ಅಯೋಧ್ಯೆ:ರಾಮಮಂದಿರ ಶಿಲಾನ್ಯಾಸದಲ್ಲಿ ಪಾಲ್ಗೊಂಡಿದ್ದ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಅವರು ಮಾತನಾಡುವ ವೇಳೆ, ರಾಮಮಂದಿರ ನಿರ್ಮಾಣ ಕನಸು ನನಸಾಗುವಲ್ಲಿ ಶ್ರಮಿಸಿದ ಅನೇಕ ಮುಖಂಡರನ್ನು ನೆನಪಿಸಿಕೊಂಡರು.
ರಾಮಮಂದಿರ ನಿರ್ಮಾಣದ ಕನಸು ಸಾಕಾರಗೊಳ್ಳಲು ಅನೇಕರು ತ್ಯಾಗ, ಬಲಿದಾನಗಳನ್ನು ಮಾಡಿದ್ದಾರೆ. ಆದರೆ ಅವರೆಲ್ಲ ಭೌತಿಕವಾಗಿ ಇಲ್ಲಿಲ್ಲ. ಎಲ್​.ಕೆ.ಆಡ್ವಾಣಿಯವರು ತಮ್ಮ ಮನೆಯಿಂದಲೇ ಇಲ್ಲಿನ ಸಮಾರಂಭವನ್ನು ವೀಕ್ಷಿಸುತ್ತಿರುತ್ತಾರೆ. ಈಗಿನ ಪರಿಸ್ಥಿತಿಯಿಂದ ಅನೇಕರಿಗೆ ಆಹ್ವಾನ ನೀಡಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಅವರು ಎಲ್​.ಕೆ.ಆಡ್ವಾಣಿಯವರನ್ನಷ್ಟೇ ಅಲ್ಲದೆ ವಿಎಚ್​ಪಿ ಮುಖಂಡ ಅಶೋಕ್​ ಸಿಂಘಲ್​ ಸೇರಿ ಹಲವು ಪ್ರಮುಖರನ್ನು ನೆನಪಿಸಿಕೊಂಡರು.
ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣದ ಸಂಕಲ್ಪವನ್ನು ಪೂರ್ತಿಗೊಳಿಸಲು ಆರ್​ಎಸ್​ಎಸ್​ ಮತ್ತು ಇತರ ಸಮಾನ ಮನಸ್ಕ ಸಂಸ್ಥೆಗಳು 30ಕ್ಕೂ ಹೆಚ್ಚು ವರ್ಷಗಳ ಕಾಲ ಶ್ರಮಿಸಿವೆ ಎಂದು ಹೇಳಿದರು. (ಏಜೆನ್ಸೀಸ್​)
‘ಶ್ರೀರಾಮನ ಅಸ್ತಿತ್ವವನ್ನೇ ನಾಶ ಮಾಡುವ ಪ್ರಯತ್ನ ನಡೆಯಿತು…’: ಸೂಕ್ಷ್ಮವಾಗಿ ಇತಿಹಾಸ ಪ್ರಸ್ತಾಪಿಸಿದ ಪ್ರಧಾನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
