ವಾರಾಣಸಿ:ವಾರಣಾಸಿಯ ಸಂಸದರೂ ಆಗಿರುವ ಪ್ರಧಾನಿ ನರೇಂದ್ರ ಮೋದಿ ಕ್ಷೇತ್ರದ ವ್ಯಕ್ತಿಯೊಬ್ಬರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ವಾರಾಣಸಿಯ ‘ಡೋಮ್​ ರಾಜಾ’ ಎಂದೇ ಕರೆಯಲಾಗುತ್ತಿದ್ದ 55 ವರ್ಷದ ಜಗದೀಶ್​ ಚೌಧರಿ ಅವರ ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್​ ಮಾಡಿದ್ದಾರೆ. ಪವಿತ್ರ ನಗರದ ಅವಿಚ್ಛಿನ್ನ ಸಂಪ್ರದಾಯದ ಪ್ರತಿನಿಧಿಯಾಗಿದ್ದರು ಜಗದೀಶ್​ ಚೌಧರಿ ಎಂದು ಹೇಳಿದ್ದಾರೆ.
ಇದನ್ನೂ ಓದಿ;ವಿಡಿಯೋ: 10 ಸಾವಿರ ಲೀಟರ್​ ಕೋಕಾ-ಕೋಲಾ ಬ್ಲಾಸ್ಟ್​ ಆದರೆ ಹೇಗಿರುತ್ತೆ…? 4 ವರ್ಷಗಳ ಶ್ರಮವಿದು…!
ಇಷ್ಟಕ್ಕೂ ಯಾರೂ ಈ ಜಗದೀಶ್​ ಚೌಧರಿ, ಇವರನ್ನೇಕೆ ಡೋಮ್​ ರಾಜಾ ಎಂದು ಕರೆಯಲಾಗುತ್ತದೆ ಎಂಬುದನ್ನು ನೋಡುವುದಾದರೆ…, ವಾರಾಣಸಿಯ ವಿವಿಧ ಘಾಟ್​​ಗಳಲ್ಲಿ ಅಂತ್ಯಕ್ರಿಯೆಗಳನ್ನು ನಡೆಸಲಾಗುತ್ತದೆ. ಈ ಅಂತ್ಯಕ್ರಿಯೆ ನಡೆಸುವವರ ಮುಖ್ಯಸ್ಥರಾಗಿದ್ದವರು ಈ ಜಗದೀಶ್​ ಚೌಧರಿ. ಈ ಕಾರಣಕ್ಕೆ ಇವರನ್ನು ಡೋಮ್​ ರಾಜಾ ಎಂದು ಕರೆಯಲಾಗುತ್ತದೆ.
ಮೋದಿ ಸಂತಾಪ ಸೂಚಿಸುವದಕ್ಕೆ ಇನ್ನೊಂದು ಕಾರಣವೂ ಇದೆ. ಮೋದಿ ವಾರಾಣಸಿಯಿಂದ ಲೋಕಸಭಾ ಕ್ಷೇತ್ರಕ್ಕೆ ಸ್ಫರ್ಧೆಗೆ ಇಳಿದಾಗ ಅವರ ನಾಮಪತ್ರದಲ್ಲಿ ಡೋಮ್​ರಾಜಾ ಕೂಡ ಒಬ್ಬ ಸೂಚಕರಾಗಿದ್ದರು.
ಇದನ್ನೂ ಓದಿ;ಮಾವನ ಜತೆ ಸೇರಿ ಡಕಾಯಿತಿ ಮಾಡಿದ ಸಬ್​ ಇನ್​ಸ್ಪೆಕ್ಟರ್; 26.50 ಲಕ್ಷ ರೂ. ದರೋಡೆ ಮಾಡಿದ್ದವರ ಸೆರೆ
ಡೋಮ್​ ರಾಜಾ ಎನ್ನುವುದು ಬಹುಮುಖ್ಯ ಗೌರವವೂ ಆಗಿದೆ. ಜಗದೀಶ್​ ಚೌಧರಿ ಅವರಿಗೆ ವಾರಾಣಸಿಯ ಇನ್ನೊಂದು ಹೆಸರಾದ ಕಾಶಿಯ ಸಾಂಸ್ಕೃತಿಕ ಪರಂಪರೆಯಲ್ಲಿ ಪ್ರಮುಖರಾಗಿದ್ದಾರೆ. ಜೀವನದುದ್ದಕ್ಕೂ ಡೋಮ್​ ರಾಜಾ ಇಲ್ಲಿನ ಸಾಮಾಜಿಕ ಸೌಬಾರ್ದತೆಗಾಗಿ ಶ್ರಮಿಸಿದ್ದಾರೆ ಎಂದು ಮೋದಿ ಬಣ್ಣಿಸಿದ್ದಾರೆ.
ಇನ್ನೊಂದು ಮುಖ್ಯ ವಿಷಯವೆಂದರೆ, ಅಂತ್ಯಕ್ರಿಯೆ ನಡೆಸಲಾಗುವ ಮಣಿಕರ್ಣಿಕಾ ಹಾಗೂ ಹರಿಶ್ಚಂದ್ರ ಘಾಟ್​ಗಳಲ್ಲಿ ಬೆಂಕಿ ನಂದದಂತೆ ನೋಡಿಕೊಳ್ಳುವುದು ಇವರ ಕುಟುಂಬದ ಕಾಯಕವಾಗಿತ್ತು. ಈ ಬೆಂಕಿಯಿಂದಲೇ ಇವರ ಮನೆಗಳಲ್ಲಿ ಆಹಾರ ತಯಾರಿಸಲಾಗುತ್ತದೆ ಎಂದು ಹೇಳಲಾಗುತ್ತದೆ.
वाराणसी के डोम राजा जगदीश चौधरी जी के निधन से अत्यंत दुख पहुंचा है। वे काशी की संस्कृति में रचे-बसे थे और वहां की सनातन परंपरा के संवाहक रहे। उन्होंने जीवनपर्यंत सामाजिक समरसता के लिए काम किया। ईश्वर उनकी आत्मा को शांति प्रदान करे और परिजनों को इस पीड़ा को सहने की शक्ति दे।
— Narendra Modi (@narendramodi)August 25, 2020

ಮೆಟ್ರೋ ರೈಲು ಶುರುವಾಗುತ್ತೆ, ಶಾಲಾ- ಕಾಲೇಜುಗಳು ಮುಚ್ಚಿರುತ್ತೆ; ಅನ್​ಲಾಕ್​ 4.0 ಹೀಗಿರುತ್ತೆ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 4 =
Remember me
