ಗಾಂಧಿನಗರ:ರಾಷ್ಟ್ರೀಯ ಏಕತಾ ದಿನಾಚರಣೆ ಪ್ರಯುಕ್ತ ಎರಡು ದಿನಗಳ ಕಾಲ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಕೆವಾಡಿಯಾ ಜಿಲ್ಲೆಯಲ್ಲಿ ನಿರ್ವಿುಸಲಾಗಿರುವ ಆರೋಗ್ಯ ವನವನ್ನು ಶುಕ್ರವಾರ ಉದ್ಘಾಟಿಸಿದರು.
ಆಯುರ್ವೆದದ ಗಿಡ ಮೂಲಿಕೆಗಳ ಮಹತ್ವದ ಅರಿವು ಮೂಡಿಸಲು 17 ಎಕರೆ ಜಾಗದಲ್ಲಿ ಆರೋಗ್ಯ ವನವನ್ನು ನಿರ್ವಿುಸಲಾಗಿದೆ. 380 ಬಗೆಯ ಒಟ್ಟು 5 ಲಕ್ಷ ಔಷಧೀಯ ಗಿಡಗಳನ್ನು ಈ ವನದಲ್ಲಿ ಬೆಳೆಸಲಾಗಿದೆ. ಕಮಲದ ಕೊಳ, ಆಲ್ಬಾ ಗಾರ್ಡನ್, ಯೋಗ ಮತ್ತು ಧ್ಯಾನ ಉದ್ಯಾನ, ಒಳಾಂಗಣ ಸಸ್ಯ ವಿಭಾಗ, ಡಿಜಿಟಲ್ ಮಾಹಿತಿ ಕೇಂದ್ರ, ಆಯುರ್ವೆದ ರೀತಿಯ ಆಹಾರ ವಿಭಾಗ ಸೇರಿ ಅನೇಕ ವಿಭಾಗಗಳು ಈ ವನದಲ್ಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿಯೊಂದಿಗೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಮತ್ತು ರಾಜ್ಯಪಾಲ ಆಚಾರ್ಯ ದೇವವ್ರತ್ ಹಾಜರಿದ್ದರು.
ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮದಿನ (ಅ.31) ಪ್ರಯುಕ್ತ ಆಚರಿಸುವ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಶುಕ್ರವಾರ 17 ಕಾರ್ಯಕ್ರಮಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಇದರ ಭಾಗವಾಗಿಯೇ ಆರೋಗ್ಯ ವನ, ಏಕತಾ ಮಾಲ್ ಲೋಕಾರ್ಪಣೆ ಮಾಡಿದರು. ಉದ್ಘಾಟಿಸಿದ ಮಕ್ಕಳ ನ್ಯೂಟ್ರಿಷಿಯನ್ ಪಾರ್ಕ್, ಸರ್ದಾರ್ ಪಟೇಲ್ ವನ್ಯಮೃಗ ಪಾರ್ಕ್ ವೀಕ್ಷಿಸಿದರು. ಕ್ರೂಸ್ ಸರ್ವೀಸ್ ಬೋಟ್​ನಲ್ಲಿ ವಿಹರಿಸಿದರು. ಶನಿವಾರ ಕೂಡ ಹಲವು ಕಾರ್ಯಕ್ರಮಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ. ಗುರುವಾರ ನಿಧನರಾದ ಮಾಜಿ ಸಿಎಂ, ಬಿಜೆಪಿಯ ಹಿರಿಯ ನಾಯಕ ಕೇಶುಭಾಯ್ ಪಟೇಲ್​ರ ಗಾಂಧಿನಗರದ ನಿವಾಸಕ್ಕೆ ಭೇಟಿ ನೀಡಿದ ಮೋದಿ, ಕೇಶುಭಾಯಿ ಕುಟಂಬಸ್ಥರಿಗೆ ಸಾಂತ್ವನ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + ten =
Remember me
