ನವದೆಹಲಿ:ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತದ ಶಕ್ತಿಸೌಧವಾಗಲಿರುವ ಹೊಸ ಸಂಸತ್ ಭವನಕ್ಕೆ ಮುಂದಿನ ಗುರುವಾರ (ಡಿ. 10) ಮಧ್ಯಾಹ್ನ 1 ಗಂಟೆಗೆ ಶಿಲಾನ್ಯಾಸ ಮುಹೂರ್ತ ನಿಗದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಲೋಕಸಭೆಯ ಸ್ಪೀಕರ್ ಓಂಪ್ರಕಾಶ್ ಬಿರ್ಲಾ ಪ್ರಧಾನಿ ಮೋದಿಯವರನ್ನು ಶನಿವಾರ ಭೇಟಿ ಮಾಡಿ ಆಮಂತ್ರಣ ನೀಡಿದ್ದಾರೆ. 2022ರ 75ನೇ ಸ್ವಾತಂತ್ರೊ್ಯೕತ್ಸವ ಅಂಗವಾಗಿ ಕೈಗೊಂಡಿರುವ ಸೆಂಟ್ರಲ್ ವಿಸ್ಟಾ ಮರುಅಭಿವೃದ್ಧಿ ಯೋಜನೆಯ ಭಾಗವಾಗಿರುವ ಹೊಸ ಸಂಸತ್ ಭವನ ಹಾಲಿ ಸಂಸತ್ ಭವನದ ಸಮೀಪದಲ್ಲಿರುವ ಶ್ರಮಶಕ್ತಿ ಭವನದ ಜಾಗದಲ್ಲಿ 64,500 ಸಾವಿರ ಚದರ ಮೀಟರ್ ವ್ಯಾಪ್ತಿಯಲ್ಲಿ ನಿರ್ಮಾಣ ಆಗಲಿದೆ. ಎರಡು ಅಂತಸ್ತಿನ ಈ ಕಟ್ಟಡ ಭೂಕಂಪ ನಿರೋಧಕ ಆಗಿರಲಿದೆ.
ಪ್ರತಿ ಸಂಸದರಿಗೂ ಪ್ರತ್ಯೇಕ ಕಚೇರಿ:ಹೊಸ ಭವನದಲ್ಲಿ ಪ್ರತಿ ಸಂಸದರಿಗೂ ಪ್ರತ್ಯೇಕ ಕಚೇರಿ ಇರಲಿದ್ದು, ಕಾಗದ ರಹಿತ ಸಂವಹನಕ್ಕಾಗಿ ಡಿಜಿಟಲ್ ಮೂಲಸೌಕರ್ಯ ಒಳಗೊಂಡಿರಲಿದೆ. ಮೊಗಸಾಲೆ (ಲಾಂಜ್), ಕಾನ್​ಸ್ಟಿಟ್ಯೂಷನ್ ಹಾಲ್, ಗ್ರಂಥಾಲಯ, ಸಂಸದೀಯ ಸಮಿತಿ ಕೋಣೆಗಳು, ಭೋಜನದ ಹಾಲ್, ಹೊರಾವರಣದಲ್ಲಿ ವಾಹನ ನಿಲುಗಡೆಗೆ ವಿಪುಲ ಅವಕಾಶ ಇರಲಿದೆ. ವಾಯು ಮತ್ತು ಶಬ್ದ ಮಾಲಿನ್ಯ ತಡೆಯುವಂತಹ ತಂತ್ರಜ್ಞಾನ ಬಳಸಿ ಈ ಕಟ್ಟಡ ನಿರ್ವಣವಾಗಲಿದೆ. ದೇಶದ ಪ್ರಜಾತಂತ್ರ ಪರಂಪರೆಯ ದ್ಯೋತಕವಾದ ಕಾನ್​ಸ್ಟಿಟ್ಯೂಷನ್ ಹಾಲ್ ವಿಸ್ತಾರವಾಗಿರಲಿದ್ದು, ಸಂವಿಧಾನದ ಮೂಲಪ್ರತಿಯ ಡಿಜಿಟಲ್​ರೂಪವನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ಈ ಹಾಲ್ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಇರಲಿದೆ. ಭವಿಷ್ಯದ ದೃಷ್ಟಿಯಿಂದ 888 ಸದಸ್ಯರಿಗೆ ಆಸನ ಕಲ್ಪಿಸುವಷ್ಟು ವಿಶಾಲತೆಯನ್ನು ಲೋಕಸಭೆಯ ಹಾಲ್ ಹೊಂದಿರಲಿದೆ. ರಾಜ್ಯಸಭೆ 384 ಸದಸ್ಯರಿಗೆ ಆಸೀನರಾಗುವಷ್ಟು ದೊಡ್ಡದಾಗಿರಲಿದೆ. ಹಾಲಿ ಲೋಕಸಭೆಯಲ್ಲಿ 543 ಸದಸ್ಯರಿದ್ದು, ರಾಜ್ಯಸಭೆ 245 ಸದಸ್ಯ ಬಲ ಇದೆ.

ಹೊಸ ಸಂಸತ್ ಭವನವು ಪಾರ್ಲಿಮೆಂಟ್ ಎಸ್ಟೇಟ್ ಪ್ಲಾಟ್ ನಂ 118ರಲ್ಲಿ್ಲ ನಿರ್ಮಾಣ ಆಗಲಿದ್ದು, ಹಳೆಯ ಸಂಸತ್ ಭವನದ ಪ್ರತಿರೂಪವಾಗಿರಲಿದೆ. ಇದನ್ನು ಟಾಟಾ ಪ್ರೊಜೆಕ್ಟ್ ಲಿಮಿಟೆಡ್ -ಠಿ; 861.90 ಕೋಟಿ ವೆಚ್ಚದಲ್ಲಿ ನಿರ್ವಿುಸಲಿದೆ. ಕಳೆದ ಸೆಪ್ಟೆಂಬರ್​ನಲ್ಲಿ ಕರೆಯಲಾದ ಟೆಂಡರ್​ನಲ್ಲಿ ಎಲ್ ಆಂಡ್ ಟಿ ಕಂಪನಿ -ಠಿ; 865 ಕೋಟಿ ಅಂದಾಜು ಮಾಡಿತ್ತು. ಕೇಂದ್ರ ಲೋಕೋಪಯೋಗಿ ಇಲಾಖೆ -ಠಿ; 940 ಕೋಟಿ ಅಂದಾಜಿಸಿತ್ತು. ಸೆಂಟ್ರಲ್ ವಿಸ್ಟಾ ಮರುಅಭಿವೃದ್ಧಿ ಯೋಜನೆಯಲ್ಲಿ 3 ಕಿ.ಮೀ. ಉದ್ದದ ರಾಜಪಥ ಮತ್ತು ಅದರ ಅಕ್ಕಪಕ್ಕದಲ್ಲಿ ಅಭಿವೃದ್ಧಿಯನ್ನು 2019ರಲ್ಲಿ ಸರ್ಕಾರ ಘೋಷಿಸಿತು. ಗುಜರಾತ್​ನ ಎಚ್​ಸಿಪಿ ಡಿಸೈನ್ಸ್ ಸಂಸ್ಥೆ ಇದರ ವಿನ್ಯಾಸ ಮಾಡಿದೆ. ಇದರ ಪ್ರಕಾರ, ಪ್ರಧಾನಿ ಹೊಸ ನಿವಾಸ ಸೌಥ್ ಬ್ಲಾಕ್​ನಲ್ಲಿ ಮತ್ತು ಉಪರಾಷ್ಟ್ರಪತಿಯ ನೂತನ ನಿವಾಸ ನಾರ್ಥ್ ಬ್ಲಾಕ್​ನಲ್ಲಿ ಇರಲಿದೆ. ಸಚಿವಾಲಯಗಳ ನಿರ್ವಣವೂ ಯೋಜನೆಯಲ್ಲಿ ಸೇರಿವೆ.

ಹಾಲಿ ಸಂಸತ್ ಭವನವು (ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್) ಬ್ರಿಟಿಷರ ಕಾಲದಲ್ಲಿ ನಿರ್ವಣವಾಗಿದ್ದು, 1921ರಲ್ಲಿ ಕಾಮಗಾರಿ ಆರಂಭವಾಗಿ 1927ಕ್ಕೆ ಪೂರ್ಣಗೊಂಡಿದೆ. ಇದಕ್ಕೆ ತಗುಲಿದ ವೆಚ್ಚ -ಠಿ; 83 ಲಕ್ಷ! ಈ ಕಟ್ಟಡದ ವಿನ್ಯಾಸವನ್ನು ಎಡ್ವಿನ್ ಲುಟಿಯೆನ್ಸ್ ಮತ್ತು ಹರ್ಬರ್ಟ್ ಬೇಕರ್ ಮಾಡಿದ್ದರು. 1927ರ ಜನವರಿ 18ರಂದು ಈ ಕಟ್ಟಡವನ್ನು ಭಾರತದ ವೈಸ್​ರಾಯ್ ಲಾರ್ಡ್ ಇರ್ವಿನ್ ಉದ್ಘಾಟಿಸಿದರು. ಮರುದಿನವೇ ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್ ಮೊದಲ ಸಭೆ ನಡೆಯಿತು. 1956ರಲ್ಲಿ ಇನ್ನೆರಡು ಅಂತಸ್ತನ್ನು ನಿರ್ವಿುಸಲಾಯಿತು.
ಈಗಿರುವ ಸಂಸತ್ ಭವನ ಹಳೆಯದ್ದು, ಹೊಸ ಭವನ ನಿರ್ವಣದಿಂದ ಸ್ವಾವಲಂಬಿ ಭಾರತ ಅಭಿಯಾನಕ್ಕೂ ಸಹಕಾರಿ ಆಗಲಿದೆ. ಸುಮಾರು ಎರಡು ಸಾವಿರ ಮಂದಿ ನೇರವಾಗಿ ನಿರ್ಮಾಣ ಕಾರ್ಯದಲ್ಲಿ ತೊಡಗಲಿದ್ದು, ಪರೋಕ್ಷವಾಗಿ 9 ಸಾವಿರ ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ ಎಂದು ಲೋಕಸಭಾ ಸ್ಪೀಕರ್ ಓಂಪ್ರಕಾಶ್ ಬಿರ್ಲಾ ಹೇಳಿದ್ದಾರೆ. ಹೊಸ ಸಂಸತ್ ಭವನದಲ್ಲಿ 1,224 ಸಂಸದರು ಆಸೀನರಾಗುವಷ್ಟು ದೊಡ್ಡ ಹಾಲ್​ಗಳು ಇರಲಿವೆ. ಈ ಭವನದ ಕಾಮಗಾರಿ 2022ಕ್ಕೆ ಮುಗಿಯಲಿದ್ದು, ಆ ವೇಳೆ ವೆಚ್ಚ -ಠಿ; 971 ಕೋಟಿಗೆ ತಲುಪುವ ಅಂದಾಜು ಇದೆ. ಹಳೆಯ ಸಂಸತ್ ಭವನವು ಸ್ಮಾರಕವಾಗಲಿದೆ ಎಂದರು. ಭೂಮಿ ಪೂಜೆಗೆ ಎಲ್ಲ ರಾಜಕೀಯ ಪಕ್ಷಗಳ ಮುಖ್ಯಸ್ಥರನ್ನು ಆಮಂತ್ರಿಸಲಾಗುವುದು, ಕೆಲವರು ಭೌತಿಕವಾಗಿ ಹಾಗೂ ಇನ್ನು ಕೆಲವರು ವರ್ಚುವಲ್ ಮೂಲಕ ಭಾಗಿಯಾಗಲಿದ್ದಾರೆ. ಕೋವಿಡ್ ನಿಯಮಗಳ ಪಾಲನೆಯೊಂದಿಗೆ ಕಾರ್ಯಕ್ರಮ ನಡೆಯಲಿದೆ ಎಂದರು.
ಕರೊನಾ ಪಿಡುಗು ವ್ಯಾಪಕವಾಗಿರುವ ಈ ಸಂದರ್ಭದಲ್ಲಿ ಹೊಸ ಸಂಸತ್ ಭವನದ ಯೋಜನೆ ಅಗತ್ಯವಿತ್ತೆ? ಎಂದು ಕಾಂಗ್ರೆಸ್ ಹಾಗೂ ಇನ್ನಿತರ ವಿರೋಧ ಪಕ್ಷಗಳು ಪ್ರಶ್ನಿಸಿವೆ. ಹೊಸ ಸಂಸತ್ ಭವನ ಬೇಕು, ಆದರೆ, ಈ ಸಂದರ್ಭದಲ್ಲಿ ಇದು ಆದ್ಯತೆ ವಿಷಯವಾಗಿರಲಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಎನ್​ಸಿಪಿ ಸಂಸದೆ ಸುಪ್ರಿಯಾ ಸುಲೆ ಹೇಳಿದ್ದಾರೆ. ಹೊಸ ಸಂಸತ್ ಭವನ ಯೋಜನೆಯನ್ನು ಸಮರ್ಥಿಸಿಕೊಂಡಿರುವ ಸರ್ಕಾರ, ಹಾಲಿ ಸಂಸತ್ ಭವನವು ಹಳೆಯದ್ದಾಗಿದೆ ಮತ್ತು ಧಾರಣಾ ಸಾಮರ್ಥ್ಯಕ್ಕಿಂತ ಹೆಚ್ಚು ಬಳಕೆಯಾಗುತ್ತಿದೆ. ಆದ್ದರಿಂದ ಹೊಸ ಭವನ ಅವಶ್ಯಕ. ಸ್ವಾತಂತ್ರ್ಯೊತ್ಸವದ ವಜ್ರ ಮಹೋತ್ಸವದ ವಿಶೇಷ ಅಧಿವೇಶನ ಹೊಸ ಭವನದಲ್ಲಿ ನಡೆಯಲಿದೆ ಎಂದು ಹೇಳಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
