ನವದೆಹಲಿ:ದೆಹಲಿಯ ಜವಹರಲಾಲ್​ ನೆಹರು ವಿಶ್ವವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಈ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಅನಾವರಣಗೊಳಿಸಿದರು. ಆ ಸಮಯದಲ್ಲಿ ಮಾತನಾಡಿದ ಅವರು, ಈ ಪ್ರತಿಮೆಯನ್ನು ಪ್ರೇರಣೆಯಾಗಿ ತೆಗೆದುಕೊಳ್ಳುವಂತೆ ಯುವ ಜನತೆಗೆ ಕರೆ ನೀಡಿದ್ದಾರೆ.
ಇದನ್ನೂ ಓದಿ:ಇನ್ನೂ ಮುಗಿದಿಲ್ಲ ಅಮೆರಿಕ ಫೈಟ್​: ಜಾರ್ಜಿಯಾದಲ್ಲಿ ಮರು ಎಣಿಕೆ!
ಯುವಕರು ಅಭಿವೃದ್ಧಿಯ ಪಥದಲ್ಲಿರಬೇಕು ಎನ್ನುವುದು ಸ್ವಾಮಿ ವಿವೇಕಾನಂದರ ನಿರೀಕ್ಷೆಯಾಗಿತ್ತು. ಈ ಪ್ರತಿಮೆ ಅದಕ್ಕೆ ಪ್ರೇರಣೆಯಾಗಲಿ. ದೇಶದ ಬಗ್ಗೆ ಪ್ರೀತಿ ಮತ್ತು ಸಹಾನುಭೂತಿಯನ್ನು ಹುಟ್ಟಿಸಲು ಪ್ರತಿಮೆ ಪ್ರೇರೇಪಿಸಲಿದೆ. ನಮ್ಮಲ್ಲಿ ಸಮರ್ಪಣಾ ಭಾವ ಹೆಚ್ಚುವಂತಾಗಲಿ ಎಂದು ಅವರು ಹೇಳಿದರು.
ದೇಶವನ್ನು ಆತ್ಮನಿರ್ಭರ ಭಾರತವನ್ನಾಗಿ ಮಾಡಲಾಗುತ್ತಿದೆ. 130 ಕೋಟಿಗೂ ಹೆಚ್ಚು ಜನರು ಸ್ವಾವಲಂಭಿ ಭಾರತದ ಕಲ್ಪನೆ ಕಂಡಿದ್ದಾರೆ. ಇದೊಂದು ಸಾಮೂಹಿಕ ಪ್ರಜ್ಞೆ ಹಾಗೂ ಆಕಾಂಕ್ಷೆಯಾಗಲಿದೆ. ಭಾರತದ ಯುವಕರು ಪೂರ್ತಿ ವಿಶ್ವಕ್ಕೆ ಬ್ರಾಂಡ್​ ಇಂಡಿಯಾದ ಬ್ರಾಂಡ್​ ಅಂಬಾಸಿಡರ್​ಗಳು. ಅವರು ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಪ್ರತಿನಿಧಿಸಲಿದ್ದಾರೆ ಎಂದು ಅವರು ಹೇಳಿದರು.
ಇದನ್ನೂ ಓದಿ:ನ.14ರಿಂದ ಅಖಿಲ ಭಾರತ ಸಹಕಾರ ಸಪ್ತಾಹ : ಸಿಎಂ ಬಿಎಸ್‌ವೈ ಉದ್ಘಾಟನೆ
ನಮ್ಮಲ್ಲಿ ಅನೇಕರಿಗೆ ರಾಷ್ಟ್ರೀಯ ಹಿತಾಸಕ್ತಿಗಿಂತ ನಮ್ಮ ವೈಯಕ್ತಿಕ ಸಿದ್ಧಾಂತಗಳೇ ಹೆಚ್ಚಾಗಿರುತ್ತದೆ. ಆದರೆ ಈ ರೀತಿ ಮಾಡುವುದರಿಂದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಾನಿಯಾಗುತ್ತದೆ. ನಾವು ಮೊದಲು ರಾಷ್ಟ್ರದ ಬಗ್ಗೆ ಚಿಂತಿಸಬೇಕು, ನಂತರ ನಮ್ಮ ಸಿದ್ಧಾಂತಗಳ ಬಗ್ಗೆ ಯೋಚಿಸಬೇಕು ಎಂದು ಪ್ರಧಾನಿ ಹೇಳಿದ್ದಾರೆ. (ಏಜೆನ್ಸೀಸ್​)
ಮೋಸ ಮಾಡಿ ಜಯ ಗಳಿಸಿತಾ ಬಿಜೆಪಿ? ಅಂಚೆ ಮತಗಳ ಮರುಎಣಿಕೆಗೆ ತೇಜಸ್ವಿ ಒತ್ತಾಯ

ರಕ್ತದಲ್ಲಿ ಮುಳುಗಿದ ಪೆನ್ನು-ಪೆನ್ಸಿಲ್​, ಗಾಯಗೊಂಡ ಬಾಲಕಿ; ನಿಜಕ್ಕೂ ಇದೆಲ್ಲ ಪೇಶಾವರ ಮದರಸಾ ಸ್ಫೋಟದಲ್ಲಿ ಆಗಿತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − ten =
Remember me
