ನವದೆಹಲಿ:ಮುಂದಿನ ವಾರ ಇಂಡೊನೇಷ್ಯಾದಲ್ಲಿ ಜಿ-20 ಸಭೇ ನಡೆಯಲಿದ್ದು ಪ್ರಧಾನಿ ಮೋದಿ ಅದನ್ನು ಹಿಮಾಚಲ ಪ್ರದೇಶದ ಚುನಾವಣೆಗೆ ಬಳಸಿಕೊಳ್ಳಲಿದ್ದಾರೆ.
ಇಂಡೊನೇಷ್ಯಾಗೂ ಹಿಮಾಚಲ ಪ್ರದೇಶದ ಚುನಾವಣೆಗೂ ಯಾವ ಸಂಬಂಧ ಎಂದು ಕೇಳಬಹುದು. ಸಂಬಂಧ ಇದೆ. ಮುಂದಿನ ವಾರ ನಡೆಯುವ ಜಿ-20 ಸಭೆಯಲ್ಲಿ ಜಗತ್ತಿನ ನಾಯಕರು ಸೇರಲಿದ್ದಾರೆ. ಆಗ ಭಾರತದ ಸಂಸ್ಕೃತಿಯನ್ನು ಸಾರುವ ವಸ್ತುಗಳನ್ನು ಮೋದಿ, ವಿವಿಧ ದೇಶಗಳ ನಾಯಕರಿಗೆ ಗಿಫ್ಟ್​ ಕೊಡಲಿದ್ದಾರೆ. ತರಹೇವಾರಿ ಶಾಲುಗಳು, ಜಾನಪದ ಪೇಂಟಿಂಗ್​ಗಳು, ಹಿತ್ತಾಳೆಯಿಂದ ಮಾಡಲ್ಪಟ್ಟ ಕಲಾಕೃತಿ ಹೀಗೆ ಅನೇಕ ವಸ್ತುಗಳನ್ನು ಮೋದಿ ನೀಡಲಿದ್ದಾರೆ.
ಮಜಾ ಇರೋದು ಇಲ್ಲೇ. ಈ ಎಲ್ಲಾ ವಸ್ತುಗಳನ್ನು ಮಾಡಿದವರು ಹಿಮಾಚಲ ಪ್ರದೇಶದ ಪಾರಂಪರಿಕ ಕಲಾವಿದರು. ಹಿಮಾಚಲ ಪ್ರದೇಶದ ಚುನಾವಣೆ ಹತ್ತಿರದಲ್ಲೇ ಇರುವಾಗ ಈ ನಡೆ ಇಟ್ಟಿದ್ದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ. ಈ ನಡೆ ಹಿಮಾಚಲ ಪ್ರದೇಶದ ಜನರ ಮನಸ್ಸನ್ನು ತಟ್ಟುತ್ತಾ? ಬಿಜೆಪಿಯನ್ನು ಗೆಲ್ಲಿಸುತ್ತಾ? ಈ ಪ್ರಶ್ನೆಗಳಿಗೆ ಉತ್ತರವನ್ನು ಚುನಾವಣಾ ಫಲಿತಾಂಶವೇ ಹೇಳಬೇಕು.(ಏಜೆನ್ಸೀಸ್​)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:11 + eight =
Remember me
