ಮೈಸೂರು:2022ರ ಹುಲಿ ಗಣತಿಯ ಪ್ರಕಾರ ದೇಶದಲ್ಲಿ ಒಟ್ಟು 3,167 ಹುಲಿಗಳಿದ್ದು, ಅವುಗಳ ಸಂತತಿ ಹೆಚ್ಚಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದು ಪ್ರಧಾನಿ ಮೋದಿ ಹೇಳಿದರು.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ಹುಲಿ ಯೋಜನೆಯ 50ನೇ ವರ್ಷಾಚರಣೆ ಹಾಗೂ ಪ್ರಥಮ ಸಂರಕ್ಷಣಾ ಸಮ್ಮೇಳನದಲ್ಲಿ ಭಾಗವಹಿಸಿ ಪ್ರಧಾನಿ ಮೋದಿ ಮಾತನಾಡಿದರು.
ಕ್ಷಮೆ ಇರಲಿಭಾಷಣದ ಆರಂಭಕ್ಕೂ ಮುನ್ನ ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಕ್ಕೆ ಮೋದಿ ಕ್ಷಮೆಯಾಚಿಸಿದರು. ನಾನು ಕಾರ್ಯಕ್ರಮಕ್ಕೆ ಬರುವಲ್ಲಿ ವಿಳಂಬವಾಯಿತು. ಕಾಡಿನಲ್ಲಿ ಸುತ್ತಾಡುತ್ತಿದ್ದಾಗ ಸಮಯ ಹೋಗಿದ್ದು ಗೊತ್ತಾಗಲಿಲ್ಲ. ನಾನು ಒಂದು ಗಂಟೆ ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ ಎಂದರು.
ಇದನ್ನೂ ಓದಿ:142 ಕೆರೆಗಳನ್ನು ಪುನಶ್ಚೇತನಗೊಳಿಸಿದ ಇಂಜಿನಿಯರ್; 15 ವರ್ಷಗಳಿಂದ ಒಣಗಿದ್ದ ಕೆರೆಯಲ್ಲೂ ನೀರು!
ದೇಶದಲ್ಲಿ ಹುಲಿಗಳ ಸಂತತಿ ಹೆಚ್ಚಾಗುತ್ತಿದೆ. ಇಂದಿಗೆ ಹುಲಿ ಯೋಜನೆಗೆ 50 ವರ್ಷ ಆಗಿದೆ. ಇಂತಹ ಸಂದರ್ಭದಲ್ಲಿ ಹುಲಿಗಳ ಸಂತತಿ ಹೆಚ್ಚಾಗುತ್ತಿರುವುದು ನಮಗೆಲ್ಲರಿಗೂ ಗೌರವದ ವಿಚಾರವಾಗಿದೆ. ಹೀಗಾಗಿ ನಾವೆಲ್ಲ ಎದ್ದು ನಿಂತು ಹುಲಿಗಳಿಗೆ ಗೌರವ ಸಲ್ಲಿಸೋಣ ಎಂದು ಪ್ರಧಾನಿ ಮೋದಿ ಹೇಳಿದರು.
ಭಾರತದಲ್ಲಿ ಹುಲಿಗಳ ಸಂಖ್ಯೆ ಏರಿಕೆಹುಲಿ ಯೋಜನೆ ಭಾರತಕಷ್ಟೇ ಅಲ್ಲ, ಇಡೀ ಜಗತ್ತಿಗೆ ಬೇಕಿದೆ. ವಿಶ್ವದ ಶೇ. 75 ರಷ್ಟು ಹುಲಿಗಳ ಸಂಖ್ಯೆ ಭಾರತದಲ್ಲಿದೆ. 75 ಚದರ ಕಿ.ಮೀ ಹುಲಿ ಸಂರಕ್ಷಣೆಯ ಪ್ರದೇಶವಿದೆ. ವಿಶ್ವದ ಹಲವೆಡೆ ಹುಲಿಗಳ ಸಂಖ್ಯೆ ಸ್ಥಿರವಾಗಿದೆ ಮತ್ತು ಇಳಿಯುತ್ತಿದೆ. ಆದರೆ, ಭಾರತದಲ್ಲಿ ಮಾತ್ರ ಹುಲಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದರು.
ಪರಂಪರೆಯ ಒಂದು ಭಾಗಪರಿಸರಕ್ಕೆ ಸಂಬಂಧಿಸಿದಂತೆ ಭಾರತದ ಪರಂಪರೆಯಲ್ಲಿ ಗೌರವ ಇದೆ. ಈ ಕಾರಣಕ್ಕಾಗಿ ಹುಲಿಗಳ ಸಂಖ್ಯೆ ನಮ್ಮಲ್ಲಿ ಹೆಚ್ಚುತ್ತಿದೆ. ಹಲವು ಸಮುದಾಯಗಳಲ್ಲಿ ಹುಲಿಗಳನ್ನು ಬಂಧು ಎಂದು ಭಾವಿಸಲಾಗುತ್ತದೆ. ಭಾರತದಲ್ಲಿ ಪರಿಸರ ಸಂರಕ್ಷಣೆ ಮಾಡುವುದು ನಮ್ಮ ಪರಂಪರೆಯ ಒಂದು ಭಾಗವಾಗಿದೆ. ಜಾಗತಿಕ ಪರಿಸರ ವೈವಿಧ್ಯತೆಗೆ ಭಾರತದ ಕೊಡುಗೆ ಶೇ. 8ರಷ್ಟಿದೆ. ಹುಲಿಗಳ ಸಂರಕ್ಷಣೆಗೆ ವಿವಿಧ ದೇಶಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಭಾರತದಲ್ಲಿ 30 ಸಾವಿರಕ್ಕೂ ಅಧಿಕ ಆನೆಗಳಿವೆ ಎಂದು ತಿಳಿಸಿದರು.
ಭಾರತದ ಜೀವ ವೈವಿಧ್ಯಕ್ಕೆ ಶುಭ ಸುದ್ದಿನಾನು ಗುಜರಾತ್​ ಸಿಎಂ ಆಗಿದ್ದಾಗ ಸಿಂಹಗಳ ರಕ್ಷಣೆಗೆ ಕೆಲಸ ಮಾಡಿದ್ದೆ. ಮನುಷ್ಯ-ಪ್ರಾಣಿಗಳ ನುಡವೆ ಭಾವನಾತ್ಮಕ ಸಂಬಂಧ ಬೆಳೆಸಬೇಕು. ಗುಜರಾತ್​ನಲ್ಲಿ ನಾನು ವನ್ಯಮಿತ್ರ ಕಾರ್ಯಕ್ರಮ ಜಾರಿಗೊಳಿಸಿದ್ದೆ. ಗಿರ್​ ಕಾಡಿನಲ್ಲಿ ಸಿಂಹಗಳ ಪುನರ್ವಸತಿ ಕೇಂದ್ರ ಆರಂಭಿಸಿದ್ದೆ. ಇದೀಗ ಭಾರತದ ಜೀವವೈವಿಧ್ಯ ವೃದ್ಧಿಗೆ ಚೀತಾಗಳನ್ನು ಕರೆತಂದಿದ್ದೇವೆ. ಕುನೋ ರಾಷ್ಟ್ರೀಯ ಉದ್ಯಾನದಲ್ಲಿ 4 ಚೀತಾ ಮರಿಗಳು ಹುಟ್ಟಿವೆ. ಇದು ಭಾರತದ ಜೀವ ವೈವಿಧ್ಯಕ್ಕೆ ತುಂಬಾ ಶುಭ ಸುದ್ದಿ ಎಂದರು.
ಇದನ್ನೂ ಓದಿ:ತವರಿನಲ್ಲಿದ್ದ ಪತ್ನಿ ಜತೆ ಮೊಬೈಲ್​ನಲ್ಲಿ ಮಾತನಾಡುವಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದು ಪತಿ ಸಾವು
ಹುಲಿ ಗಣತಿ ಬಿಡುಗಡೆಕಾರ್ಯಕ್ರಮದಲ್ಲಿ ಮಾತನಾಡುವುದಕ್ಕೂ ಮುನ್ನ ಪ್ರಧಾನಿ ಮೋದಿ 2022ನೇ ಸಾಲಿನ ಹುಲಿ ಗಣತಿಯನ್ನು ಬಿಡುಗಡೆ ಮಾಡಿದರು. ಇದರ ಪ್ರಕಾರ ಭಾರತದಲ್ಲಿ 3,167 ಹುಲಿಗಳಿವೆ. 2006ರಲ್ಲಿ ದೇಶದಲ್ಲಿ ಹುಲಿಗಳ ಸಂಖ್ಯೆ 1,411 ಇತ್ತು. 2010ರಲ್ಲಿ 1,706, 2014ರಲ್ಲಿ 2,226 ಮತ್ತು 2018ರಲ್ಲಿ 2,967 ಹುಲಿಗಳಿದ್ದವು. ವರದಿಯ ಪ್ರಕಾರ ಹುಲಿಗಳ ಸಂಖ್ಯೆಯಲ್ಲಿ ನಿರಂತರವಾಗಿ ಏರಿಕೆ ಕಂಡಿದೆ.
ಐಬಿಸಿಎ ಯೋಜನೆಗೆ ಚಾಲನೆಹುಲಿ ಯೋಜನೆ 50 ವರ್ಷ ಪೂರೈಸಿದಕ್ಕೆ ಸ್ಮರಣಾರ್ಥವಾಗಿ ಪ್ರಧಾನಿ ಮೋದಿ ನಾಣ್ಯವನ್ನು ಬಿಡುಗಡೆ ಮಾಡಿದರು. ಇದರ ಜೊತೆಗೆ ಪ್ರಧಾನಿ ಮೋದಿ ಇಂಟರ್ನ್ಯಾಷನಲ್ ಬಿಗ್​ ಕ್ಯಾಟ್ಸ್​ ಅಲಯನ್ಸ್​ (ಐಬಿಸಿಎ) ಯೋಜನೆಗೆ ಚಾಲನೆ ನೀಡಿದರು. ಈ ಯೋಜನೆ ಮೂಲಕ ಪ್ರಪಂಚದ ಏಳು ಪ್ರಮುಖ ದೊಡ್ಡ ಬೆಕ್ಕುಗಳ ರಕ್ಷಣೆ ಮತ್ತು ಸಂರಕ್ಷಣೆಯ ಮೇಲೆ ಸರ್ಕಾರ ಕೇಂದ್ರೀಕರಿಸುತ್ತದೆ. ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಪೂಮಾ, ಜಾಗ್ವಾರ್ ಹಾಗೂ ಚಿರತೆಗಳ ರಕ್ಷಣೆಯನ್ನು ಈ ಯೋಜನೆ ಒಳಗೊಂಡಿರುತ್ತದೆ. ಈ ಜಾಗತಿಕ ಮೈತ್ರಿಯ ಮೂಲಕ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಏಷ್ಯಾದಲ್ಲಿ ಕಳ್ಳಬೇಟೆ, ಅಕ್ರಮ ವನ್ಯಜೀವಿ ವ್ಯಾಪಾರವನ್ನು ನಿಗ್ರಹಿಸಲು ಯೋಜಿಸಿದೆ.(ಏಜೆನ್ಸೀಸ್​)
ಬಂಡೀಪುರ ಹುಲಿ ಯೋಜನೆಗೆ 50 ವರ್ಷ: ವ್ಯಾಘ್ರಗಳ ಸುರಕ್ಷಿತ ನೆಲೆಯ ಬಗ್ಗೆ ತಿಳಿಯಬೇಕಾದ ಮಾಹಿತಿ ಇಲ್ಲಿದೆ…

ಬಂಡೀಪುರದಲ್ಲಿ ಮೋದಿ: ಗಮನ ಸೆಳೆದ ಸಫಾರಿ ಫೋಟೋಗಳು

ಮೋದಿ ಜತೆ ಬೊಮ್ಮ- ಬೆಳ್ಳಿ ದಂಪತಿಯ ಮಾತುಕತೆ!

ಬಂಡೀಪುರದಲ್ಲಿ ನಮೋ ಸಫಾರಿ: ಗಮನ ಸೆಳೆದ ಬಂಡೀಪುರ ಲೋಗೋ ಇರುವ ದಿರಿಸು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 13 =
Remember me
