ಚಂಡಿಗರ್:ಒಡಹುಟ್ಟಿದ ಸಹೋದರಿಯರನ್ನೇ ಯುವಕನೊಬ್ಬ ಗುಂಡಿಟ್ಟು ಹತ್ಯೆ ಮಾಡಿದ ಘಟನೆ ಪಂಜಾಬ್​ನ ಮೋಗಾ ಜಿಲ್ಲೆಯ ಮಾನುಕೆ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ.
ಕುನ್ವಾಲ್ ಪ್ರೀತ್ ಕೌರ್ (18) ಹಾಗೂ ಅಮನಪ್ರೀತ್ ಕೌರ್ (24) ಗುಂಡೇಟಿಗೆ ಬಲಿಯಾದ ಸಹೋದರಿಯರು. ಶೇಕ್ ಕುರ್ದ್​ ಹಳ್ಳಿಯ ಕಾಂಗ್ರೆಸ್ ಮುಖಂಡ ಹಾಗೂ ಸರಪಂಚ್ ಸುಖವಿಂದರ್​ ಕೌರ್​ನ ಮಗ ಗುರುವೀರ್ ಸಿಂಗ್​ನೇ ತನ್ನ ಸಹೋದರಿಯರಿಯರನ್ನು ಗುಂಡಿಟ್ಟು ಕೊಂದವ. ಸದ್ಯ ಗುರುವೀರ್​ ಸಿಂಗ್​ನನ್ನು ಪೊಲೀಸರು ಬಂಧಿಸಿದ್ದು, ಈ ಘಟನೆ ಪಂಜಾಬ್​ ನ್ನು ಬೆಚ್ಚಿ ಬಿಳ್ಳಿಸಿದೆ.
ಇದನ್ನೂ ಓದಿ:ಈ ಮುದ್ದು ಮಗು ಮುಂದೆ ಬಿಗ್ ಬಾಸ್ ಖ್ಯಾತಿ ಗಳಿಸಿದಾಕೆ… ಯಾರೆಂದು ಊಹಿಸಬಲ್ಲಿರಾ?!
ಮಾನುಕೆ ಎಂಬ ಹಳ್ಳಿಯಲ್ಲಿ ಕಾರ್​ನಲ್ಲಿ ಹೋಗುತ್ತಿದ್ದಾಗ ಗುರುವೀರ್ ಸಿಂಗ್ ತನ್ನ ಸಹೋದರಿಯರನ್ನು ಹೊರಗೆಳೆದು ಗುಂಡೇಟು ನೀಡಿದ್ದಾನೆ. ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಈ ಇಬ್ಬರೂ ಯುವತಿಯರು ಹಳ್ಳಿಯಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರು. ಯುವತಿಯರು ಯುವಕನೊಬ್ಬನೊಂದಿಗೆ ಸಲುಗೆಯಿಂದ ಇದ್ದಿದ್ದಕ್ಕೆ ಗುರುವೀರ್​ ಸಿಂಗ್ ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಇನ್ನು ಈ ಘಟನೆ ಬಗ್ಗೆ ಆಘಾಥ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು, ಕೂಡಲೇ ತ್ವರಿತ ತನಿಖೆ ನಡೆಸಿ ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಆದೇಶ ಮಾಡಿದ್ದಾರೆ. (ಏಜೇನ್ಸಿಸ್).
ಕೃಷಿ ಭೂಮಿ ಪರಿವರ್ತನೆಗೆ ನೂತನ ನಿಯಮ ಜಾರಿಗೊಳಿಸಲು ಮುಂದಾದ ರಾಜ್ಯ ಸರ್ಕಾರ

ಇನ್ನುಂದೆ ರಾಜ್ಯದಲ್ಲಿ ಮನೆ ಕಟ್ಟುವವರಿಗೆ ಸಿಗಲಿದೆ ಉಚಿತ ಮರಳು: ನಿಯಮಗಳೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 17 =
Remember me
