ನವದೆಹಲಿ:ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷದ ಬಣವಾಗ ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟ (I.N.D.I.A) ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಗುರುವಾರ ಗುಜರಾತ್ ನ ರಾಜಕೋಟ್ ನಲ್ಲಿ ನಡೆದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, “UPA ಗುಂಪು ತಮ್ಮ ಹೆಸರನ್ನು ಬದಲಾಯಿಸಿದೆ. ಆದರೆ ಅವುಗಳಲ್ಲಿ “ಅದೇ ಮುಖಗಳು, ಅದೇ ಪಾಪಗಳು ಸೇರಿಕೊಂಡಿವೆ. ಇವರು ಇನ್ನೂ ಅದೇ ಅಭ್ಯಾಸ ಮತ್ತು ಅದೇ ವಿಧಾನಗಳನ್ನು ಬಳಸುತ್ತಿದ್ದಾರೆ” ಎಂದಿದ್ದಾರೆ.
ಇದನ್ನೂ ಓದಿ:ನಮ್ಮ ಮೈತ್ರಿಕೂಟಕ್ಕೆ ‘INDIA’ ಅಂತ ನಾಮಕರಣ ಮಾಡಿದ್ದೇವೆ: ಮಲ್ಲಿಕಾರ್ಜುನ ಖರ್ಗೆ
#WATCH| Gujarat: "Now when the nation is moving forward, some people are not liking it…they are upset* with the fact that dreams of people are getting accomplished, that's why these corrupts and dynasts have changed the name of their group. Faces, sins, habits, all are the…pic.twitter.com/ACajw3xMoa— ANI (@ANI)July 27, 2023
#WATCH| Gujarat: "Now when the nation is moving forward, some people are not liking it…they are upset* with the fact that dreams of people are getting accomplished, that's why these corrupts and dynasts have changed the name of their group. Faces, sins, habits, all are the…pic.twitter.com/ACajw3xMoa
ಭಾಷಣದಲ್ಲಿ ಪ್ರಧಾನಿ, “ಪ್ರತಿಪಕ್ಷವು “ಡಬಲ್ ಸ್ಟ್ಯಾಂಡರ್ಡ್ಸ್​” ಹೊಂದಿದ್ದು ಸರ್ಕಾರ ಏನು ಮಾಡಿದರೂ ಅದರ ವಿರುದ್ಧ ವಾದ ಮಾಡುತ್ತದೆ ಎಂದು ಅವರು ಹೇಳಿದರು. “ಮಧ್ಯಮ ವರ್ಗವು ಅಗ್ಗದ ದರದಲ್ಲಿ ವಸ್ತುಗಳನ್ನು ಪಡೆದರೆ, ರೈತರು ತಮ್ಮ ಉತ್ಪನ್ನಗಳನ್ನು ಸರಿಯಾದ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳುತ್ತಾರೆ. ರೈತರು ತಮ್ಮ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಪಡೆದಾಗ, ಹಣದುಬ್ಬರವಿದೆ ಎಂದು ಅವರು ಹೇಳುತ್ತಾರೆ. ಈ ಡಬಲ್ ಸ್ಟ್ಯಾಂಡರ್ಡ್ ಅವರ ರಾಜಕೀಯ” ಎಂದು ಟೀಕೆ ಮಾಡಿದ್ದಾರೆ.
ಇದನ್ನೂ ಓದಿ:ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್​ ಆಧಾರ್​ ಕಾರ್ಡ್​ ತಿರುಚಿದ ಆರೋಪ; ಯುವಕ ಅರೆಸ್ಟ್​
ಪ್ರಧಾನ ಮಂತ್ರಿ ಪ್ರತಿಪಕ್ಷದ ಬಣವನ್ನು “ಕುಟುಂಬ ರಾಜಕಾರಣ ಮಾಡುವ ಭ್ರಷ್ಟರು” ಎಂದು ಕರೆದು “ಇದೀಗ ಅವರು ತಮ್ಮ ಗುಂಪಿನ ಹೆಸರನ್ನು ಬದಲಾಯಿಸಿದ್ದಾರೆ. ಏಕೆಂದರೆ ಜನರು ಅವರ ಕನಸುಗಳನ್ನು ನನಸು ಮಾಡಿಕೊಳ್ಳುತ್ತಿದ್ದಾರೆ ಎಂಬ ಅಂಶದಿಂದ ಅವರು ಅಸಮಾಧಾನಗೊಂಡಿದ್ದಾರೆ. ದೇಶವು ಮುಂದೆ ಸಾಗುತ್ತಿದೆ. ಇದು ಕೆಲವರಿಗೆ ಇಷ್ಟವಿಲ್ಲ. ಅದಕ್ಕಾಗಿಯೇ ಈ ಭ್ರಷ್ಟರು ಮತ್ತು ‘ರಾಜವಂಶಿ”ಗಳು ತಮ್ಮ ಗುಂಪಿನ ಹೆಸರನ್ನು ಬದಲಾಯಿಸಿವೆ “ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ:VIDEO| ಮಣಿಪುರ ಗಲಭೆ ಕುರಿತು ಪ್ರಧಾನಿ ಮೋದಿ ಮೌನವಾಗಿದ್ದೇಕೆ: ಮಲ್ಲಿಕಾರ್ಜುನ ಖರ್ಗೆ
ಪ್ರಧಾನಿ ಮೋದಿ, ಹಿಂದಿನ ಯುಪಿಎ ಸರ್ಕಾರದ ಆಳ್ವಿಕೆಯಲ್ಲಿ ಹಣದುಬ್ಬರ ದರವು ಶೇಕಡಾ 10ರಷ್ಟು ಮುಟ್ಟಿತ್ತು ಎಂದು ಹೇಳಿದರು. ಆದರೆ ಬಿಜೆಪಿ ಸರ್ಕಾರ ಸಾಂಕ್ರಾಮಿಕ ಮತ್ತು ಯುದ್ಧದ ಹೊರತಾಗಿಯೂ ಅವರ ಸರ್ಕಾರ ಹಣದುಬ್ಬರವನ್ನು ನಿಯಂತ್ರಣದಲ್ಲಿರಿಸಿತು ಎಂದು ಅವರು ಹೇಳಿದರು. “ಇಂದು, ನಮ್ಮ ನೆರೆಯ ರಾಷ್ಟ್ರಗಳಲ್ಲಿ ಹಣದುಬ್ಬರ 25-30 ಪ್ರತಿಶತದಷ್ಟು ಹೆಚ್ಚುತ್ತಿದೆ. ಆದರೆ ಭಾರತದಲ್ಲಿ ಪರಿಸ್ಥಿತಿ ಹಾಗಿಲ್ಲ. ನಾವು ಹಣದುಬ್ಬರವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದೇವೆ ಮತ್ತು ಭವಿಷ್ಯದಲ್ಲಿ ಇದನ್ನು ಮುಂದುವರಿಸುತ್ತೇವೆ” ಎಂದು ಪ್ರಧಾನಿ ರಾಜ್ ಕೋಟ್ ನಲ್ಲಿ ಜನಸಮೂಹಕ್ಕೆ ತಿಳಿಸಿದರು.
ಇದನ್ನೂ ಓದಿ:ಈ ಮಹಿಳೆ, ಅಧ್ಯಕ್ಷರಾದದ್ದು ಪ್ರಧಾನಿ ಮೋದಿಯಂತೆ ಚಹಾ ಮಾರಿ!
ವಿರೋಧ ಪಕ್ಷದ ಪಕ್ಷಗಳನ್ನು ದೂಷಿಸುತ್ತಾ, ಪ್ರಧಾನ ಮಂತ್ರಿ ಮೋದಿ, “ಇಂದು ಅವರ ಸರ್ಕಾರ ಇದ್ದಿದ್ದರೆ, ಹಾಲು ಪ್ರತಿ ಲೀಟರ್ ಗೆ 300 ರೂ.ಗಳಷ್ಟು ಇರುತ್ತಿತ್ತು. ದ್ವಿದಳ ಧಾನ್ಯಗಳಿಗೆ ಪ್ರತಿ ಕೆಜಿಗೆ 500 ರೂ. ಬೆಲೆ ತೆರಬೇಕಾಗುತ್ತಿತ್ತು” ಎಂದು ಟೀಕೆ ಮಾಡಿದ್ದಾರೆ(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 14 =
Remember me
