ನವದೆಹಲಿ:ಸಾಕಷ್ಟು ಸಂಗತಿ-ಸಾಧನೆಗಳು ಗಿನ್ನೆಸ್​ ರೆಕಾರ್ಡ್ಸ್​​ನಲ್ಲಿ ದಾಖಲಾಗುತ್ತವೆ. ಅವುಗಳಲ್ಲಿ ಸಾಮಾನ್ಯವಾಗಿ ಹಲವು ಸಾರ್ವಜನಿಕವಾಗಿ ಅಂಥ ಪ್ರಯೋಜನಕ್ಕೆ ಬರದಂಥವೂ ಇರುತ್ತವೆ. ಆದರೆ ಇಲ್ಲೊಬ್ಬಳು ತಾಯಿಯ ಗಿನ್ನೆಸ್​ ದಾಖಲೆ ಆಕೆಯನ್ನು ಮಹಾತಾಯಿ ಎಂದು ಕರೆಯುವಂತೆ ಮಾಡಿದೆ.
ಎರಡು ಮಕ್ಕಳ ತಾಯಿ ಆಗಿರುವ ಈಕೆ ಅವಧಿಪೂರ್ವವಾಗಿ ಜನಿಸಿದ ಸಾವಿರಾರು ಶಿಶುಗಳಿಗಾಗಿ ಎದೆಹಾಲು ನೀಡುವ ಮೂಲಕ ಮಹಾತಾಯಿ ಎನಿಸಿಕೊಂಡಿದ್ದಾರೆ. ಮಾತ್ರವಲ್ಲ, ಹೀಗೆ ಎದೆಹಾಲು ನೀಡಿದ್ದಕ್ಕೇ ಗಿನ್ನೆಸ್ ದಾಖಲೆಗೂ ಪಾತ್ರರಾಗಿದ್ದಾರೆ.
ಇದನ್ನೂ ಓದಿ:ರಾತ್ರಿ ಲೈಟ್ ಆನ್​ ಮಾಡಿಟ್ಟು ಮಲಗಿದರೆ ಏನಾಗುತ್ತೆ?; ಆರೋಗ್ಯದ ಮೇಲೆ ಏನು ಪರಿಣಾಮ?
ಎಲಿಜಬೆತ್ ಆ್ಯಂಡರ್​ಸನ್​ ಸಿಯೆರಾ ಎಂಬ ಈಕೆ ಅತ್ಯಧಿಕ ಪ್ರಮಾಣದಲ್ಲಿ ಎದೆಹಾಲು ದೇಣಿಗೆಯಾಗಿ ನೀಡಿ ಗಿನ್ನೆಸ್​ ದಾಖಲೆ ಪಟ್ಟಿಯಲ್ಲಿ ಸೇರಿದ್ದಾರೆ. ಯುನೈಟೆಡ್ ಸ್ಟೇಟ್ಸ್​ನ ಒರೆಗಾಂವ್​ನ ಅಲೊಹಾ ನಿವಾಸಿಯಾಗಿರುವ ಎಲಿಜಬೆತ್, 2015ರ ಫೆಬ್ರವರಿ 20ರಿಂದ 2018ರ ಜೂ. 20ರ ವರೆಗೆ 1599.68 ಲೀಟರ್​ ಎದೆಹಾಲನ್ನು ನೀಡಿದ್ದಾರೆ. ಆ ಮೂಲಕ ಅವಧಿಪೂರ್ವವಾಗಿ ಜನಿಸಿದ್ದ ಸಾವಿರಾರು ಶಿಶುಗಳ ಬದುಕು ಉಳಿಸಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಇದನ್ನೂ ಓದಿ:ಯಂಗ್​ ಆಗಿಯೇ ಇರಲು ಕೋಟ್ಯಂತರ ರೂ. ಖರ್ಚು ಮಾಡಿದ, ಮಗನ ರಕ್ತ ತನ್ನ ದೇಹಕ್ಕೆ ಸೇರಿಸಿಕೊಂಡ: ಕೊನೆಗೆ ಆಗಿದ್ದೇನು?
ಇದು ನಾನು 2015ರಿಂದ 2018ರ ಮಧ್ಯೆ ನೀಡಿದ್ದ ಹಾಲಿನ ಪ್ರಮಾಣವಷ್ಟೇ ಎಂದಿರುವ ಎಲಿಜಬೆತ್, ಇದುವರೆಗೆ ಒಟ್ಟು 3.5 ಲಕ್ಷ ಔನ್ಸ್​ಗಳಿಗೂ ಅಧಿಕ ಎದೆಹಾಲು ನೀಡಿದ್ದಾರಂತೆ. ನನ್ನ ದೇಹ ಪ್ರೊಲ್ಯಾಕ್ಟಿನ್ ಎಂಬ ಹಾರ್ಮೋನನ್ನು ಅಧಿಕ ಪ್ರಮಾಣದಲ್ಲಿ ಸ್ರವಿಸುತ್ತಿರುವುದರಿಂದ ಇಷ್ಟೊಂದು ಹಾಲು ಉತ್ಪಾದನೆ ಆಗುತ್ತಿದೆ ಎಂದಿರುವ ಎಲಿಜಬೆತ್, ತನ್ನ ಈ ದಾಖಲೆಯಲ್ಲಿ ಮಿಲ್ಕ್ ಪಂಪ್ ಉಪಕರಣದ ಮಹತ್ವವನ್ನೂ ಹೇಳಿಕೊಂಡಿದ್ದಾರೆ. –ಏಜೆನ್ಸೀಸ್
Elisabeth’s body can’t stop making milk.
She’s been constantly donating her breastmilk to babies who need it most.pic.twitter.com/N7BCcaNOO7
— Guinness World Records (@GWR)July 14, 2023

ಬೆಂಗಳೂರಿನ ಎಲ್ಲ ಆಸ್ತಿಗಳ ದಾಖಲೆ ಸಂಗ್ರಹಿಸಿ ಸ್ಕ್ಯಾನ್​ ಮಾಡಲಿದೆ ಸರ್ಕಾರ: ಉದ್ದೇಶ ಏನೆಂದು ತಿಳಿಸಿದ ಡಿಸಿಎಂ

ಭೀಕರ ಅಪಘಾತ: ಆ್ಯಂಬುಲೆನ್ಸ್‌ನಲ್ಲಿದ್ದ ಒಬ್ಬರು ಸ್ಥಳದಲ್ಲೇ ಸಾವು, ಮೂವರಿಗೆ ಗಂಭೀರ ಗಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
