ನವದೆಹಲಿ:ಭಾರತದಲ್ಲಿ ಕರೊನಾ ವೈರಸ್​ನ ಎರಡನೇ ಅಲೆಯಲ್ಲಿ ಸಂಭವಿಸಿದ ಸಾವಿನ ಪ್ರಮಾಣ ವಿಶ್ವದೆಲ್ಲೆಡೆ ಚರ್ಚೆಗೆ ಗ್ರಾಸವಾದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಜಾಗತಿಕ ಅನುಮೋದನೆ (ಅಪ್ರೂವಲ್​)ರೇಟಿಂಗ್​ ಶೇ. 66ಕ್ಕೆ ಇಳಿಕೆಯಾಗಿದೆ. ಹಿಂದೆ ಈ ಪ್ರಮಾಣ ಶೇ. 75ರಷ್ಟಿತ್ತು. ಹಾಗಿದ್ದರೂ, ಅಮೆರಿಕ ಅಧ್ಯ ಜೋ ಬೈಡೆನ್​, ರಷ್ಯಾದ ವ್ಲಾಡಿಮಿರ್​ ಪುತಿನ್​, ಫ್ರಾನ್ಸ್​ ಅಧ್ಯಕ್ಷ ಮ್ಯಾಕ್ರನ್​ ಮತ್ತು ಜರ್ಮನಿಯ ಏಂಜೆಲಾ ಮರ್ಕೆಲ್​ ಸೇರಿ ವಿಶ್ವದ 13 ದೇಶಗಳ ನಾಯಕರಿಗಿಂತ ಪ್ರಧಾನಿ ಮೋದಿ ಮುಂದಿದ್ದಾರೆ ಎಂದು ಅಮೆರಿಕ ದತ್ತಾಂಶ ಗುಪ್ತಚರ ಸಂಸ್ಥೆ ನಡೆಸಿದ ಗ್ಲೋಬಲ್​ ಲೀಡರ್​ ಅಪೂವಲ್​ ರೇಟಿಂಗ್​ ಟ್ರಾ$್ಯಕರ್​ ಸಮೀೆಯಲ್ಲಿ ವರದಿಯಾಗಿದೆ.
ಸಮೀೆಯು ವಾರಕ್ಕೆ ಒಂದು ಬಾರಿ ಆಸ್ಟ್ರೆಲಿಯಾ, ಬ್ರೆಜಿಲ್​, ಕೆನಡಾ, ಫ್ರಾನ್ಸ್​, ಜರ್ಮನಿ, ಭಾರತ, ಇಟಲಿ, ಜಪಾನ್​, ಮೆಕ್ಸಿಕೊ, ದಣ ಕೊರಿಯಾ, ಸ್ಪೇನ್​, ಯುನೈಟೆಡ್​ ಕಿಂಗ್​ಡಮ್​ ಮತ್ತು ಅಮೆರಿಕ ಸೇರಿ 13 ದೇಶಗಳ ನಾಯಕರ ಒಪ್ಪಿಗೆಯ ರೇಟಿಂಗ್​ ಬಗ್ಗೆ ವರದಿ ಮಾಡುತ್ತಿರುತ್ತದೆ. ಮಾರ್ನಿಂಗ್​ ಕನ್ಸಲ್ಟ್​ ಗ್ಲೋಬಲ್​ ಲೀಡರ್​ ಅಪೂವಲ್​ ಟ್ರಾ$್ಯಕರ್​ ಸಂಸ್ಥೆಯು ಈ ಮಾಹಿತಿ ನೀಡಿದ್ದು, ಸಮೀೆಗಾಗಿ ಭಾರತದಲ್ಲಿ 2,126 ವಯಸ್ಕರನ್ನು ಬಳಸಿಕೊಂಡಿದೆ. ಸಮೀೆಯ ಸಂದರ್ಶನಗಳನ್ನು ಆನ್​ಲೈನ್​ ಮೂಲಕ ನಡೆಸಲಾಗಿದೆ.
ಜಾನ್ಸನ್​ಗೆ ಕಳಪೆ ಶ್ರೇಯಾಂಕ2020ರಲ್ಲಿ ಕರೊನಾ ವೈರಾಣು ಸಮಸ್ಯೆ ಆರಂಭವಾದ ಬಳಿಕ ಮೇ ತಿಂಗಳಲ್ಲಿ ಪ್ರಧಾನಿ ಮೋದಿ ಅವರ ಒಪ್ಪಿಗೆ ಪ್ರಮಾಣ ಶೇ. 84ರಷ್ಟಿತ್ತು. ಈ ಬಾರಿಯ ಸಮೀೆಯಲ್ಲಿ ಶೇ. 28 ಜನರು ಮೋದಿ ನಾಯಕತ್ವವನ್ನು ತಿರಸ್ಕರಿಸಿದ್ದಾರೆ ಎಂದು ಸಮೀೆ ಹೇಳಿದೆ. ಜಾಗತಿಕ ಅನುಮೋದನೆ ರೇಟಿಂಗ್​ನಲ್ಲಿ ಇಟಲಿ ಪ್ರಧಾನಿ ಮಾರಿಯೋ ಡ್ರಾಗಿ (ಶೇ. 65) ಎರಡನೇ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಮೆಕ್ಸಿಕೋ ಅಧ್ಯ ಆಂಡ್ರೆಸ್​ ಮ್ಯಾನುಯೆಲ್​ ಲೋಪೆಜ್​ ಒಬ್ರಡಾರ್​ (ಶೇ. 63), ಆಸ್ಟ್ರೆಲಿಯಾ ಪ್ರಧಾನಿ ಸ್ಕಾಟ್​ ಮಾರಿಸನ್​ (ಶೇ.54), ಜರ್ಮನಿ ಚಾನ್ಸ್​ಲರ್​ ಏಂಜೆಲಾ ಮರ್ಕೆಲ್​ (ಶೇ.53), ಅಮೆರಿಕ ಅಧ್ಯ ಜೋ ಬೈಡೆನ್​ ಶೇ. 53, ಕೆನಡಾ ಪ್ರಧಾನಿ ಜಸ್ಟಿನ್​ ಟ್ರುಡೊ (ಶೇ.48) ಮತ್ತು ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​ (ಶೇ. 44) ಇದ್ದಾರೆ.
ಕರೊನಾ ಹಿನ್ನೆಲೆಯಲ್ಲಿ ಕುಸಿದ ರೇಟಿಂಗ್​ಕರೊನಾ ವೈರಸ್​ ಮಹಾಮಾರಿಯಿಂದಾಗಿ ವಿಶ್ವದಾದ್ಯಂತ ಸರ್ಕಾರಗಳು ಮತ್ತು ಆಡಳಿತ ನಾಯಕರು ಸಾರ್ವಜನಿಕ ಟೀಕೆಗೆ ಗುರಿಯಾಗಿದ್ದಾರೆ. ಜಪಾನ್​ ಪ್ರಧಾನಿ ಸುಗಾ ಯೋಶಿಹಿದೆ ಮತ್ತು ಸ್ಪೇನ್​ನ ಪ್ರಧಾನಿ ಪೆಡ್ರೋ ಸ್ಯಾಂಚೆಝ್​ ನಾಯಕತ್ವವನ್ನು ಕ್ರಮವಾಗಿ ಶೇ. 60 ಮತ್ತು ಶೇ.59 ಮಂದಿ ತಿರಸ್ಕರಿಸಿದ್ದಾರೆ. ಅಂದರೆ ಸಮೀೆಯಲ್ಲಿ ಅವರಿಗೆ ಅತಿ ಹೆಚ್ಚು ಅಸಮ್ಮತಿ ರೇಟಿಂಗ್​ ಬಂದಿದೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
