ನ್ಯೂಯಾರ್ಕ್:ಭಯೋತ್ಪಾದನೆಯನ್ನು ರಾಜಕೀಯ ಅಸ್ತ್ರವಾಗಿ ಬಳಸುವ ಪ್ರತಿಗಾಮಿ ಧೋರಣೆಯ ರಾಷ್ಟ್ರಗಳು ತಮ್ಮ ವಿನಾಶವನ್ನು ತಾವೇ ಆಹ್ವಾನಿಸಿಕೊಳ್ಳುತ್ತವೆ ಎಂದು ವಿಶ್ವಸಂಸ್ಥೆಯ ಮಹಾಧಿವೇಶನದ ಜಾಗತಿಕ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನಕ್ಕೆ ಚಾಟಿ ಬೀಸಿದ್ದಾರೆ. ಜತೆಗೆ ಚೀನಾದ ಆಕ್ರಮಣಕಾರಿ ನೀತಿಯನ್ನು ಪರೋಕ್ಷವಾಗಿ ಪ್ರಸ್ತಾಪಿಸಿ, ಬಿಸಿ ಮುಟ್ಟಿಸಿದ್ದಾರೆ. ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡು ಭಾರತಕ್ಕೆ ಭದ್ರತಾ ಸವಾಲು ಸೃಷ್ಟಿಸಿರುವ ತಾಲಿಬಾನ್ ಸಂಘಟನೆಗೂ ಅವರು ಎಚ್ಚರಿಕೆಯ ಸಂದೇಶ ರವಾನೆ ಮಾಡಿದ್ದಾರೆ.
‘ಭಯೋತ್ಪಾದನೆ, ಉಗ್ರವಾದಗಳು ರಾಜಕೀಯ ಅಸ್ತ್ರಗಳಲ್ಲ. ಅವುಗಳನ್ನು ಬಳಸುವುದನ್ನು ರಾಷ್ಟ್ರಗಳು ನಿಲ್ಲಿಸಬೇಕು. ಭಯೋತ್ಪಾದನೆಯನ್ನು ರಾಜಕೀಯ ಅಸ್ತ್ರವಾಗಿ ಬಳಸುವ ರಾಷ್ಟ್ರಗಳಿಗೂ ಸಂಕಷ್ಟ ತಪ್ಪಿದ್ದಲ್ಲ. ಅದು ಎರಡಲಗಿನ ಕತ್ತಿ ಎಂಬುದನ್ನು ನೆನಪಿಟ್ಟುಕೊಳ್ಳಬೇಕು’ಎಂದು ಮೋದಿ ಪಾಕಿಸ್ತಾನ ವಿರುದ್ಧ ವಾಗ್ದಾಳಿ ನಡೆಸಿದರು. ಭಯೋತ್ಪಾದನೆಗೆ ಸಂಬಂಧಿಸಿ ಜಾಗತಿಕವಾಗಿ ವಿಸõತ ಪ್ರತಿಕ್ರಿಯೆ ಬೇಕಾಗಿದೆ. ಎಲ್ಲ ರಾಷ್ಟ್ರಗಳು ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಮುಕ್ತವಾಗಿ ಕೈಜೋಡಿಸಬೇಕು. ಅಫ್ಘಾನಿಸ್ತಾನದ ನೆಲವನ್ನು ಭಯೋತ್ಪಾದನೆಗೆ ಬಳಸದಂತೆ ಖಾತರಿಪಡಿಸಬೇಕು ಎಂದು ಮೋದಿ ವಿಶ್ವ ರಾಷ್ಟ್ರಗಳನ್ನು ಎಚ್ಚರಿಸಿದರು.
ಅಫ್ಘಾನಿಸ್ತಾನದ ಅರಾಜಕತೆಯನ್ನೇ ಬಂಡವಾಳ ಮಾಡಿಕೊಳ್ಳಲು ಕೆಲ ರಾಷ್ಟ್ರಗಳು ಹುನ್ನಾರ ನಡೆಸಿವೆ ಎನ್ನುವ ಮೂಲಕ ಪಾಕಿಸ್ತಾನ ಹಾಗೂ ಚೀನಾಗೆ ಚುರುಕು ಮುಟ್ಟಿಸಿದರು. ಸ್ವಹಿತಾಸಕ್ತಿ ಕಾಪಾಡಲು ಇಂತಹ ರಾಷ್ಟ್ರಗಳು ಅಫ್ಘನ್ ಸನ್ನಿವೇಶವನ್ನು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇದೆ. ಅಲ್ಲಿನ ಅಲ್ಪಸಂಖ್ಯಾತರಿಗೆ ಈಗ ನೆರವಿನ ಅವಶ್ಯಕತೆ ಇದೆ. ಅದನ್ನು ಪೂರ್ಣಗೊಳಿಸುವ ಹೊಣೆಗಾರಿಕೆ ನಮ್ಮೆಲ್ಲರದ್ದು ಎಂದು ಪ್ರಧಾನಿ ಮೋದಿ ಹೇಳಿದರು.
ಚಾಣಕ್ಯ, ಉಪಾಧ್ಯಾಯ, ಟಾಗೋರ್ ಪ್ರಸ್ತಾಪ:ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಚಾರ್ಯ ಚಾಣಕ್ಯ, ದೀನ ದಯಾಳ್ ಉಪಾಧ್ಯಾಯ, ರವೀಂದ್ರನಾಥ ಟಾಗೋರ್ ಅವರನ್ನು ಸ್ಮರಿಸಿಕೊಂಡರು. ಸರಿಯಾದ ಕೆಲಸವನ್ನು ಸರಿಯಾದ ಸಮಯದಲ್ಲಿ ಮಾಡದೇ ಇದ್ದರೆ ಸಮಯವೇ ಆ ಕೆಲಸದ ಯಶಸ್ಸನ್ನು ನಿರ್ನಾಮ ಮಾಡಿಬಿಡುತ್ತದೆ ಎಂಬ ಚಾಣಕ್ಯ ನುಡಿಯನ್ನು ಪ್ರಸ್ತಾಪಿಸಿದರು.
ಭಾರತದಲ್ಲಿ ಲಸಿಕೆ ಉತ್ಪಾದಿಸಿ:ಶತಮಾನದ ಅವಧಿಯಲ್ಲಿ ಎಂದೂ ಅನುಭವಿಸದ ಅತ್ಯಂತ ಕೆಟ್ಟ ಸಾಂಕ್ರಾಮಿಕ ರೋಗವನ್ನು ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಜಗತ್ತು ಎದುರಿಸಿದೆ. ಈ ಸಂಕಷ್ಟದಿಂದ ಜನರನ್ನು ಪಾರು ಮಾಡಲು ಅವರಲ್ಲಿ ವಿಶ್ವಾಸ ತುಂಬಲು ಲಸಿಕೆ ಅಭಿಯಾನಕ್ಕೆ ಹೆಚ್ಚಿನ ಒತ್ತು ನೀಡಬೇಕು. ಲಸಿಕೆ ಉತ್ಪಾದನೆ ಮಾಡುವುದಕ್ಕೆ ಭಾರತಕ್ಕೆ ಬನ್ನಿ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ವೇದಿಕೆಯಿಂದ ಜಾಗತಿಕ ಫಾರ್ವ ಕಂಪನಿಗಳಿಗೆ ಕರೆ ನೀಡಿದರು. ಭಾರತದಲ್ಲಿ 12 ವರ್ಷ ಮೇಲ್ಪಟ್ಟವರಿಗೆ ನೀಡುವುದಕ್ಕೆ ಇದೇ ಮೊದಲ ಬಾರಿ ಡಿಎನ್​ಎ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ಲಸಿಕೆ ಅಭಿವೃದ್ಧಿ ಮತ್ತು ಉತ್ಪಾದನೆ ಮಾಡುವಲ್ಲಿ ಭಾರತ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಜಗತ್ತಿಗೆ ಅವುಗಳನ್ನು ಪೂರೈಸುವುದಕ್ಕೂ ಕ್ರಮ ತೆಗೆದುಕೊಂಡಿದೆ ಎಂದು ಮೋದಿ ವಿವರಿಸಿದರು.
ಚೀನಾ ಅತಿಕ್ರಮಣಕ್ಕೆ ವಿರೋಧ:ಅಂತಾರಾಷ್ಟ್ರೀಯ ವಾಣಿಜ್ಯ-ವಹಿವಾಟಿಗೆ ಸಾಗರ ಮಾರ್ಗಗಳೇ ಜೀವನಾಡಿಗಳು. ಅವುಗಳು ನಿರಂಕುಶ ಮತ್ತು ಮುಕ್ತವಾಗಿರಬೇಕು. ಅವುಗಳನ್ನು ಭೌಗೋಳಿಕ ವಿಸ್ತರಣಾವಾದಕ್ಕೆ ಬಳಸಿಕೊಳ್ಳಬಾರದು. ಸಾಗರ ಸಂಪನ್ಮೂಲಗಳನ್ನು ಎಲ್ಲ ದೇಶಗಳು ಎಚ್ಚರಿಕೆಯಿಂದ ಬಳಸಬೇಕು. ಅವುಗಳನ್ನು ಶೋಷಿಸಬಾರದು. ವಿಸ್ತರಣಾವಾದದಿಂದ ಸಾಗರಗಳನ್ನು ಜಗತ್ತು ರಕ್ಷಿಸಬೇಕು ಮತ್ತು ವಾಣಿಜ್ಯ ವಹಿವಾಟಿಗೆ ಮುಕ್ತವಾಗಿ ಇರಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.
ಇಮ್ರಾನ್ ಖಾನ್​ಗೆ ಸ್ನೇಹಾ ದುಬೆ ತಿರುಗೇಟು:ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾಷಣಕ್ಕೆ ವಿಶ್ವಸಂಸ್ಥೆಯ ಭಾರತದ ಪ್ರತಿನಿಧಿ ಸ್ನೇಹಾ ದುಬೆ ತಿರುಗೇಟು ನೀಡಿದ್ದಾರೆ. ಅಕ್ರಮವಾಗಿ ಹಿಡಿದಿಟ್ಟುಕೊಂಡಿರುವ ಕಾಶ್ಮೀರದ ಭಾಗವನ್ನು ಮುಕ್ತಗೊಳಿಸಿ. ಭಯೋತ್ಪಾದಕರನ್ನು ಬೆಂಬಲಿಸುವುದರಲ್ಲಿ ಪಾಕಿಸ್ತಾನ ಸಕ್ರಿಯವಾಗಿದೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿ. ವಿಶ್ವಸಂಸ್ಥೆ ವೇದಿಕೆಯನ್ನು ಪಾಕ್ ದುರ್ಬಳಕೆ ಮಾಡುತ್ತಿರುವುದು ಇದೇ ಮೊದಲಲ್ಲ. ಅವರ ದೇಶದಲ್ಲಿ ಉಗ್ರರು ಮುಕ್ತವಾಗಿ ಪ್ರಭಾವಿಗಳಂತೆ ತಿರುಗಾಡುತ್ತಿದ್ದಾರೆ ಎಂದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
