ಮಾಸ್ಕೋ:ರಷ್ಯಾ ಮತ್ತು ಯೂಕ್ರೇನ್​​ ನಡುವಿನ ಯುದ್ಧದ ನಂತರ ಪ್ರಧಾನಿ ಮೋದಿ ಮೊದಲ ಬಾರಿಗೆ ರಷ್ಯಾಕ್ಕೆ ಭೇಟಿ ನೀಡುತ್ತಿದ್ದಾರೆ. ಜುಲೈ 8ರಂದು ಪ್ರಧಾನಿ ಮೋದಿ ಮಾಸ್ಕೋಗೆ ಭೇಟಿ ನೀಡಲಿದ್ದು, ಅಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನು ಓದಿ:ಪಕ್ಷದ ಇಮೇಜ್​ಗೆ ಧಕ್ಕೆ ತರುವವರನ್ನು ಸೇರಿಸುವುದಿಲ್ಲ; ಶರದ್​ ಪವಾರ್​​​
ಯೋಜನೆಯ ಪ್ರಕಾರ ನಡೆದರೆ 2022 ಫೆಬ್ರವರಿ 24ರಂದು ರಷ್ಯಾ ಯೂಕ್ರೇನ್​​ ಅನ್ನು ಆಕ್ರಮಿಸಿದ ನಂತರ ಇದು ಪ್ರಧಾನಿ ಮೋದಿ ಅವರ ಮೊದಲನೆ ಭೇಟಿಯಾಗಿದೆ. ಯೂಕ್ರೇನ್​​ ಮೇಲಿನ ರಷ್ಯಾದ ಆಕ್ರಮಣವನ್ನು ಭಾರತ ನೇರವಾಗಿ ಖಂಡಿಸಿಲ್ಲ. ರಾಜತಾಂತ್ರಿಕತೆ ಮತ್ತು ಮಾತುಕತೆಯ ಮೂಲಕ ಬಿಕ್ಕಟ್ಟನ್ನು ಪರಿಹರಿಸಬೇಕು ಎಂದು ಸಮರ್ಥಿಸಿಕೊಂಡಿದೆ.
ಯೂಕ್ರೇನ್​​ ಯುದ್ಧದ ನಂತರ ಪ್ರಧಾನಿ ಮೋದಿ ಮೊದಲ ಬಾರಿಗೆ ರಷ್ಯಾಕ್ಕೆ ಭೇಟಿ ನೀಡಲಿದ್ದಾರೆ. ಈ ಭೇಟಿಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರುತ್ತವೆ. ಯೂಕ್ರೇನ್​​​ ಯುದ್ಧದ ಬಗ್ಗೆ ಪ್ರಧಾನಿ ಮೋದಿ ಅವರು ಅಧ್ಯಕ್ಷ ಪುಟಿನ್ ಅವರೊಂದಿಗೆ ಮಾತನಾಡಬಹುದು ಎಂದು ಪಾಶ್ಚಿಮಾತ್ಯ ದೇಶಗಳು ಎದುರುನೋಡುತ್ತಿವೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಪ್ರಧಾನಿ ಮೋದಿ ಅವರ ಭೇಟಿಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ರಷ್ಯಾದ ವಿದೇಶಾಂಗ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಪ್ರಧಾನಿ ಮೋದಿಯವರ ರಷ್ಯಾ ಭೇಟಿಯ ಬಗ್ಗೆ ಭಾರತ ಇನ್ನೂ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. ರಷ್ಯಾಕ್ಕೆ ಬರಲು ಮೋದಿಗೆ ಮುಕ್ತ ಆಹ್ವಾನವಿದೆ ಮತ್ತು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಸಭೆ ನಡೆಯಲಿದೆ ಎಂದು ಮಾರ್ಚ್​ನಲ್ಲೇ ರಷ್ಯಾ ಹೇಳಿತ್ತು.
ಪ್ರಧಾನಿ ಮೋದಿ ಅವರು 2015ರಲ್ಲಿ ಮಾಸ್ಕೋಗೆ, 2019ರಲ್ಲಿ ಕೊನೆಯ ಬಾರಿಗೆ ರಷ್ಯಾದ ವ್ಲಾಡಿವೋಸ್ಟಾಕ್‌ಗೆ ಭೇಟಿ ನೀಡಿದ್ದರು. ಅಂದಿನಿಂದ ಉಭಯ ದೇಶಗಳ ನಡುವಿನ ಸಂಬಂಧಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಇಂದಿಗೂ ಭಾರತ ತನ್ನ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ರಷ್ಯಾದಿಂದ ಖರೀದಿಸುತ್ತದೆ.ಯೂಕ್ರೇನ್​​ ಯುದ್ಧ ಪ್ರಾರಂಭವಾದ ನಂತರ ಭಾರತವು ರಷ್ಯಾದಿಂದ ಕಡಿಮೆ ದರದಲ್ಲಿ ಸಾಕಷ್ಟು ತೈಲವನ್ನು ಖರೀದಿಸಿದೆ. ರಷ್ಯಾ ವಿರುದ್ಧ ಅಮೆರಿಕ ಕಟ್ಟುನಿಟ್ಟಿನ ನಿರ್ಬಂಧ ಹೇರಿದಾಗ ಭಾರತ ಈ ತೈಲವನ್ನು ಖರೀದಿಸಿತ್ತು. ಬಿಡೆನ್ ಆಡಳಿತದ ಅನೇಕ ಅಧಿಕಾರಿಗಳು ರಷ್ಯಾದ ತೈಲದ ಬಗ್ಗೆ ಎಚ್ಚರಿಕೆ ನೀಡಿದರು ಆದರೆ ಮೋದಿ ಸರ್ಕಾರ ತಲೆಬಾಗಲಿಲ್ಲ. ಭಾರತದ ರಷ್ಯಾದ ತೈಲ ಆಮದು ನಿರಂತರವಾಗಿ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ.(ಏಜೆನ್ಸೀಸ್​​)
ಕೇರಳ ಹೆಸರು ಬದಲಾವಣೆಗೆ ನಿರ್ಣಯ ಅಂಗೀಕಾರ; ಹೊಸ ಹೆಸರು ಏನು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + five =
Remember me
