ಮುಂಬೈ:ಭಾರತ ತಂಡದ ಸ್ಟಾರ್ ಕ್ರಿಕೆಟಿಗ ಪೃಥ್ವಿ ಶಾ ವಿರುದ್ಧ ಸೋಶಿಯಲ್​ ಮೀಡಿಯಾ ಇನ್​​ಫ್ಲ್ಯುಯೆನ್ಸರ್​​ ಸಪ್ನಾ ಗಿಲ್,​ ಕಿರುಕುಳ ಮತ್ತು ಹಲ್ಲೆ ಆರೋಪ ಹೊರಿಸಿದ್ದರು. ಈ ಸಂಬಂಧ ಪೊಲೀಸ್ ಎಫ್‌ಐಆರ್ ಕೂಡ ದಾಖಲಾಗಿದ್ದು, ಪ್ರಕರಣ ಮ್ಯಾಜಿಸ್ಟ್ರೇಟ್ ಕೋರ್ಟ್‌ ಮೆಟ್ಟಿಲೇರಿತ್ತು. ಆದರೆ ಈ ವಿಚಾರದಲ್ಲಿ ಪೊಲೀಸರ ದೊಡ್ಡ ಹೇಳಿಕೆಯೊಂದು ಹೊರಬಿದ್ದಿದ್ದು, ಪೃಥ್ವಿ ಶಾಗೆ ದೊಡ್ಡ ರಿಲೀಫ್ ನೀಡಿದೆ.ಈ ಪ್ರಕರಣದ ವಿಚಾರಣೆ ಇನ್ನು ನಡೆಯುತ್ತಿದ್ದು, ಪೃಥ್ವಿ ಶಾ ಮೇಲೆ ಸಪ್ನಾ ಗಿಲ್ ಮಾಡಿರುವ ಎಲ್ಲಾ ಆರೋಪಗಳು ಸುಳ್ಳು ಮತ್ತು ಆಧಾರ ರಹಿತ ಎಂದು ಪೊಲೀಸರು ಸೋಮವಾರ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಯೂ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.ಇದನ್ನೂ ಓದಿ:ಸೋಲಾಗಿದ್ದು ಕಾರ್ಯಕರ್ತರಿಂದಲ್ಲ, ಬಿಜೆಪಿಯ ತಪ್ಪು ನಿರ್ಧಾರದಿಂದ; ನಾಯಕರ ವಿರುದ್ಧವೇ ಗುಡುಗಿದ ರೇಣುಕಾಚಾರ್ಯಘಟನೆ ಹಿನ್ನೆಲೆ:ಈ ವರ್ಷದ ಫೆಬ್ರವರಿ 15 ರಂದು, ಪೃಥ್ವಿ ಶಾ ತನ್ನ ಸ್ನೇಹಿತನೊಂದಿಗೆ ಪಂಚತಾರಾ ಹೋಟೆಲ್‌ಗೆ ಊಟಕ್ಕೆ ಹೋದಾಗ ಜನರು ಬಂದು ಕ್ರಿಕೆಟರ್ ಜತೆಗೆ ಸೆಲ್ಪಿ ತೆಗೆದುಕೊಳ್ಳುಲು ಕೇಳಿಕೊಂಡಿದ್ದರು. ಆಗ ಪೃಥ್ವಿ ಶಾ ಸ್ನೇಹಿತರ ಜೊತೆ ಡಿನ್ನರ್ ಮಾಡಲು ಬಂದಿದ್ದು, ತೊಂದರೆಯಾಗುವುದು ಬೇಡ ಎಂದು ನಿರಾಕರಿಸಿದರು.ಈ ವೇಳೆ ವಿವಾದ ವಿಕೋಪಕ್ಕೆ ಹೋಗಿದ್ದು, ಎರಡು ಕಡೆಯವರ ನಡುವೆ ಮಾತಿನ ಚಕಮಕಿ ನಡೆದಿದೆ. ಇದಾದ ನಂತರ ಪೃಥ್ವಿ ಶಾ ಸ್ನೇಹಿತನ ದೂರಿನ ಆಧಾರದ ಮೇಲೆ ಪೊಲೀಸರು ಸಪ್ನಾ ಗಿಲ್ ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಸಪ್ಪಾ ಗಿಲ್​​ರನ್ನು ಕೂಡ ಬಂಧಿಸಲಾಗಿತ್ತು. ನಂತರ ಸಪ್ನಾ ಜಾಮೀನಿನ ಮೇಲೆ ಹೊರಬಂದಿದ್ದರು.ಇದನ್ನೂ ಓದಿ:ಐವರು ಕಳ್ಳರನ್ನು ಹಿಡಿಯಲು ಹೋಗಿ 1,500ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು!ನಂತರ ಸಪ್ನಾ ಗಿಲ್ ಪೃಥ್ವಿ ಶಾ ವಿರುದ್ಧ ಕಿರುಕುಳದ ಆರೋಪವನ್ನು ಮಾಡಿದ್ದು, ಪೊಲೀಸರು ತನ್ನ ಎಫ್‌ಐಆರ್ ದಾಖಲಿಸಿಲ್ಲ ಎಂದು ಸಪ್ನಾ​​ ನೇರವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯದ ಮಧ್ಯಪ್ರವೇಶದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಘಟನೆ ನಡೆದ ಪಬ್‌ನಲ್ಲಿ ಹಾಜರಿದ್ದ ಸಾಕ್ಷಿಗಳ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಸಪ್ನಾರನ್ನು ಯಾರೂ ತಪ್ಪು ರೀತಿಯಲ್ಲಿ ಮುಟ್ಟಿಲ್ಲ, ವಿಡಿಯೋ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪೃಥ್ವಿ ಶಾ ಮತ್ತು ಇತರರು ಆಕೆಗೆ ಯಾವುದೇ ರೀತಿಯ ಕಿರುಕುಳ ನೀಡಿರುವುದು ಕಂಡುಬರುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
