ನವದೆಹಲಿ:ರಾಷ್ಟ್ರಪತಿ ಭವನದಲ್ಲಿರುವ ಪ್ರಸಿದ್ಧ ಮೊಘಲ್ ಉದ್ಯಾನ ಇನ್ನು ‘ಅಮೃತ್ ಉದ್ಯಾನ್’ ಆಗಿ ಬದಲಾಗಲಿದೆ. ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮರುನಾಮಕರಣ ಮಾಡಲು ತೀರ್ಮಾನಿಸಿದ್ದಾರೆ. ರಾಷ್ಟ್ರಪತಿ ಭವನ ಸುಂದರವಾದ, ವೈವಿಧ್ಯಮಯ ಉದ್ಯಾನಗಳನ್ನೊಳಗೊಂಡಿರುವ ಸ್ಥಳ. ಈಸ್ಟ್ ಲಾನ್, ಸೆಂಟ್ರಲ್ ಲಾನ್, ಲಾಂಗ್ ಗಾರ್ಡನ್ ಮತ್ತು ಸರ್ಕ್ಯುಲರ್ ಗಾರ್ಡನ್​ಗಳೆಂಬ ವಿಶಿಷ್ಟ ಉದ್ಯಾನಗಳು ಇಲ್ಲಿವೆ. ಮಾಜಿ ರಾಷ್ಟ್ರಪತಿಗಳಾದ ದಿವಂಗತ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಮತ್ತು ರಾಮನಾಥ ಕೋವಿಂದ ಅವಧಿಯಲ್ಲಿ ಹರ್ಬಲ್-ಐ, ಹರ್ಬಲ್-ಐಐ, ಟ್ಯಾಕ್ಟೈಲ್ ಗಾರ್ಡನ್, ಬೋನ್ಸಾಯ್ ಗಾರ್ಡನ್ ಮತ್ತು ಆರೋಗ್ಯವನಗಳನ್ನು ರೂಪಿಸಲಾಯಿತು.
ಅಮೃತ್ ಉದ್ಯಾನವು ಜಮ್ಮು-ಕಾಶ್ಮೀರದ ಮೊಘಲ್ ಉದ್ಯಾನ, ತಾಜ್ ಮಹಲ್ ಸುತ್ತಲಿನ ಉದ್ಯಾನ, ಭಾರತ – ಪರ್ಷಿಯಾದ ವರ್ಣಚಿತ್ರಗಳಿಂದ ಸ್ಪೂರ್ತಿ ಪಡೆದಿದೆ ಎಂಬ ಮಾಹಿತಿ ರಾಷ್ಟ್ರಪತಿ ಭವನದ ವೆಬ್​ಸೈಟ್​ನಲ್ಲಿದೆ. ನಾಳೆಯಿಂದ ರಾಷ್ಟ್ರಪತಿ ದ್ರೌಪದಿ ಮುಮು ಅವರು ಉದ್ಯಾನಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಿದ್ದಾರೆ.
1917ರಲ್ಲಿ ವಿನ್ಯಾಸ:ನವದೆಹಲಿಯ ರಾಷ್ಟ್ರಪತಿ ಭವನ ಸೇರಿ ಹಲವು ಕಟ್ಟಡಗಳನ್ನು ನಿರ್ಮಾಣ ಮಾಡಿದ್ದ ಬ್ರಿಟಿಷ್ ವಾಸ್ತುಶಿಲ್ಪಿ ಸರ್ ಎಡ್ವಿನ್ ಲುಟ್ಯೆನ್ಸ್ ಅವರು 1917ರಲ್ಲಿ ಈ ಉದ್ಯಾನವನ್ನು ಅಂತಿಮಗೊಳಿಸಿದ್ದರು. ಆದರೆ ವಿನ್ಯಾಸ ಅಂತಿಮಗೊಂಡ 10 ವರ್ಷಗಳ ಬಳಿಕ ಇಲ್ಲಿ ಸಸ್ಯಗಳನ್ನು ಬೆಳೆಸಲಾಯಿತು. ಭಾರತದ ಮೊದಲ ಗವರ್ನರ್ ಜನರಲ್ ಸಿ. ರಾಜಗೋಪಾಲಾಚಾರಿ ಅವರು ದೇಶದ ಆಹಾರ ಕೊರತೆಯ ಸಮಸ್ಯೆ ಪರಿಹರಿಸುವ ಸಲುವಾಗಿ ಮೈದಾನದ ಒಂದು ಭಾಗದಲ್ಲಿ ಗೋಧಿಯನ್ನು ಸಾಂಕೇತಿಕವಾಗಿ ಬೆಳೆದಿದ್ದರು. ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ತಮ್ಮ ಅಧಿಕಾರಾವಧಿಯಲ್ಲಿ ಹರ್ಬಲ್ ಗಾರ್ಡನ್ಸ್, ದೃಷ್ಟಿಹೀನರಿಗೆ ಟ್ಯಾಕ್ಟೈಲ್ ಗಾರ್ಡನ್ಸ್, ಮ್ಯೂಸಿಕಲ್ ಗಾರ್ಡನ್ಸ್, ಜೈವಿಕ ಇಂಧನ ಪಾರ್ಕ್, ಆಧ್ಯಾತ್ಮಿಕ ಮತ್ತು ಪೋಷಣೆ ಉದ್ಯಾನಗಳನ್ನು ಅಭಿವೃದ್ಧಿಪಡಿಸಿದ್ದರು. ಸಂಪನ್ಮೂಲಗಳ ಸಮರ್ಥ ಬಳಕೆ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಯಿಂದ ರಾಷ್ಟ್ರಪತಿ ಭವನವನ್ನು ಪರಿಸರಸ್ನೇಹಿ ಮಾಡುವ ರೋಶಿನಿ ಯೋಜನೆ ಜೊತೆಗೆ ಬೋನ್ಸಾಯ್ ಉದ್ಯಾನವನ್ನು ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟಿಲ್ ನಿರ್ಮಾಣ ಮಾಡಿದ್ದರು.
ಉದ್ಯಾನ ಉತ್ಸವ:ಈ ವರ್ಷದ ಉದ್ಯಾನ ಉತ್ಸವದಲ್ಲಿ ವಿಶೇಷವಾಗಿ ಬೆಳೆಸಲಾದ 12 ಪ್ರಭೇದಗಳ ಹೂವಿನ ಗಿಡಗಳನ್ನು ಪ್ರವಾಸಿಗರು ನೋಡಬಹುದಾಗಿದೆ. ವಿವಿಧ ಹಂತಗಳಲ್ಲಿ ಅರಳುವ ಈ ಹೂವು, ಸಸ್ಯಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಉದ್ಯಾನದಲ್ಲಿರಿಸಲಾಗುವ ಕ್ಯೂಆರ್ ಕೋಡ್ ಸ್ಕಾ್ಯನ್ ಮಾಡುವ ಮೂಲಕ ಪಡೆಯಬಹುದು. ಉದ್ಯಾನಕ್ಕೆ ಭೇಟಿ ನೀಡಲು ಪ್ರವಾಸಿಗರು ಆನ್​ಲೈನ್ ಬುಕಿಂಗ್ (ಜಠಿಠಿಟಠ://ಚಠಜಠ್ಟಿಚಟಚಠಿಜಿಠಚ್ಚಜಜಿಡಚ್ಝಚಢಚ.ಜಟಡ.ಜ್ಞಿ ಅಥವಾ ಜಠಿಠಿಟಠ://ಚಿ.ಜ್ಚಿ.ಜ್ಞಿ/ಚಿಡಜಿಠಜಿಠಿ/ಡಜಿಠಜಿಠಿ‰ಟ್ಝಚ್ಞ.ಚಠಟ್ಡ) ಮೂಲಕ ಸ್ಲಾಟ್​ಗಳನ್ನು ನಿಗದಿಗೊಳಿಸಬಹುದು. ನೂರಾರು ಮಾದರಿಯ ಸಸ್ಯ, ಹೂವುಗಳಿಂದ ಈ ಉದ್ಯಾನ ಜನಾಕರ್ಷಣೆಯ ಕೇಂದ್ರವಾಗಿದೆ.
ಯಾವ್ಯಾವ ಹೆಸರು ಬದಲಾವಣೆ?:2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಎನ್​ಡಿಎ ಸರ್ಕಾರ ಪ್ರಧಾನಿ ನಿವಾಸದ ಎದು ರಿನ ರೇಸ್​ಕೋರ್ಸ್ ರಸ್ತೆಗೆ ಲೋಕಕಲ್ಯಾಣ ಮಾರ್ಗ, ಪಕ್ಕದಲ್ಲಿರುವ ಔರಂಗಾಜೇಬ್ ರಸ್ತೆಗೆ ಡಾ. ಅಬ್ದುಲ್ ಕಲಾಂ ರಸ್ತೆ ಎಂಬ ಹೆಸರನ್ನಿಡುವ ತೀರ್ಮಾನ ಕೈಗೊಂಡಿತ್ತು. ಕಳೆದ ವರ್ಷ ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ ನಡುವಿನ ಮೂರೂವರೆ ಕಿಲೋಮೀಟರ್ ಉದ್ದದ ರಾಜಪಥದ ಹೆಸರನ್ನು ಕರ್ತವ್ಯಪಥ ಎಂದು ಬದಲಿಸಲಾಗಿತ್ತು. ಸೆಂಟ್ರಲ್ ವಿಸ್ಟಾ ಮರು ಅಭಿವೃದ್ಧಿ ಯೋಜನೆಯಡಿಯಲ್ಲಿ ಕರ್ತವ್ಯಪಥವನ್ನು ಅಭಿವೃದ್ಧಿಗೊಳಿಸಲಾಗಿದೆ.
ಕಾಂಗ್ರೆಸ್ ವಿರೋಧ ಬಿಜೆಪಿಯಿಂದ ಸ್ವಾಗತ:ಮೊಘಲ್ ಗಾರ್ಡನ್ ಮರುನಾಮಕರಣಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ರಸ್ತೆಗಳು, ಉದ್ಯಾನಗಳಿಗೆ ಬಿಜೆಪಿ ಸರ್ಕಾರ ಇಷ್ಟ ಬಂದಂತೆ ಮರುನಾಮಕರಣ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಶೀದ್ ಅಲ್ವಿ ಆರೋಪ ಮಾಡಿದ್ದಾರೆ. ಹೆಚ್ಚುತ್ತಿರುವ ಹಣದುಬ್ಬರ, ನಿರುದ್ಯೋಗ, ಇಂಧನ ಬೆಲೆಗಳು, ಮಹಿಳಾ ಭದ್ರತೆಗೆ ಬಿಜೆಪಿ ಆದ್ಯತೆ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯ ಮಾಡಿದೆ. ಬಿಜೆಪಿ ನಾಯಕರು ಮರುನಾಮಕರಣ ಮಾಡುವ ನಿರ್ಧಾರವನ್ನು ಐತಿಹಾಸಿಕ ಎಂದು ಬಣ್ಣಿಸಿದ್ದಾರೆ. ಭಾರತವು ಗುಲಾಮ ಮನಸ್ಥಿತಿಯಿಂದ ಹೊರಬರುತ್ತಿದೆ ಎಂದು ಅವರು ಸಮರ್ಥನೆ ಮಾಡಿಕೊಂಡಿದ್ದಾರೆ.
ನಮ್ಮಲ್ಲೇ ಮೊದಲು: ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ-ತಂತ್ರಜ್ಞಾನ ಬಳಸಿ ಬರೆದ ಸುದ್ದಿ; ಇದು ಸಮಸ್ತ ಹಿರಿಯ ನಾಗರಿಕರಿಗೆ ಅರ್ಪಣೆ

ಶಾಲೆಯಲ್ಲೇ ಹೃದಯಾಘಾತಕ್ಕೀಡಾಗಿ ಮೃತಪಟ್ಟ ಹದಿಹರೆಯದ ವಿದ್ಯಾರ್ಥಿನಿ!

ತಲೆ ಮೇಲೇ ಆಕ್ಸಿಜನ್ ಸಿಲಿಂಡರ್ ಬಿದ್ದು ಸಾವಿಗೀಡಾದ 9 ವರ್ಷದ ಬಾಲಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 3 =
Remember me
