ನವದೆಹಲಿ:ಜನರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಜನರಿಗಾಗಿ ಸತತವಾಗಿ ಕೆಲಸ ಮಾಡುವ ಮೂಲಕ ಬಿಜೆಪಿ ಮುಂದಿನ 25 ವರ್ಷಗಳಿಗೆ ಗುರಿಯನ್ನು ನಿಗದಿಪಡಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಎಲ್ಲ ರೀತಿಯ ಸವಾಲುಗಳನ್ನು ಎದುರಿಸಿ ಆ ರೀತಿಯ ಗುರಿ ನಿಗದಿಗೆ ಇದು ಸಕಾಲ ಎಂದು ಪ್ರತಿಪಾದಿಸಿದರು. ರಾಜಸ್ಥಾನ ಜೈಪುರದಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿದ ಮೋದಿ, ಭಾರತವು ಆಶೋತ್ತರಗಳು ತುಂಬಿರುವ ದೇಶವಾಗಿದೆ. ಕೆಲಸಗಳು ನಡೆದು ಅಂತಿಮ ಫಲಿತಾಂಶ ಸಿಗುವುದನ್ನು ಜನರು ಎದುರು ನೋಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಜವಾಬ್ದಾರಿ ತುಂಬಾ ಹೆಚ್ಚಿರುತ್ತದೆ ಎಂದರು. ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಈ ತಿಂಗಳು 8 ವರ್ಷ ಪೂರ್ಣಗೊಳ್ಳುತ್ತದೆ ಎಂದವರು ಹೇಳಿದರು.
ಪ್ರಾದೇಶಿಕ ಭಾಷೆಗಳು ಸಂಸ್ಕೃತಿಯ ಬಿಂಬ:ಭಾಷಾ ವಿವಾದವನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಪ್ರತಿ ಪ್ರಾದೇಶಿಕ ಭಾಷೆಯಲ್ಲೂ ಭಾರತೀಯ ಸಂಸ್ಕೃತಿ ಪ್ರತಿಫಲಿಸುತ್ತಿದೆ. ಅವುಗಳು ಪೂಜೆಗೆ ಅರ್ಹ ಎಂದು ಅಭಿಪ್ರಾಯಪಟ್ಟರು. ಹೊಸ ಶಿಕ್ಷಣ ನೀತಿಯಲ್ಲಿ ಪ್ರತಿ ಪ್ರಾದೇಶಿಕ ಭಾಷೆಗೆ ಮಹತ್ವ ನೀಡಲಾಗಿದೆ ಎಂದರು.
ಕುಟುಂಬ ರಾಜಕಾರಣದಿಂದ ಪ್ರಜಾಪ್ರಭುತ್ವಕ್ಕೆ ಪೆಟ್ಟು:ಕುಟುಂಬ ರಾಜಕಾರಣವು ಪ್ರಜಾಪ್ರಭುತ್ವಕ್ಕೆ ತುಂಬಾ ಅಪಾಯಕಾರಿ. ವಂಶಾಡಳಿತವಾದದ ಪಕ್ಷಗಳು ಯಾವಾಗಲೂ ನಿರ್ದಿಷ್ಟ ಕುಟುಂಬಗಳನ್ನೇ ಅವಲಂಬಿಸಿರುತ್ತವೆ ಎಂದು ಮೋದಿ ಕಾಂಗ್ರೆಸ್ ವಿರುದ್ಧ ಮತ್ತೊಮ್ಮೆ ಪರೋಕ್ಷ ವಾಗ್ದಾಳಿ ನಡೆಸಿದರು. ಕೆಲವು ಪಕ್ಷಗಳು ಮಹತ್ವದ ವಿಚಾರಗಳಿಂದ ದೇಶದ ಗಮನವನ್ನು ಬೇರೆಡೆ ಸೆಳೆಯುವುದನ್ನು ನಾವು ಕಾಣುತ್ತಿದ್ದೇವೆ. ನಾವು ಅದಕ್ಕೆ ಬಲಿ ಬೀಳಬಾರದು ಹಾಗೂ ಎಚ್ಚರಿಕೆಯಿಂದ ಇರಬೇಕು. ಜನಸಂಘದ ಅವಧಿಯಲ್ಲಿ ನಾವು ನಗಣ್ಯವಾಗಿದ್ದು ಯಾರೂ ನಮ್ಮನ್ನು ಗಮನಿಸುತ್ತಿರಲಿಲ್ಲ. ಆದರೂ ನಮ್ಮ ಕಾರ್ಯಕರ್ತರು ದೇಶ ಕಟ್ಟುವ ನೀತಿಗಳನ್ನು ಕೈಬಿಟ್ಟಿರಲಿಲ್ಲ. ಕಾರ್ಯಕರ್ತರ ಸಂಖ್ಯೆ ಸಣ್ಣದಿದ್ದರೂ ಅವರು ದೇಶಪ್ರೇಮಿಗಳಾಗಿಯೇ ಉಳಿದಿದ್ದರು ಎಂದರು.
ಸರ್ಕಾರಿ ಯೋಜನೆಗಳ ಫಲಾನುಭವಿ ಗಳನ್ನು ಪಕ್ಷ ಕಾರ್ಯಕರ್ತರು, ನಾಯಕರು ಆಗಾಗ್ಗೆ ಭೇಟಿಯಾಗಿ ಕುಶಲ ವಿಚಾರಸಬೇಕು. ಅವರಿಗೆ ತಲುಪಬೇಕಾಗಿದ್ದು, ಸರಿಯಾಗಿ ಸೇರುತ್ತಿದೆಯೆ ಎಂಬ ಮಾಹಿತಿಯನ್ನು ಪಡೆಯಬೇಕು. ಸಮಸ್ಯೆ ಇದ್ದರೆ ಪರಿಹರಿಸಬೇಕು
|ನರೇಂದ್ರ ಮೋದಿಪ್ರಧಾನಿ
ಪದಾಧಿಕಾರಿಗಳ ಸಭೆ:ಬಿಜೆಪಿ ರಾಷ್ಟ್ರೀಯ ಪದಧಿಕಾರಿಗಳ ಸಭೆ ಗುರುವಾರ ಆರಂಭವಾಗಿದೆ. ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅಧ್ಯಕ್ಷತೆ ವಹಿಸಿರುವ ಸಭೆಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಲ್ಲದೆ ಪಕ್ಷದ ರಾಜ್ಯಗಳ ಮುಖ್ಯಸ್ಥರು ಮತ್ತು ಸಂಘಟನಾ ಕಾರ್ಯದರ್ಶಿಗಳು ಭಾಗವಹಿಸಿದ್ದಾರೆ. ಸಂಘಟನಾತ್ಮಕ ವಿಚಾರಗಳಲ್ಲದೆ ಈ ವರ್ಷ ಹಾಗೂ ಮುಂದಿನ ವರ್ಷ ನಡೆಯಲಿರುವ ಅಸೆಂಬ್ಲಿ ಚುನಾವಣೆಗಳ ಸಿದ್ಧತೆಗಳ ಬಗ್ಗೆಯೂ ಸಭೆ ರ್ಚಚಿಸಲಿದೆ ಎಂದು ಮೂಲಗಳು ಹೇಳಿವೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಈ ವರ್ಷಾಂತ್ಯ ಚುನಾವಣೆ. ಛತ್ತೀಸ್​ಗಢ, ರಾಜಸ್ಥಾನ, ತೆಲಂಗಾಣ, ತ್ರಿಪುರಾ, ಮಧ್ಯ ಪ್ರದೇಶ, ಕರ್ನಾಟಕ, ಮೇಘಾಲಯ, ಮಿಜೋರಾಂ ಮತ್ತು ನಾಗಾಲ್ಯಾಂಡ್ ವಿಧಾನ ಸಭೆಗಳಿಗೆ 2023ರಲ್ಲಿ ಚುನಾವಣೆ ನಡೆಯಲಿದೆ.
ಕೆನಡಾದಲ್ಲಿ ಕನ್ನಡ ಮಾತು: ಚಂದ್ರ ಆರ್ಯರಿಗೆ ಭಾರಿ ಬೆಂಬಲ; ಹಿಂಬಾಲಕರ ಸಂಖ್ಯೆಯಲ್ಲಿ ಹೆಚ್ಚಳ…

ಕಡ್ಡಾಯ ನಿವೃತ್ತಿ ಹೊಂದಿದ್ದ ಜಡ್ಜ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:sixteen + two =
Remember me
