ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಮತ್ತು ಆಸ್ಟ್ರಿಯಾ ಪ್ರವಾಸ ಮುಗಿಸಿ ಗುರುವಾರ ಬೆಳಗ್ಗೆ(ಜು.11) ದೆಹಲಿ ತಲುಪಿದ್ದಾರೆ.
ಆಸ್ಟ್ರಿಯಾದಿಂದ ಬುಧವಾರ ಹೊರಟ ಅವರು ಗುರುವಾರ ನವದೆಹಲಿಗೆ ಆಗಮಿಸಿದರು. ಅಧಿಕಾರಿಗಳು ಅವರನ್ನು ಸ್ವಾಗತಿಸಿದರು. ಮೋದಿ ಆಸ್ಟ್ರಿಯಾದಿಂದ ನಿರ್ಗಮಿಸಿದ ನಂತರ, ಪ್ರಧಾನಿ ಕಾರ್ಯಾಲಯವು ಸಾಮಾಜಿಕ ಮಾಧ್ಯಮ X ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಗೆ ವಾಪಸ್ಸಾಗುತ್ತಿದ್ದಾರೆ ಎಂದು ಹೇಳಿತ್ತು.
ಇದನ್ನೂ ಓದಿ:ಐಸಿಸಿ ಚಾಂಪಿಯನ್ಸ್ ಟ್ರೋಫಿ.. ಆ ದೇಶ ಬಿಟ್ಟು ಬೇರೆಡೆ ನಡೆದರೆ ಮಾತ್ರ ಟೀಮ್​ ಇಂಡಿಯಾ ಭಾಗಿ?!
ರಷ್ಯಾಗೆ ಮಂಗಳವಾರ ತೆರಳಿದ್ದ ಪ್ರಧಾನಿ ಮೋದಿಯವರಿಗೆ ಪುಟಿನ್ ಅವರು ಔಪಚಾರಿಕವಾಗಿ ‘ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ಅಪೊಸ್ತಲ್’ ನೀಡಿ ಗೌರವಿಸಿದರು. ಇದು ರಷ್ಯಾದ ಅತ್ಯುನ್ನತ ಗೌರವವಾಗಿದೆ. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಶ್ರಮಿಸಿದ್ದಕ್ಕಾಗಿ ಮೋದಿ ಅವರಿಗೆ ಈ ಗೌರವ ಲಭಿಸಿದೆ. ಭಾರತ ಮತ್ತು ರಷ್ಯಾ ತಮ್ಮ ವ್ಯೂಹಾತ್ಮಕ ಪಾಲುದಾರಿಕೆಯನ್ನು ಗಾಢವಾಗಿಸಲು ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಬದ್ಧವಾಗಿವೆ ಎಂಬುದು ಉಭಯ ನಾಯಕರ ಭೇಟಿ ಬಳಿಕ ದೃಢಪಟ್ಟಂತಾಗಿದೆ.
ರಷ್ಯಾ ನಂತರ ಪ್ರಧಾನಿ ಮೋದಿ ಆಸ್ಟ್ರಿಯಾಕ್ಕೆ ಭೇಟಿ ನೀಡಿದರು. ಅಲ್ಲಿಯೂ ಅವರಿಗೆ ಆತ್ಮೀಯ ಸ್ವಾಗತ ದೊರೆಯಿತು. ಭಾರತ ಮತ್ತು ಆಸ್ಟ್ರಿಯಾ ನಡುವಿನ 75 ವರ್ಷಗಳ ಸಂಬಂಧದ ಇತಿಹಾಸದಲ್ಲಿ, ಕಳೆದ 40 ವರ್ಷಗಳಲ್ಲಿ ಪ್ರಧಾನಿಯೊಬ್ಬರು ಆಸ್ಟ್ರಿಯಾಕ್ಕೆ ಭೇಟಿ ನೀಡಿರುವುದು ಇದೇ ಮೊದಲು. ‘X’ ಪೋಸ್ಟ್‌ನಲ್ಲಿ, “ನನ್ನ ಆಸ್ಟ್ರಿಯಾ ಭೇಟಿ ಐತಿಹಾಸಿಕವಾಗಿದೆ. ನಮ್ಮ ಎರಡು ದೇಶಗಳ ನಡುವಿನ ಸ್ನೇಹ ಹೊಸ ಬಲವನ್ನು ಪಡೆದುಕೊಂಡಿದೆ. ವಿಯೆನ್ನಾದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದಕ್ಕೆ ಸಂತೋಷವಾಗಿದೆ ಎಂದು ಮೋದಿ ಹೇಳಿದ್ದಾರೆ.
ಸಮುದ್ರ ತೀರದಲ್ಲಿ ಪ್ರಿಯಾಂಕಾ ಚೋಪ್ರಾ..ಬಿಡುವಿನ ವೇಳೆ ನಟಿ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ ಮೆಚ್ಚುಗೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + three =
Remember me
