
ಹೈದರಾಬಾದ್/ವಿಶಾಖಪಟ್ಟಣ:ಮೋದಿಯನ್ನು ನಿಂದಿಸಿ, ಬಿಜೆಪಿಯನ್ನು ನಿಂದಿಸಿ… ಆದರೆ ನೀವು ತೆಲಂಗಾಣದ ಜನರನ್ನು ನಿಂದಿಸಿದರೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರ ಶೇಖರ್ ರಾವ್ (ಕೆಸಿಆರ್) ಮತ್ತು ಟಿಆರ್​ಎಸ್ ಪಕ್ಷಕ್ಕೆ ಪರೋಕ್ಷ ಎಚ್ಚರಿಕೆ ನೀಡಿದರು.
ತೆಲಂಗಾಣದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ, ಕಷ್ಟಪಟ್ಟು ಕೆಲಸ ಮಾಡಿದ ಮೇಲೂ ನಿಮಗೆ ಸುಸ್ತಾಗುವು ದಿಲ್ಲವೇ ಎಂದು ಹಲವರು ನನ್ನನ್ನು ಕೇಳುತ್ತಾರೆ. ನಿತ್ಯವೂ ನಾನು 2-3 ಕೆಜಿಯಷ್ಟು ಬೈಗುಳಗಳನ್ನು ತಿನ್ನುತ್ತೇನೆ. ಹೀಗಾಗಿ ನನಗೆ ಸುಸ್ತಾಗುವುದಿಲ್ಲ. ಈ ಬೈಗುಳಗಳನ್ನು ಧನಾತ್ಮಕವಾಗಿ ಸ್ವೀಕರಿಸುವುದ ರಿಂದ ಅವೇ ನನ್ನಲ್ಲಿ ಶಕ್ತಿ ತುಂಬುತ್ತವೆ ಎಂದಿದ್ದಾರೆ.
ಕಳೆದ 20-22 ವರ್ಷಗಳಲ್ಲಿ ನಾನು ಎಲ್ಲಾ ರೀತಿಯ ನಿಂದನೆಗಳನ್ನು ಕೇಳಿದ್ದೇನೆ. ನಿಂದಿಸುವವರನ್ನು ಅವರನ್ನು ನೋಡಿ ನಕ್ಕುಬಿಡಿ. ಅವುಗಳನ್ನು ಕೇಳುತ್ತಾ ಆರಾಮದಿಂದ ಚಹಾ ಕುಡಿಯಿರಿ, ಏಕೆಂದರೆ ಮರುದಿನ ಬೆಳಗ್ಗೆ ಕಮಲ ಅರಳಲಿದೆ ಅಲ್ಲವೇ ಎಂದು ಮೋದಿ ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ.
ಕೆಸಿಆರ್ ಕುಟುಂಬ ರಾಜಕಾರಣದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿ, ಭ್ರಷ್ಟಾಚಾರ, ಕುಟುಂಬ ರಾಜಕೀಯಕ್ಕೆ ಜನ ಉತ್ತರ ನೀಡಲಿದ್ದಾರೆ. ರಾಜ್ಯಕ್ಕೆ ಕುಟುಂಬವೊಂದಕ್ಕೆ ಸೀಮಿತವಾದ ಸರ್ಕಾರ ಬೇಕಿಲ್ಲ. ಜನ ಹಿತಾಸಕ್ತಿಯ ಸರ್ಕಾರ ಬೇಕಿದೆ ಎಂದು ಮೋದಿ ಹೇಳಿದರು. ರಾಜ್ಯದಲ್ಲಿ ಕೇಂದ್ರದ ಅಭಿವೃದ್ಧಿ ಯೋಜನೆಗಳಿಗೆ ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದ ಪ್ರಧಾನಿ,. ಕೇಂದ್ರದ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ರಾಜ್ಯ ಸಮಸ್ಯೆ ಸೃಷ್ಟಿಸಿದೆ ಎಂದು ಕಿಡಿಕಾರಿದರು.
ತೆಲಂಗಾಣವು ಮಾಹಿತಿ ತಂತ್ರಜ್ಞಾನದ ಕೇಂದ್ರ. ಆದರೆ ಇಲ್ಲಿ ಮೂಢನಂಬಿಕೆಯನ್ನು ಉತ್ತೇಜಿಸಲಾಗುತ್ತಿದೆ. ಎಲ್ಲಿ ವಾಸ್ತವ್ಯ ಹೂಡಬೇಕು, ಕಚೇರಿ ಸ್ಥಳ, ಯಾರನ್ನು ಮಂತ್ರಿಯಾಗಿ ಮಾಡಬೇಕು ಯಾರನ್ನು ಕೈಬಿಡಬೇಕು ಸೇರಿ ಎಲ್ಲಾ ವಿಷಯಗಳನ್ನು ಮೂಢ ನಂಬಿಕೆಯ ಆಧಾರದಲ್ಲಿ ತೆಗೆದುಕೊಳ್ಳಲಾಗುತ್ತಿದೆ ಎಂದು ಕೆಸಿಆರ್ ನಡೆಯನ್ನು ವ್ಯಂಗ್ಯ ಮಾಡಿದರು.
ಯೋಜನೆಗಳಿಗೆ ಚಾಲನೆ: ವಿಶಾಖಪಟ್ಟಣದ ಆಂಧ್ರ ವಿಶ್ವವಿದ್ಯಾನಿಲಯ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ 15,233 ಕೋಟಿ ರೂ. ಮೌಲ್ಯದ ಮೂಲಸೌರ್ಕಯ, ರಸ್ತೆ ನಿರ್ವಣ, ಒಂಬತ್ತು ಯೋಜನೆಗಳಿಗೆ ಆನ್​ಲೈನ್ ಮುಖಾಂತರ ಚಾಲನೆ ನೀಡಿದರು.
ವಿಶಾಖಪಟ್ಟಣ ಮೀನುಗಾರಿಕಾ ಬಂದರು ಆಧುನೀಕರಣಕ್ಕೆ ಚಾಲನೆ ನೀಡಿದ ಪ್ರಧಾನಿ, ಬಂದರಿಗೆ ವಿಶೇಷ ರಸ್ತೆ, ಸ್ಥಳೀಯ ರೈಲು ನಿಲ್ದಾಣವನ್ನು ಆಧುನೀಕರಿಸಲಾಗುತ್ತಿದೆ. ರಾಯಪುರ-ವಿಶಾಖಪಟ್ಟಣ ಆರ್ಥಿಕ ಕಾರಿಡಾರ್​ನ ಅಭಿವೃದ್ಧಿಯು ಈ ಪ್ರದೇಶದಲ್ಲಿ ಆರ್ಥಿಕತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದರು. ಆಂಧ್ರಪ್ರದೇಶ ರಾಜ್ಯಪಾಲ ವಿಶ್ವಭೂಷಣ ಹರಿಚಂದನ್, ಮುಖ್ಯಮಂತ್ರಿ ವೈ, ಎಸ್.ಜಗನ್ ಮೋಹನ್ ರೆಡ್ಡಿ, ರೈಲ್ವೆ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಡೈನಮಿಕ್ ಸಿಟಿ ಬೆಂಗಳೂರಿಗೆ ಅವಿಸ್ಮರಣೀಯ ಸ್ವಾಗತ ಕೋರಿದ್ದಕ್ಕೆ ಧನ್ಯವಾದ ಎಂದು ಪ್ರಧಾನಿ ಮೋದಿ ಟ್ವಿಟ್ ಮಾಡಿದ್ದಾರೆ. ಶುಕ್ರವಾರ ಅರ್ಧದಿನ ಬೆಂಗಳೂರಿಗೆ ಬಂದಿದ್ದ ಅವರು, ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರ ಪ್ರತಿಮೆ ಅನಾವರಣ ಗೊಳಿಸಿದರು. ವಂದೇ ಭಾರತ್ ರೈಲು, ಕಾಶಿ ದರ್ಶನ ರೈಲಿಗೆ ಚಾಲನೆ ನೀಡಿ, ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾದ ಅವರು, ವಾಲ್ಮೀಕಿ ಮಹರ್ಷಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
