ನವದೆಹಲಿ:ಗಲ್ವಾನ್​ ಸಂಘರ್ಷದ ಬೆನ್ನಲ್ಲೇ ಚೀನಾದ 59 ಆ್ಯಪ್​ ಬ್ಯಾನ್​ ಮಾಡಿದ್ದ ಕೇಂದ್ರ ಸರ್ಕಾರ ಸೋಮವಾರ ಮತ್ತೆ 47 ಆ್ಯಪ್​ಗಳನ್ನು ಬ್ಯಾನ್​ ಮಾಡುವ ಮೂಲಕ ಮತ್ತೊಮ್ಮೆ ಶಾಕ್​ ನೀಡಿದೆ. ಇದರ ಬೆನ್ನಲ್ಲೇ ಟ್ವೀಟ್​ ಮಾಡಿರುವ ಕಾಂಗ್ರೆಸ್​ ವಕ್ತಾರ ಹಾಗೂ ಸುಪ್ರೀಂಕೋರ್ಟ್​ ವಕೀಲ ಅಭಿಷೇಕ್​ ಮನು ಸಿಂಘ್ವಿ ಕೇಂದ್ರ ಸರ್ಕಾರದ ವಿರುದ್ಧ ಕಿಡಕಾರಿದ್ದಾರೆ.
ಇದನ್ನೂ ಓದಿ:VIDEO| ಒಳ್ಳೆಯವನಂತೆ ನಟಿಸಿ ಮಹಿಳೆಯರಿಗೆ ಮೋಸ: ಸರ್ಕಾರಿ ವೈದ್ಯನ ವಿರುದ್ಧ ತಿರುಗಿಬಿದ್ದ ಪತ್ನಿ!
ಮೋದಿ ಅವರು ಪಬ್​ಜಿ ಆ್ಯಪ್​ ಅನ್ನು ಬ್ಯಾನ್​ ಮಾಡಬೇಕೆಂದು ಬಯಸಿದ್ದಾರೆ. ಆದರೆ, ಯುವಕರು ಫ್ಯಾಂಟಸಿ (ಕಲ್ಪನಾ ಲೋಕ)ಯಿಂದ ವಾಸ್ತವ ಲೋಕಕ್ಕೆ ಬಂದು ಉದ್ಯೋಗದ ಬಗ್ಗೆ ಕೇಳಿದರೆ, ಮುಂದೆ ಇದೇ ಸಮಸ್ಯೆಯಾಗಲಿದೆ ಎಂದರಿತು ಪಬ್​ಜಿ ಬ್ಯಾನ್​ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸಿಂಘ್ವಿ ಟ್ವೀಟ್​ ಮೂಲಕ ಕಾಲೆಳೆದಿದ್ದಾರೆ.
Modiji really wanted to ban PubG but realized that if the youth do not have the distractions of the fantasy world, they will ask for real world things like Jobs and that will be an issue.#pubgban
— Abhishek Singhvi (@DrAMSinghvi)July 28, 2020

ಚೀನಾ ಸಂಬಂಧಿತ 47 ಆ್ಯಪ್​ಗಳನ್ನು ಬ್ಯಾನ್​ ಮಾಡುತ್ತಿರುವುದಾಗಿ ಕೇಂದ್ರ ಸರ್ಕಾರ ಸೋಮವಾರ ಹೇಳಿತ್ತು. ಕಳೆದ ತಿಂಗಳು ಟಿಕ್​ಟಾಕ್​ ಸೇರಿದಂತೆ 59 ಆ್ಯಪ್​ಗಳನ್ನು ಸರ್ಕಾರ ನಿರ್ಬಂಧಿಸಿತ್ತು. ಇದೀಗ ಪಬ್​ಜಿ ಸೇರಿದಂತೆ ಒಟ್ಟು 250 ಆ್ಯಪ್​ಗಳ ಪಟ್ಟಿ ತಯಾರಿಸಿದ್ದು ಅವುಗಳ ಮೇಲೆ ಕೇಂದ್ರ ಸರ್ಕಾರ ಕಣ್ಣಿಟ್ಟಿದೆ.
ಇದನ್ನೂ ಓದಿ:ಡಿಸ್ಟಿಂಕ್ಷನ್​​ನಲ್ಲಿ ಪಾಸಾದ ಪಿಯು ವಿದ್ಯಾರ್ಥಿನಿಗೆ ಇಂಗ್ಲಿಷ್​ ಪರೀಕ್ಷೇಲಿ 7 ಅಂಕ: ಕನ್ಫ್ಯೂಸ್​ ಆಗ್ಬೇಡಿ ಸುದ್ದಿ ಓದಿ!
ಇನ್ನು ಪಬ್​ಜಿ ಆ್ಯಪ್​ ಗೇಮ್​ಗೆ ಸಂಬಂಧಿಸಿದ್ದು, ಇದನ್ನು ದಕ್ಷಿಣ ಕೊರಿಯಾ ಕಂಪನಿ ಅಭಿವೃದ್ಧಿ ಪಡಿಸಿದ್ದರೂ, ಬಂಡವಾಳ ಹೂಡಿರುವುದು ಮಾತ್ರ ಚೀನಾದ ಟೆನ್ಸೆಂಟ್​ ಕಂಪನಿ. ಭಾರತದಲ್ಲಿ ಹೆಚ್ಚು ಬಳಕೆಯಲ್ಲಿ ಪಬ್​ಜಿ ಆ್ಯಪ್​ ಚೀನಾಗೂ ಲಿಂಕ್​ ಇರುವುದರಿಂದ ಇದೀಗ ಅದರ ಮೇಲೂ ಕೇಂದ್ರ ಸರ್ಕಾರ ತನ್ನ ದೃಷ್ಟಿ ನೆಟ್ಟಿದೆ.(ಏಜೆನ್ಸೀಸ್​)
PHOTOS: ಟ್ರೆಂಡಿಂಗ್​ನಲ್ಲಿದೆ ಬ್ಲ್ಯಾಕ್​ ಆ್ಯಂಡ್​ ವೈಟ್ ಚಾಲೆಂಜ್​; ಸ್ಯಾಂಡಲ್​ವುಡ್​ ನಟಿಯರೂ ಮಿಂಚಿಂಗ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − eleven =
Remember me
