|ಮೃತ್ಯುಂಜಯ ಕಪಗಲ್ಬೆಂಗಳೂರು
ಸರ್ಕಾರದ ಒಂದಲ್ಲ ಒಂದು ಯೋಜನೆಯ ಪ್ರಯೋಜನವನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿ ಪಡೆಯಬೇಕು. ಕನಿಷ್ಠ ಸರ್ಕಾರದ ಗರಿಷ್ಠ ಆಡಳಿತವನ್ನು ಕಾರ್ಯದಕ್ಷತೆ ಮೂಲಕ ತೋರಿಸಿಕೊಡಬೇಕು. ಇವೆರಡೂ ಪ್ರಧಾನಿ ನರೇಂದ್ರ ಮೋದಿ ‘ಮಾದರಿ’ಯಲ್ಲಿ ಸೇರಿರುವ ಮುಖ್ಯಾಂಶಗಳು.
ಗುಜರಾತ್, ಉತ್ತರಪ್ರದೇಶ ಮತ್ತಿನ್ಯಾವುದೇ ಮಾದರಿ ಬೇಡ. ಕರ್ನಾಟಕ ತನ್ನದೇ ಆದ ಮಾದರಿ ಅನುಸರಿಸಲಿ. ಆಡಳಿತ ಮತ್ತು ಅಭಿವೃದ್ಧಿ ಫಲಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಮೋದಿ ಮಾದರಿ ರಾಜ್ಯಕ್ಕೆ ರಹದಾರಿಯಾಗಲಿ. ಸ್ವತಃ ಮೋದಿಯವರೇ ಮಹತ್ವದ ಉಪ್ರಕಮವೊಂದಕ್ಕೆ ಸದ್ದಿಲ್ಲದೆ ಚಾಲನೆ ನೀಡುವ ಮೂಲಕ ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ವಿವಿಧ ಚುನಾವಣೆಗಳ ಹೊಸ್ತಿಲಲ್ಲಿರುವ ರಾಜ್ಯಕ್ಕೆ ಸ್ಪಷ್ಟ ಸಂದೇಶವನ್ನೂ ರವಾನಿಸಿದ್ದಾರೆ. ಮಂತ್ರಿ ಮಂಡಲದ ಸದಸ್ಯರು ಬಿಜೆಪಿ ಆಡಳಿತದ ರಾಜ್ಯಗಳಿಗೆ ಭೇಟಿ ಕಡ್ಡಾಯ. ಯಾವುದೇ ಅಧಿಕೃತ ಕಾರ್ಯಕ್ರಮಗಳಿಲ್ಲದಿದ್ದರೂ ಪಕ್ಷದ ರಾಜ್ಯ ಕಚೇರಿಗೆ ಭೇಟಿಯಿತ್ತು, ಎಂಟು ವರ್ಷಗಳ ಸಾಧನೆ ಬಗ್ಗೆ ಮಾಹಿತಿ ನೀಡುವುದು ಮೋದಿ ಉಪಕ್ರಮದ ತಿರುಳು. ಪಕ್ಷದ ಸಂಘಟನೆಯಿಂದ ವ್ಯಾಪಕ ಪ್ರಚಾರದ ಜತೆಗೆ ಕೇಂದ್ರ ಸಚಿವರು ಪಾಲ್ಗೊಳ್ಳುವುದರಿಂದ ಹೆಚ್ಚಿನ ಮಹತ್ವ ಬರಲಿದೆ. ಅಲ್ಲದೆ ವರಿಷ್ಠರು ಬಯಸಿರುವುದೇನು ಎಂಬುದನ್ನು ಬೊಮ್ಮಾಯಿ ಮಂತ್ರಿ ಮಂಡಲಕ್ಕೆ ಅರ್ಥ ಮಾಡಿಸಿಕೊಡಲಾಗಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದರು.
ಪ್ರವಾಸಕ್ಕೆ ಫರ್ಮಾನು:ಜಿಲ್ಲಾ ಉಸ್ತುವಾರಿ ಹೊರತಾದ ಜಿಲ್ಲೆಗಳಿಗೆ ಸಚಿವರ ಪ್ರವಾಸಕ್ಕೆ ವರಿಷ್ಠರು ಫರ್ವನು ಹೊರಡಿಸಿದ್ದು, ಆಯಾ ಇಲಾಖೆ ಕಾರ್ಯಕ್ರಮಗಳ ಅನುಷ್ಠಾನ ಪರಿಶೀಲಿಸಬೇಕು ಎಂಬ ಸೂಚನೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಬಯಸಿ ಮಂತ್ರಿ ಪದವಿ ಪಡೆದವರಲ್ಲಿ ಹಲವರು ರಾಜ್ಯದ ಜನತೆಗೆ ‘ಪರಿಚಯ’ ಮಾಡಿಕೊಳ್ಳುವ ದೃಷ್ಟಿಯಿಂದಲಾದರೂ ಭೇಟಿ ನೀಡಬೇಕು ಎಂದು ಕಾರ್ಯಕರ್ತರು ಬಯಸಿದ್ದಾರೆ. ಇಲಾಖೆ ಹೊಣೆ ಹೊತ್ತ ಸಚಿವರು ಜಿಲ್ಲೆಗಳಿಗೆ ಭೇಟಿ ನೀಡಿದರೆ ಅಧಿಕಾರಿಗಳು ಚುರುಕಾಗುತ್ತಾರೆ, ವಾಸ್ತವಾಂಶ ತಿಳಿಯುತ್ತದೆ, ಜತೆಗೆ ಸರ್ಕಾರಕ್ಕೂ ಒಳ್ಳೆಯ ಹೆಸರು ಬರುತ್ತದೆ. ಪ್ರತಿ ತಿಂಗಳಲ್ಲಿ ಒಂದು ಅಥವಾ ಎರಡು ಆನ್​ಲೈನ್ ಮೂಲಕ ನಡೆಯುವ ಚರ್ಚೆ ವೇಳೆ ಸಂಗ್ರಹಿಸಿದ ಮಾಹಿತಿ, ಅಭಿಪ್ರಾಯಗಳಿಗೆ ವರಿಷ್ಠರು ಮಣೆ ಹಾಕಿದ್ದಾರೆ. ಬಹುತೇಕ ಸಚಿವರು ‘ನಿರ್ದೇಶಕರ’ ಪಾತ್ರಧಾರಿಗಳು. ಅಂದರೆ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಕೈತೊಳೆದುಕೊಳ್ಳುತ್ತಿದ್ದಾರೆ ಎನ್ನುವುದು ಮೌಲ್ಯಮಾಪನ ವೇಳೆ ದೆಹಲಿ ನಾಯಕರು ಗಮನಿಸಿದ್ದಾರೆ. ಸಚಿವರಿಗಿಂತ ಹೆಚ್ಚಿಗೆ ಸಿಎಂ ಬೊಮ್ಮಾಯಿ ಸುತ್ತುತ್ತಿದ್ದಾರೆ. ಕೆಲವರಂತೂ ಕ್ಷೇತ್ರಕ್ಕೆ ಸೀಮಿತವೆಂಬ ಸಾರ್ವಜನಿಕರ ಟೀಕೆ-ಟಿಪ್ಪಣಿಗಳು ಪಕ್ಷದ ರಾಜ್ಯ ನಾಯಕರ ಕಿವಿಗೂ ತಲುಪಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು ರಾಜ್ಯ ಪ್ರವಾಸ ಕೈಗೊಳ್ಳುವ ರೀತಿಯಲ್ಲಿ ರಾಜ್ಯದ ಸಚಿವರು ಜಿಲ್ಲಾ ಪ್ರವಾಸ ಕೈಗೊಳ್ಳಬೇಕು ಎನ್ನುವುದು ಸೂಚನೆಯ ಸಾರ.
ಇದೆಂತಹ ಸಂವೇದನಾಶೀಲತೆ?:ರಾಯಚೂರಿನಲ್ಲಿ ಕಲುಷಿತ ನೀರು ಸೇವಿಸಿ ಐದು ಜನ ಮೃತಪಟ್ಟು ಹಲವರು ಅಸ್ವಸ್ಥೆಯಿಂದ ನರಳುತ್ತಿದ್ದಾರೆ. ಇಂತಹ ದುರಂತ ಸಂಭವಿಸಿದಾಗ ಸಂಬಂಧಿಸಿದ ಸಚಿವರು ಖುದ್ದು ಭೇಟಿ ನೀಡುವುದಿದೆ. ಸಿಎಂ ಬೊಮ್ಮಾಯಿ ತಕ್ಷಣ ತನಿಖೆಗೆ ಆದೇಶಿಸಿ, ಪರಿಹಾರ ಪ್ರಕಟಿದರು. ಆದರೆ ದುರಂತದ ಸ್ಥಳಕ್ಕೆ ಸಚಿವರಿರಲಿ, ಉಸ್ತುವಾರಿ ಕಾರ್ಯದರ್ಶಿ ಅಥವಾ ವಿಭಾಗಾಧಿಕಾರಿ ಕೂಡ ತಲೆ ಹಾಕಿಲ್ಲ. ಬೊಮ್ಮಾಯಿ ತಮ್ಮದು ಸಂವೇದನಾಶೀಲ ಸರ್ಕಾರವೆಂದು ಪದೇಪದೆ ಹೇಳಿದ್ದಾರೆ. ಈ ಘಟನೆ ಉದಾಹರಿಸುವ ಮೂಲಕ ಇದೆಂತಹ ಸಂವೇದನಾಶೀಲತೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ ಎಂದು ಪಕ್ಷದ ಮೂಲಗಳು ಬೇಸರ ವ್ಯಕ್ತಪಡಿಸಿವೆ. ಆಡಳಿತದಲ್ಲಿ ಕ್ಷಮತೆ, ಅಭಿವೃದ್ಧಿಗೆ ವೇಗಕ್ಕೆ ನಿರ್ದೇಶನ, ಸೂಚನೆಗಳು ಸಾಲದು. ಮಂತ್ರಿ ಮಂಡಲದ ಎಲ್ಲ ಸದಸ್ಯರು ಸಕ್ರಿಯವಾಗಬೇಕು ಎನ್ನುವುದು ವರಿಷ್ಠರ ಸಂದೇಶದ ಭಾಗವಾಗಿದೆ.
ಜಿಲ್ಲೆಗಳಿಗೂ ಪರಿಶೀಲನೆ ವಿಸ್ತರಣೆ:ಬಜೆಟ್​ನಲ್ಲಿ ಘೋಷಿಸಿದ ಪ್ರಮುಖ ಯೋಜನೆಗಳಿಗೆ ಒಂದು ತಿಂಗಳಲ್ಲಿ ಆದೇಶ ಹೊರಡಿಸುವಂತೆ ಸಿಎಂ ಬೊಮ್ಮಾಯಿ ನೋಡಿಕೊಂಡಿದ್ದು, ಆ ನಿಟ್ಟಿನಲ್ಲಿ ಕ್ರಮಗಳಾಗಿವೆ. ಹಾಗೆಯೇ ಬಜೆಟ್​ನಲ್ಲಿ ಪ್ರಸ್ತಾಪಿಸಿದ ಯೋಜನೆಗಳ ಅನುಷ್ಠಾನ ಕುರಿತು ರಾಜ್ಯಮಟ್ಟದ ಉನ್ನತ ಅಧಿಕಾರಿಗಳ ಜತೆ ಎರಡು ಬಾರಿ ಪರಿಶೀಲನಾ ಸಭೆ ನಡೆಸಿದ್ದಾರೆ. ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಈ ಜವಾಬ್ದಾರಿ ಹೊರಿಸಿ ಕೈಬಿಡಬಾರದು. ಆಯಾ ಜಿಲ್ಲಾ ಹಂತಕ್ಕೂ ಈ ಪರಿಶೀಲನಾ ಕ್ರಮ ವಿಸ್ತರಿಸಿ, ಸಂಬಂಧಿಸಿದ ಸಚಿವರು ಖುದ್ದು ಪಾಲ್ಗೊಳ್ಳಬೇಕು. ವಿಧಾನಸಭೆ ಕ್ಷೇತ್ರಮಟ್ಟದಲ್ಲಿ ಪಕ್ಷದ ಶಾಸಕರು ಅನುಷ್ಠಾನದ ನಿಗಾ ವಹಿಸಬೇಕು. ಇದು ಯೋಜನೆ ಪರಿಣಾಮಕಾರಿ ಜಾರಿಯೊಂದಿಗೆ ಜನರ ವಿಶ್ವಾಸವೃದ್ಧಿಗೆ ನೆರವಾಗುತ್ತದೆ.
ಕದ್ದವರ ಸುಳಿವು ಕೊಟ್ಟ ಬ್ಲೇಡ್​; 400 ಅಂಗಡಿಗಳಿಗೆ ಅಲೆದಾಡಿ ಕಳ್ಳರನ್ನು ಪತ್ತೆ ಮಾಡಿದ ಪೊಲೀಸರು!
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × 5 =
Remember me
