ನವದೆಹಲಿ:ಸಾರಿಗೆ ಕ್ಷೇತ್ರದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ, ಸರಕು ಸಾಗಣೆ ನಿರ್ವಹಣೆ ಸಾಮರ್ಥ್ಯ ಹೆಚ್ಚಳದ ಜತೆಗೆ ದೇಶದ ಆರ್ಥಿಕತೆ ವೃದ್ಧಿಸುವ ಗುರಿಯೊಂದಿಗೆ ಕೇಂದ್ರ ಸರ್ಕಾರ ರೂಪಿಸಿರುವ 100 ಲಕ್ಷ ಕೋಟಿ ರೂ. ವೆಚ್ಚದ ‘ಪಿಎಂ ಗತಿಶಕ್ತಿ ಮಾಸ್ಟರ್​ಪ್ಲಾ್ಯನ್’ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಚಾಲನೆ ನೀಡಿದರು.
‘ಗತಿಶಕ್ತಿಯು ಗುಣಾತ್ಮಕ ಮೂಲಸೌಕರ್ಯ ಆರ್ಥಿಕತೆಯನ್ನು ಬೆಳೆಸುವ ಹಾಗೂ ಉದ್ಯೋಗ ಸೃಷ್ಟಿಮಾಡಬಲ್ಲ ಸುಸ್ಥಿರ ಅಭಿವೃದ್ಧಿಗೆ ರಹದಾರಿಯಾಗಿದೆ’ ಎಂದು ಮೋದಿ ಬಣ್ಣಿಸಿದರು. ಆತ್ಮನಿರ್ಭರ ಭಾರತದ ಸಾಕಾರಕ್ಕಾಗಿ ಮುಂದಿನ 25 ವರ್ಷಗಳ ಅಭಿವೃದ್ಧಿಗೆ ಈ ಮೂಲಕ ಶಂಕುಸ್ಥಾಪನೆ ನೆರವೇರಿದಂತಾಗಿದೆ. ಭಾರತದ ಕೈಗಾರಿಕೆ, ವಾಣಿಜ್ಯ, ಉತ್ಪಾದಕರು, ರೈತರು ಮೊದಲಾದ ವಿಭಾಗಗಳ ಜನರು ಮಹಾನ್ ಗತಿಶಕ್ತಿ ಅಭಿಯಾನದ ಕೇಂದ್ರಬಿಂದುವಾಗಿದ್ದಾರೆ ಎಂದು ಮೋದಿ ಹೇಳಿದರು.
21ನೇ ಶತಮಾನದ ಭಾರತ ಹಳೆಯ ವ್ಯವಸ್ಥೆ ಮತ್ತು ಅಭ್ಯಾಸಗಳನ್ನು ಕೈಬಿಡುತ್ತಿದೆ. ಪ್ರಗತಿಗಾಗಿ ಕೆಲಸ, ಪ್ರಗತಿಗಾಗಿ ಸಂಪತ್ತು, ಪ್ರಗತಿಗಾಗಿ ಯೋಜನೆ ಮತ್ತು ಪ್ರಗತಿಗಾಗಿ ಆದ್ಯತೆ -ಇವು ಇಂದಿನ ಮಂತ್ರ್ರಾಗಿದೆ ಎಂದು ಪ್ರಧಾನಿ ಹೇಳಿದರು.
ಒಳನಾಡು ಜಲಸಾರಿಗೆ ಹಾಗೂ ನೌಕೆಗಳ ವಲಯದಲ್ಲಿ ಹೊಸ ಮೂಲಸೌಕರ್ಯ ಕಲ್ಪಿಸಲಾಗಿದೆ. 2014ರವರೆಗೆ ದೇಶದಲ್ಲಿ ಕೇವಲ ಐದು ಜಲಮಾರ್ಗಗಳಿದ್ದವು. ಈಗ ಕಾರ್ಯಾಚರಣೆಯಲ್ಲಿರುವ 13 ಮಾರ್ಗಗಳಿವೆ. ವಿಮಾನಯಾನ ಕ್ಷೇತ್ರದಲ್ಲಿ ಆಧುನಿಕ ಪರಿಸರ ಸೃಷ್ಟಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವೈಮಾನಿಕ ಕ್ಷೇತ್ರದ ಸಂಪರ್ಕ ಸುಧಾರಣೆಗಾಗಿ ಹೊಸ ವಿಮಾನ ನಿಲ್ದಾಣಗಳ ನಿರ್ವಣದೊಂದಿಗೆ ಈ ಕ್ಷೇತ್ರವನ್ನು ಖಾಸಗಿ ವಲಯಕ್ಕೆ ಮುಕ್ತಗೊಳಿಸಲಾಗಿದೆ ಎಂದರು.
ಈ ಹಿಂದೆ ಆಡಳಿತ ನಡೆಸಿದ ಪಕ್ಷಗಳು ಮೂಲಸೌಕರ್ಯ ಅಭಿವೃದಿಟಛಿಗೆ ಆದ್ಯತೆ ನೀಡಿರಲಿಲ್ಲ. ಅದು ಯಾವತ್ತೂ ಅವುಗಳ ಪ್ರಣಾಳಿಕೆಯಲ್ಲಿ ಸ್ಥಾನ ಪಡೆದೇ ಇರಲಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದಟಛಿ ಮೋದಿ ಚಾಟಿ ಬೀಸಿದರು. ಪ್ರಗತಿ ಮೈದಾನದಲ್ಲಿ ಹೊಸ ವಸ್ತು ಪ್ರದರ್ಶನ ಸಂಕೀರ್ಣವನ್ನೂ ಮೋದಿ ಉದ್ಘಾಟಿಸಿದರು.
5 ವರ್ಷದಲ್ಲಿ ಸಾಧನೆ:
2014ಕ್ಕೂ ಮುಂಚೆ ಐದು ವರ್ಷ ಅವಧಿಯಲ್ಲಿ ಕೇವಲ 1,900 ಕಿ.ಮೀ. ರೈಲ್ವೆ ಮಾರ್ಗವನ್ನು ಏಕಪಥದಿಂದ ದ್ವಿಪಥವಾಗಿ ಪರಿವರ್ತಿಸಲಾಗಿತ್ತು. ಆದರೆ ಕಳೆದ ಏಳು ವರ್ಷಗಳಲ್ಲಿ 9 ಸಾವಿರ ಕಿ.ಮೀ.ಗೂ ಹೆಚ್ಚಿನ ಮಾರ್ಗದ ಪರಿವರ್ತನೆಯಾಗಿದೆ. 2014ರವರೆಗೆ ಹಿಂದಿನ ಐದು ವರ್ಷಗಳಲ್ಲಿ ಕೇವಲ 3,000 ಕಿ.ಮೀ. ರೈಲ್ವೆ ಮಾರ್ಗದ ವಿದ್ಯುದೀಕರಣವಾಗಿದ್ದು ಕಳೆದ ಏಳು ವರ್ಷಗಳಲ್ಲಿ 24,000 ಕಿ.ಮೀ.ಗೂ ಅಧಿಕ ಮಾರ್ಗದಲ್ಲಿ ಈ ಪ್ರಕ್ರಿಯೆ ನಡೆದಿದೆ ಎಂದು ಮೋದಿ ಹೇಳಿದರು.
ಸ್ವಾತಂತ್ರ್ಯ ದಿನದ ಘೋಷಣೆ
ಆ.15ರಂದು 75ನೇ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ‘ಗತಿಶಕ್ತಿ’ ಯೋಜನೆಯನ್ನು ಪ್ರಕಟಿಸಿದ್ದರು. ಸ್ಥಳೀಯ ಉತ್ಪಾದಕರ ಸಾಮರ್ಥ್ಯ ಹೆಚ್ಚಿಸಿ ಜಾಗತಿಕವಾಗಿ ಸ್ಪರ್ಧಿಸಲು ಅವರನ್ನು ಸನ್ನದಟಛಿಗೊಳಿಸಲು ನೆರವಾಗಲಿದೆ; ಭವಿಷ್ಯದ ಹೊಸ ಆರ್ಥಿಕ ವಲಯಗಳ ಸಾಧ್ಯತೆಯನ್ನು ಕೂಡ ಅದು ಹೆಚ್ಚಿಸಲಿದೆ ಎಂದಿದ್ದರು.
ಏನಿದು ಯೋಜನೆ?
ಪಿಎಂ ಗತಿಶಕ್ತಿ ಮಾಸ್ಟರ್​ಪ್ಲಾ್ಯನ್ ಬಹುವಿಧದ ಸಂಪರ್ಕದ ಯೋಜನೆ. ಒಂದು ಬಗೆಯಿಂದ ಇನ್ನೊಂದು ವಿಧಕ್ಕೆ ಜನರು, ಸರಕುಗಳು ಮತ್ತು ಸೇವೆಗಳ ಸಮಗ್ರ ಹಾಗೂ ಸುಗಮ ಸಂಪರ್ಕಕ್ಕೆ ಅನುಕೂಲ ಕಲ್ಪಿಸುವುದು ಇದರ ಉದ್ದೇಶ. ಇದು 100 ಲಕ್ಷ ಕೋಟಿ ರೂಪಾಯಿಗಳ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. 2 ರಕ್ಷಣಾ ಕಾರಿಡಾರ್ ಸಹಿತ ದೇಶದಾದ್ಯಂತ 1,200ಕ್ಕೂ ಹೆಚ್ಚು ಕ್ಲಸ್ಟರ್​ಗಳಿಗೆ ಸಂಪರ್ಕ ಕಲ್ಪಿಸಲು ಈ ಯೋಜನೆ ನೆರವಾಗಲಿದೆ.
ವಿಶೇಷತೆಗಳು
ಯೋಜನೆ ಗುರಿ ಏನು?
ಇಲಾಖೆಗಳ ವಿಲೀನ
ರೈಲ್ವೆ, ರಸ್ತೆ-ಹೆದ್ದಾರಿ, ಪೆಟ್ರೋಲಿಯಂ ಮತ್ತು ಅನಿಲ, ವಿದ್ಯುತ್, ದೂರಸಂಪರ್ಕ, ಹಡಗು, ವಿಮಾನಯಾನ, ಕೈಗಾರಿಕಾ ಪಾರ್ಕ್ ಸೇರಿದಂತೆ 16 ಇಲಾಖೆಗಳನ್ನು ಈ ಯೋಜನೆ ಅಡಿ ಸೇರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರೊ್ಯೕತ್ಸವ ಭಾಷಣದಲ್ಲಿ ಹೇಳಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 1 =
Remember me
