ನವದೆಹಲಿ:ಸೇವೆ, ಸಂಕಲ್ಪ, ಸಮರ್ಪಣೆಯೇ ಬಿಜೆಪಿಯ ಸಂಘಟನಾ ಮೌಲ್ಯಗಳಾಗಿವೆ. ಅವುಗಳೇ ಪಕ್ಷ ಚಾಲನಾ ಶಕ್ತಿಗಳು. ಪಕ್ಷವು ಯಾವುದೋ ಒಂದು ಕುಟುಂಬ ಕೇಂದ್ರಿತವಾದುದಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅವರು ಭಾನುವಾರ ದೆಹಲಿಯಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಸಮಾರೋಪ ಭಾಷಣ ಮಾಡಿದರು.
ಬಿಜೆಪಿ ಕಾರ್ಯಕರ್ತರು/ಸದಸ್ಯರು ಪಕ್ಷ ಮತ್ತು ಜನಸಾಮಾನ್ಯರ ನಡುವಿನ ವಿಶ್ವಾಸದ ಸೇತುವಾಗಿ ಕೆಲಸ ಮಾಡಬೇಕು. ಪಕ್ಷ ಯಾವತ್ತಿಗೂ ಜನರೊಂದಿಗೆ ಬೆರೆತುಕೊಂಡೇ ಕೆಲಸ ಮಾಡುತ್ತ ಬಂದಿದೆ. ಪಕ್ಷದ ಇತಿಹಾಸವೇ ಇದಕ್ಕೆ ಸಾಕ್ಷಿ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಗೆಲ್ಲುವುದಕ್ಕೆ ಈ ವಿಶ್ವಾಸವೇ ಕೆಲಸ ಮಾಡಲಿದೆ ಎಂದು ಮೋದಿ ಹೇಳಿದರು.
ಬಿಜೆಪಿ ಒಂದು ಕುಟುಂಬ ಆಧಾರಿತವಾದುದಲ್ಲ; ಬಿಜೆಪಿಯನ್ನು ಒಂದು ಕುಟುಂಬ ಮುನ್ನಡೆಸುತ್ತಿಲ್ಲ. ‘ಸಾರ್ವಜನಿಕ ಕಲ್ಯಾಣದ ಸಂಸ್ಕೃತಿ’ ಪಕ್ಷವನ್ನು ಮುನ್ನಡೆಸುತ್ತಿದೆ. ಕೋವಿಡ್ ಸಂಕಷ್ಟದ ಅವಧಿಯಲ್ಲಿ ಬಿಜೆಪಿ ಕಾರ್ಯಕರ್ತರು ಕೈಗೊಂಡ ಸಮಾಜ ಕಲ್ಯಾಣ ಕಾರ್ಯಗಳೇ ಇದಕ್ಕೆ ಸಾಕ್ಷಿ. ಆಡಳಿತ ಪಕ್ಷ ಜನಸೇವೆಯನ್ನೇ ಕೇಂದ್ರವಾಗಿಟ್ಟುಕೊಂಡು ಕೆಲಸ ಮಾಡುತ್ತದೆ ಎಂದು ಮೋದಿ ಹೇಳಿದರು.
ಡಿವಿಎಸ್ ಗೈರು:ಕಾರ್ಯಕಾರಿಣಿ ಸಭೆಗೆ ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದಗೌಡ ಗೈರು ಹಾಜರಾಗಿದ್ದರು. ಪಕ್ಷದ ಸಂಘಟನಾ ಪ್ರವಾಸಕ್ಕಾಗಿ ‘ಜನ ಸ್ವರಾಜ್ ಯಾತ್ರೆ’ಗೆ 4 ತಂಡಗಳನ್ನು ರಚಿಸಿದ್ದು, ಈ ತಂಡಗಳಲ್ಲಿ ಡಿವಿಎಸ್ ಹೆಸರಿಲ್ಲದಿರುವುದು ಗಮನಾರ್ಹ. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಲ್ಹಾದ ಜೋಶಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ನೇರವಾಗಿ ದೆಹಲಿ ಸಭೆಯಲ್ಲಿ ಭಾಗಿಯಾಗಿದ್ದಾರೆ. ಪಕ್ಷದ ರಾಜ್ಯ ಕಚೇರಿಯ ವರ್ಚುವಲ್ ವೇದಿಕೆ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಚಿವರು, ಮಾಜಿ ಸಚಿವರು ಸೇರಿದಂತೆ ಒಟ್ಟು 13 ಸದಸ್ಯರು ಪಾಲ್ಗೊಂಡಿದ್ದರು.
ಪುನೀತ್, ಉದಾಸಿ ನಿಧನಕ್ಕೆ ಸಂತಾಪ:ಚಿತ್ರನಟ ಪುನೀತ್ ರಾಜ್​ಕುಮಾರ್ ಹಾಗೂ ಮಾಜಿ ಸಚಿವ ಸಿ.ಎಂ. ಉದಾಸಿ ನಿಧನಕ್ಕೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಕಂಬನಿ ಮಿಡಿದು, ಸಂತಾಪ ವ್ಯಕ್ತಪಡಿಸಿದೆ.
ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಮೂಲಕ ಯೋಜನೆ ಹಾಗೂ ಕಾರ್ಯಕ್ರಮಗಳ ಮಾಹಿತಿ ನೀಡಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಅಲ್ಪಾವಧಿಯಲ್ಲಿ ಎರಡು ಲಸಿಕೆ ಸಂಶೋಧನೆ ಹಾಗೂ 100 ಕೋಟಿ ಜನರಿಗೆ ವಿತರಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಲಾಗಿದೆ. ಇದಕ್ಕಾಗಿ ಮೋದಿಯವರಿಗೆ ಸಭೆ ಅಭಿನಂದನೆ ಸಲ್ಲಿಸಿದೆ. ಕರ್ನಾಟಕಕ್ಕೆ ಸಂಬಂಧಿಸಿದಂತೆ ಯಾವುದೇ ವಿಷಯ ಸಭೆಯಲ್ಲಿ ಪ್ರಸ್ತಾಪವಾಗಿಲ್ಲ.
|ಆರ್.ಅಶೋಕ್ಕಂದಾಯ ಸಚಿವ
ಕಮಲ ಪುಷ್ಪ ಉಪಕ್ರಮಕ್ಕೆ ಚಾಲನೆ:ನಮೋ ಆ್ಯಪ್​ನಲ್ಲಿ ಕಮಲ ಪುಷ್ಪ ಎಂಬ ಹೊಸ ಉಪಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಪಕ್ಷ ಸಂಘಟನೆಗಾಗಿ ಜೀವನ ಸಮರ್ಪಿಸಿದ ಕಾರ್ಯಕರ್ತರಿಗೆ ಗೌರವ ಸಲ್ಲಿಸುವ ವಿಶೇಷ ಉಪಕ್ರಮ ಇದು ಎಂದು ಪ್ರಧಾನಿ ಮೋದಿ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
