ಮುಂಬೈ:ಪ್ರಧಾನಿ ನರೇಂದ್ರ ಮೋದಿಯವರು ಮಹಿಳಾ ದಿನಾಚರಣೆ ದಿನ ಸಾಧಕ ಮಹಿಳೆಯರಿಗಾಗಿ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯನ್ನು ಬಿಟ್ಟುಕೊಡುವುದಾಗಿ ಈಗಾಗಲೇ ಘೋಷಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು #SheInspiresUs ಎಂಬ ಹ್ಯಾಷ್​ಟ್ಯಾಗ್​ನಲ್ಲಿ ಸಾಧಕ ಮಹಿಳೆಯರು ತಮ್ಮ ಸ್ಫೂರ್ತಿದಾಯಕ ಕತೆಯನ್ನು ಹಂಚಿಕೊಳ್ಳಿ ಎಂದು ಕರೆ ನೀಡಿದ್ದಾರೆ.
ನರೇಂದ್ರ ಮೋದಿಯವರ ಸಾಮಾಜಿಕ ಜಾಲತಾಣಗಳನ್ನು ಬಳಸುವ ಸ್ಫೂರ್ತಿದಾಯಕ ಮಹಿಳೆಯರು ಯಾರಾಗಬಹುದು ಎಂಬ ಕುತೂಹಲ ಹುಟ್ಟಿಕೊಂಡಿದೆ. ಈ ಬೆನ್ನಲ್ಲೇ ಬಾಲಿವುಡ್​ ನಟಿ ಕಂಗನಾ ರಣಾವತ್​ ಅವರ ಸಹೋದರಿ ರಂಗೋಲಿ ಚಾಂದೇಲ್​, ದಯವಿಟ್ಟು ನಿಮ್ಮ ಖಾತೆಯನ್ನು ನನಗೇ ಬಿಟ್ಟುಕೊಡಿ ಎಂದು ಮೋದಿಯವರನ್ನು ಕೇಳಿಕೊಂಡಿದ್ದಾರೆ.
ಮಹಿಳಾ ದಿನಾಚರಣೆಗೆ ಸಂಬಂಧಪಟ್ಟು ನರೇಂದ್ರ ಮೋದಿಯವರು ಮಾಡಿದ ಟ್ವೀಟ್​ನ್ನು ರೀಟ್ವೀಟ್ ಮಾಡಿಕೊಂಡಿರುವ ರಂಗೋಲಿ ಚಾಂದೇಲ್​, ಮೋದಿ ಜೀ ದಯವಿಟ್ಟು ನನಗೆ ನಿಮ್ಮ ಸೋಷಿಯಲ್​ ಮೀಡಿಯಾ ಬಳಸಲು ನನಗೊಂದು ಅವಕಾಶ ಕೊಡಿ. ನಿಮ್ಮ ವಿರೋಧಿಗಳಿಗೆ ನನ್ನ ಮನಸಿನಲ್ಲಿರುವ ಒಂದು ಸ್ವಲ್ಪ ವಿಚಾರಗಳನ್ನು ತಿಳಿಸುವುದಿದೆ ಎಂದು ಟ್ವೀಟ್ ಮಾಡಿದ್ದಾರೆ.
ರಂಗೋಲಿ ಚಾಂದೇಲ್​ ಮಾತ್ರವಲ್ಲ ಕಂಗನಾ ರಣಾವತ್​ ಕೂಡ ನರೇಂದ್ರ ಮೋದಿಯವರ ಕಟ್ಟಾ ಬೆಂಬಲಿಗರು. ಮೋದಿಯವರು ಪ್ರಧಾನಮಂತ್ರಿ ಸ್ಥಾನಕ್ಕೆ ಸೂಕ್ತ ವ್ಯಕ್ತಿ. ಪ್ರಜಾಪ್ರಭುತ್ವಕ್ಕೆ ಸಮರ್ಥ ನಾಯಕ ಎಂದು ಈ ಹಿಂದೆ ಕಂಗನಾ ಹೇಳಿದ್ದರು. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
