ನವದೆಹಲಿ:ಇಂಡೋನೇಷ್ಯಾದಲ್ಲಿ ನಡೆಯಲಿರುವ 17ನೇ ಜಿ-20 ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಇಂದು(ಸೋಮವಾರ) ಇಂಡೋನೇಷ್ಯಾಗೆ ತೆರಳಿದ್ದಾರೆ. ಇಂಡೋನೇಷ್ಯಾ ರಾಜಧಾನಿ ಬಾಲಿಯಲ್ಲಿ ಇಳಿದ ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತವೇ ದೊರತಿದೆ.
ಮೂರು ದಿನಗಳ ಇಂಡೋನೇಷ್ಯಾ ಭೇಟಿ ವೇಳೆ ಸುಮಾರು 10 ಜಾಗತಿಕ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇಂತಹ ಮಹತ್ವಪೂರ್ಣ ಕಾರ್ಯಕ್ರಮಕ್ಕೆ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮೋದಿಗೆ ಇಂಡೋನೆಷ್ಯಾ ಸರ್ಕಾರ ಅಲ್ಲಿನ ಸಾಂಸ್ಕೃತಿಕ ಪದ್ಧತಿ ಪ್ರಕಾರ ಹೂಮಳೆ ಸುರಿಸಿ ಬರ ಮಾಡಿಕೊಂಡಿದೆ.
ಬಾಲಿಯಲ್ಲಿ ಇಳಿದ ಕೂಡಲೇ ಪ್ರಧಾನಿ ಇಂಡೋನೆಷ್ಯಾದ ಬಹಾಸಾ ಭಾಷೆಯಲ್ಲಿ ಟ್ವೀಟ್​ ಮಾಡಿದ್ದು ‘ಹಲೊ ಇಂಡೋನೆಷ್ಯಾ. ಈಗ ಜಿ-20 ಶೃಂಗ ಸಭೆಯಲ್ಲಿ ಭಾಗವಹಿಸಲು ಬಾಲಿಗೆ ಬಂದಿಳಿದಿದ್ದೇನೆ. ಜಾಗತಿಕ ಸಮಸ್ಯೆಗಳ ಕುರಿತು ವಿವಧ ದೇಶಗಳ ನಾಯಕರೊಂದಿಗೆ ಮಾತುಕತೆ ನಡೆಸಲು ಕಾತುರನಾಗಿದ್ದೇನೆ’ ಎಂದು ಬರೆದಿದ್ದಾರೆ.
ಸುಮಾರು 45 ಗಂಟೆಗಳ ಕಾಲ ಬಾಲಿಯಲ್ಲಿ ಇರುವ ಮೋದಿ ಜಿ-20 ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಆಹಾರ ಮತ್ತು ಇಂಧನ ಭದ್ರತೆ, ಡಿಜಿಟಲ್​ ಪರಿವರ್ತನೆ ಮತ್ತು ಆರೋಗ್ಯ ಕುರಿತ ಮೂರು ಮಹತ್ವದ ಅಧಿವೇಶನಗಳೂ ಸೇರಿವೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್​ ಕ್ವತ್ರಾ ತಿಳಿಸಿದ್ದಾರೆ.(ಏಜೆನ್ಸೀಸ್​)
Halo Indonesia. Telah tiba di Bali untuk ambil bagian dalam helatan KTT G20. Saya berharap dapat berdiskusi dengan para pemimpin dunia mengenai berbagai isu global.@g20orgpic.twitter.com/bmRHZj8dxt— Narendra Modi (@narendramodi)November 14, 2022
Halo Indonesia. Telah tiba di Bali untuk ambil bagian dalam helatan KTT G20. Saya berharap dapat berdiskusi dengan para pemimpin dunia mengenai berbagai isu global.@g20orgpic.twitter.com/bmRHZj8dxt
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
