠ ಬಾರಿ ಧ್ವಜ ಹಾರಿಸಿದ ದಾಖಲೆ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಹೆಸರಿನಲ್ಲಿದೆ. ಆಗಸ್ಟ್ 15, 1947ರಂದು ಅವರು ಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದ್ದರು.
ನಿಧನರಾಗುವ ಮುನ್ನ ಮೇ 27, 1964ರಲ್ಲಿ ಧ್ವಜ ಹಾರಿಸಿದರು. ಈ ಅವಧಿಯಲ್ಲಿ ಅವರು ಸತತ 17 ಬಾರಿ ರಾಷ್ಟ್ರಧ್ವಜವನ್ನು ಹಾರಿಸಿದರು. ನೆಹರು ಅವರ ಪುತ್ರಿ ಇಂದಿರಾ ಗಾಂಧಿ ಅವರು ರಾಷ್ಟ್ರಧ್ವಜವನ್ನು ಅತಿ ಹೆಚ್ಚು ಬಾರಿ ಹಾರಿಸಿದ ಎರಡನೇ ದಾಖಲೆಯನ್ನು ಹೊಂದಿದ್ದಾರೆ. ಅವರು 16 ಬಾರಿ ಧ್ವಜಾರೋಹಣ ಮಾಡಿದ್ಧಾರೆ. ಆದರೆ, ನೆಹರು ರೀತಿಯಲ್ಲಿ ಇಂದಿರಾ ಅವರು ನಿರಂತರವಾಗಿ ಧ್ವಜಾರೋಹಣ ಮಾಡಲಿಲ್ಲ. ಅಂದಾಜು ನಾಲ್ಕು ವರ್ಷಗಳ ಅಂತರ ಇತ್ತು. ಪ್ರಧಾನಿಯಾಗಿ ತಮ್ಮ ಮೊದಲ ಅವಧಿಯಲ್ಲಿ ಇಂದಿರಾ ಅವರು ಜನವರಿ 24, 1966 ರಿಂದ ಮಾರ್ಚ್ 24, 1977ರವರೆಗೆ ಸತತ 11 ಬಾರಿ ರಾಷ್ಟ್ರಧ್ವಜಾರೋಹಣ ಮಾಡಿದರು. ನಂತರ ಜನವರಿ 14, 1980 ಮತ್ತು ಅಕ್ಟೋಬರ್ 31, 1984ರ ನಡುವಿನ ಅವಧಿಯಲ್ಲಿ ಸತತ ಐದು ಬಾರಿ ಧ್ವಜಾರೋಹಣ ಮಾಡಿದರು.
ತಿರಂಗಾ ಹಾರಿಸಿದ ಉಗ್ರನ ಸೋದರ:ಜಮ್ಮು-ಕಾಶ್ಮೀರದ ಸೋಪೋರ್​ನಲ್ಲಿ ಉಗ್ರನ ಸಹೋದರನೊಬ್ಬ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಹರ್ ಘರ್ ತಿಜಮ್ಮು-ಕಾಶ್ಮೀರದ ಸೋಪೋರ್ ್ರರ್ಣ ಧ್ವಜ ಹಾರಿಸುವ ಮೂಲಕ ಹಾರಿಸುವ ಹರ್ ಘರ್ ತಿರಂಗಾ ಅಭಿಯಾನಕ್ಕೆ ಬೆಂಬಲ ನೀಡಿದ್ದಾನೆ. ತ್ರಿವರ್ಣ ಧ್ವಜ ಹಾರಿಸಿದ ವಿಡಿಯೋ ವೈರಲ್ ಆಗಿದೆ.
ಉಗ್ರರ ಬೆದರಿಕೆ, ಕಟ್ಟೆಚ್ಚರ:ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಎ-ತೊಯ್ಬಾ (ಎಲ್​ಇಟಿ) ಮತ್ತು ಜೈಷ್-ಎ-ಮೊಹಮ್ಮದ್ (ಜೆಇಎಂ) ಆಗಸ್ಟ್ 15ರಂದು ಭದ್ರತಾಪಡೆಗಳು ಮತ್ತು ರೈಲ್ವೆ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಮೇ ತಿಂಗಳಲ್ಲಿ ಎಲ್​ಇಟಿ ಸಂಘಟನೆಗೆ ಸಂಬಂಧಿಸಿದ ಪಾಕ್ ಮೂಲದ ವ್ಯಕ್ತಿಯೊಬ್ಬ ದೆಹಲಿಯ ಪ್ರಮುಖ ರಸ್ತೆಗಳು, ರೈಲ್ವೆ ನಿಲ್ದಾಣಗಳು ಮತ್ತು ದೆಹಲಿ ಪೊಲೀಸ್​ನ ಕಚೇರಿಗಳು ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ ಎನ್​ಐಎ ಕೇಂದ್ರ ಕಚೇರಿ ಸೇರಿದಂತೆ ದೆಹಲಿಯ ಕೆಲವು ಸ್ಥಳಗಳ ಮೇಲೆ ಕಣ್ಣಿಡುವಂತೆ ತನ್ನ ಸಹಚರರಿಗೆ ನಿರ್ದೇಶನ ನೀಡಿದ್ದರು ಎಂಬುದು ಇನ್ನೊಂದು ಬೇಹುಗಾರಿಕ ವರದಿಯಿಂದ ತಿಳಿದುಬಂದಿದೆ. ದೆಹಲಿ ಪೊಲೀಸರು ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದಾರೆ. ನಗರದಲ್ಲಿ ಗಸ್ತು ಮತ್ತು ವಾಹನಗಳ ತಪಾಸಣೆಯನ್ನು ತೀವ್ರಗೊಳಿಸಿದ್ದಾರೆ. 10,000 ಪೋಲಿಸ್ ಸಿಬ್ಬಂದಿ ನಿಗಾ ಇರಿಸುವುದರ ಜೊತೆಗೆ, 1,000 ಮುಖ ಗುರುತಿಸುವಿಕೆ ಕ್ಯಾಮೆರಾಗಳು, ಡ್ರೋನ್ ನಿಗ್ರಹ ವ್ಯವಸ್ಥೆಗಳು ಮತ್ತು ಇತರ ಕಣ್ಗಾವಲು ಕ್ರಮಗಳನ್ನು ಕೆಂಪು ಕೋಟೆಯಲ್ಲಿ ನಿಯೋಜಿಸಲಾಗಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಹರ್ವಿಂದರ್ ಸಿಂಗ್ ಅಲಿಯಾಸ್ ರಿಂಡಾ ಮತ್ತು ಕೆನಡಾ ಮೂಲದ ದರೋಡೆಕೋರ ಗೋಲ್ಡಿ ಬ್ರಾರ್ ಅವರ ಐವರು ಸಹವರ್ತಿಗಳನ್ನು ಪಂಜಾಬ್ ಪೊಲೀಸರು ಮತ್ತು ಕೇಂದ್ರ ಭದ್ರತಾ ಸಂಸ್ಥೆಯವರು ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನ ಬಂಧಿಸಿದ್ದಾರೆ.
ಶೋಷಿತರ ಹಿತ ರಕ್ಷಣೆಗೆ ಮುಮು ಕರೆ:ಸಾಮಾಜಿಕ ಸೌಹಾರ್ದತೆ ಕಾಪಾಡಲು ಮತ್ತು ಶೋಷಿತರ ಹಿತ ರಕ್ಷಣೆಗೆ ಆದ್ಯತೆ ನೀಡುವಂತೆ ರಾಷ್ಟ್ರಪತಿ ದ್ರೌಪದಿ ಮುಮು ಸೋಮವಾರ ಪ್ರತಿಪಾದಿಸಿದ್ದಾರೆ. ವೈವಿಧ್ಯಮಯ ಅಸ್ಮಿತೆಗಳಿದ್ದರೂ ಎಲ್ಲ ಭಾರತೀಯ ಪ್ರಜೆಗಳು ಸಮಾನರು. ಎಲ್ಲರಿಗೂ ಸಮಾನ ಅವಕಾಶ ಮತ್ತು ಹಕ್ಕುಗಳಿವೆ. ಜನರು ಸೌಹಾರ್ದತೆ ಮತ್ತು ಭ್ರಾತೃತ್ವ ಭಾವನೆಯೊಂದಿಗೆ ಮುನ್ನಡೆಯ ಬೇಕಿದೆ ಎಂದು 77ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಮುಮು ಹೇಳಿದರು. ಜಾತಿ, ಪಂಥ, ಭಾಷೆ, ಪ್ರದೇಶ, ಕುಟುಂಬ, ಉದ್ಯೋಗಗಳಲ್ಲಿ ಭಿನ್ನತೆಯಿದ್ದರೂ ಎಲ್ಲರಿಗೂ ‘ಭಾರತದ ಪ್ರಜೆ’ ಎಂಬ ‘ಒಂದೇ ಅಸ್ಮಿತೆಯಿರುತ್ತದೆ’ ಎಂದು ರಾಷ್ಟ್ರಪತಿ ಅಭಿಪ್ರಾಯಪಟ್ಟರು. ಸಮಾನ ಹಕ್ಕುಗಳೊಂದಿಗೆ ಸಮಾನ ಕರ್ತವ್ಯಗಳನ್ನು ಪ್ರತಿಯೊಬ್ಬರೂ ನಿಭಾಯಿಸಬೇಕಾಗಿದೆ ಎಂದರು.
ತಿರಂಗಾಕ್ಕೆ ಕಾಶ್ಮೀರದಲ್ಲಿ ವ್ಯಾಪಕ ಬೆಂಬಲ:ಜಮ್ಮು-ಕಾಶ್ಮೀರದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸಾಮಾನ್ಯವಾಗಿ ಎರಡ್ಮೂರು ದಿನ ಅಂಗಡಿ ಮುಚ್ಚಿರುತ್ತಿತ್ತು. ಆದರೆ, ಈ ಸಾರಿ ಹರ್ ಘರ್ ತಿರಂಗಾಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಎಸ್​ಕೆಐಸಿಸಿಯಿಂದ ದಾಲ್ ಸರೋವರದವರೆಗೂ ನಡೆದ ತಿರಂಗಾ ರ್ಯಾಲಿಗೆ ಚಾಲನೆ ನೀಡಿದರು. ಕೆಲವು ಪ್ರತ್ಯೇಕತಾವಾದಿಗಳು ಈ ರ್ಯಾಲಿಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಜೆಕೆಎಲ್​ಎಫ್​ನ ಜಾವಿದ್ ಮೀರ್, ಕಾಶ್ಮೀರ್ ಬಾರ್ ಅಸೋಷಿಯೇಷನ್​ನ ಗಲಾಂ ನಬಿ ಶಹೀನ್ ಭಾಗಿಯಾಗಿದ್ದು ಅಚ್ಚರಿಯ ಬೆಳವಣಿಗೆ.
ಪೊಲೀಸ್ ಪದಕಗಳಿಗೆ ಆಯ್ಕೆ:ಸಿಆರ್​ಪಿಎಫ್ ಅಧಿಕಾರಿಯೊಬ್ಬರು ರಾಷ್ಟ್ರಪತಿಗಳ ಪೊಲೀಸ್ ಶೌರ್ಯ ಪದಕಕ್ಕೆ ಭಾಜನರಾದ ಏಕೈಕ ವ್ಯಕ್ತಿಯಾಗಿ ದ್ದಾರೆ. ಶೌರ್ಯ, ವಿಶಿಷ್ಟ ಸೇವೆ ಮತ್ತು ಪ್ರತಿಭಾನ್ವಿತ ಸೇವೆಗಾಗಿ ಪೊಲೀಸ್ ಪದಕಗಳಿಗೆ ಸರ್ಕಾರವು ಸೋಮವಾರ 954 ಸಿಬ್ಬಂದಿಯನ್ನು ಆಯ್ಕೆ ಮಾಡಿದೆ. ಶೌರ್ಯಕ್ಕಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕಕ್ಕೆ ಸಿಆರ್​ಪಿಎಫ್​ನ ಲೌಕ್ರಾಮ್್ಪಾಮ್ ಇಬೊಮ್ಚಾ ಸಿಂಗ್ ಅವರೊಬ್ಬರೇ ಆಯ್ಕೆಯಾಗಿದ್ದಾರೆ. 229 ಜನರು ಶೌರ್ಯಕ್ಕಾಗಿ ಪೊಲೀಸ್ ಪದಕ, 82 ಮಂದಿ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕ ಮತ್ತು 642 ಜನರು ಪ್ರತಿಭಾನ್ವಿತ ಸೇವೆಗಾಗಿ ಪೊಲೀಸ್ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಪ್ರಧಾನಿ ಶ್ರದ್ಧಾಂಜಲಿ:ದೇಶ ವಿಭಜನೆಯ ವೇಳೆ ಜನರು ಅನುಭವಿಸಿದ ನೋವುಗಳನ್ನು ನೆನಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ, ಈ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ದೇಶ ವಿಭಜನೆಯಲ್ಲಿ ಪ್ರಾಣ ತ್ಯಾಗ ಮಾಡಿದವರನ್ನು ಸ್ಮರಿಸುವ ಸಂದರ್ಭವೇ ವಿಭಜನೆಯ ಸಂಸ್ಮರಣಾ ದಿನವಾಗಿದೆ. ಎಲ್ಲರಿಗೂ ನಾನು ನಮಸ್ಕರಿಸುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ತಿಳಿಗೇಡಿಗಳಿಂದ ಭುಗಿಲೆದ್ದ ದ್ವೇಷ ಹಿಂಸಾಚಾರದಲ್ಲಿ ಲಕ್ಷಾಂತರ ಸೋದರ- ಸೋದರಿಯರು ಸ್ಥಳಾಂತರ ಗೊಳ್ಳಬೇಕಾಯಿತು. ಆ ಸಂದರ್ಭದಲ್ಲಿ ಅನೇಕರು ಪ್ರಾಣ ಕಳೆದುಕೊಂಡರು. ಈ ದಿನವು ಬಲವಂತವಾಗಿ ವಲಸೆ ಬಂದವರ ಸಂಕಷ್ಟ ಮತ್ತು ಹೋರಾಟದ ಸ್ಮರಣಾರ್ಥವೂ ಆಗಿದೆ ಎಂದಿದ್ದಾರೆ.
ಇನ್ನೂ ಹೆಚ್ಚು ಹೆಚ್ಚು ಪ್ರೀತಿಸುವ ಹೃದಯ ನನಗೆ ಕೊಡೆ ತಾಯಿ ನನಗೆ ಕೊಡೆ: ಹೈಕೋರ್ಟ್​​ ತಡೆ ಸಿಗುತ್ತಿದ್ದಂತೆ ಉಪೇಂದ್ರ ಫಸ್ಟ್ ರಿಯಾಕ್ಷನ್​

ಟೆಲಿಗ್ರಾಮ್​ಗೆ ದಶಕದ ಸಂಭ್ರಮ: ಇವತ್ತಿನಿಂದಲೇ ಹಂತಹಂತವಾಗಿ ಎಲ್ಲ ಬಳಕೆದಾರರಿಗೆ ಹೊಸದೊಂದು ಫೀಚರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + eight =
Remember me
