ಬೆಂಗಳೂರು:ಮಂಗಳ ಗ್ರಹದ ಅಧ್ಯಯನಕ್ಕಾಗಿ ಭಾರತ ರವಾನಿಸಿರುವ ಮಾರ್ಸ್​ ಆರ್ಬಿಟರ್​ ಮಿಷನ್​ (ಮಾಮ್​) ಕೆಂಪು ಗ್ರಹದ ಅತಿದೊಡ್ಡ ಹಾಗೂ ತುಂಬಾ ಹತ್ತಿರದಲ್ಲಿರುವ ಚಂದ್ರ ಫೋಬಸ್​ನ ಚಿತ್ರವನ್ನು ತೆಗೆದು ರವಾನಿಸಿದೆ.
ಮಂಗಳ ಗ್ರಹದಿಂದ 7,200 ಕಿ.ಮೀ. ಮತ್ತು ಫೋಬಸ್​ನಿಂದ 4,200 ಕಿ.ಮೀ. ದೂರದಲ್ಲಿದ್ದಾಗ ಮಾಮ್​ ಫೋಬಸ್​ನ ಚಿತ್ರವನ್ನು ಸೆರೆಹಿಡಿದಿದೆ. ಇದರ ಪ್ರದೇಶದ ಲಕ್ಷಣಗಳ ರೆಸಲ್ಯೂಷನ್​ 210 ಮೀಟರ್​ ಆಗಿದೆ. 6 ಎಂಸಿಸಿ ಫ್ರೇಂಗಳನ್ನು ಬಳಸಿ ಚಿತ್ರವನ್ನು ಅಭಿವೃದ್ಧಿಪಡಿಸಲಾಗಿದ್ದು, ಬಣ್ಣವನ್ನು ತಿದ್ದಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ತಿಳಿಸಿದೆ.
ಫೋಬಸ್​ ಚಂದ್ರ ಕಾರ್ಬನೋಸಿಯಸ್​ ಕಾಂಡ್ರೈಟ್​ಗಳಿಂದ ಕೂಡಿದೆ. ಅದು ಸಾಕಷ್ಟು ಘರ್ಷಣೆಗಳಿಗೆ ಒಳಗಾಗಿದ್ದು, ಅದರ ಬಹುದೊಡ್ಡ ಭಾಗ ಮುರಿದು ಹೋಗಿದೆ ಎಂದು ಹೇಳಿದೆ.
ಇದನ್ನೂ ಓದಿ:ಪಿಒಕೆ, ಗಿಲ್ಗಿಟ್​-ಬಾಲ್ಟಿಸ್ತಾನದ ಮೇಲಿದೆ ಚೀನಾ ಕಣ್ಣು: ಬದಲಾಗಿದೆ ಯುದ್ಧತಂತ್ರ!
ಈ ಚಿತ್ರದಲ್ಲಿ ಫೋಬಸ್​ ಚಂದ್ರನಲ್ಲಿರುವ ಅತಿದೊಡ್ಡ ಕಂದಕ ಸ್ಟಿಕ್ನೆ, ಸ್ಕಲೋವ್​ಸ್ಕಿ, ರೋಚ್​ ಮತ್ತು ಗ್ರಿಲ್​ಡ್ರಿಗ್​ ಸೇರಿ ಹಲವರು ಕಂದಕಗಳನ್ನು ಸ್ಪಷ್ಟವಾಗಿ ಗೋಚರಿಸುತ್ತವೆ ಎಂದು ತಿಳಿಸಿದೆ.
ಇಸ್ರೋ ಕೈಗೊಂಡಿದ್ದ ಮಂಗಳಯಾನ ಕಾರ್ಯಕ್ರಮ ಕೇವಲ ಆರು ತಿಂಗಳ ಅವಧಿಯದ್ದಾಗಿರುತ್ತದೆ ಎಂದು ಹೇಳಲಾಗಿತ್ತು. ಆದರೂ, ಮಾಮ್​ನಲ್ಲಿ ಹಲವು ವರ್ಷಗಳವರೆಗೆ ಬಳಕೆಯಾಗುವಷ್ಟು ಇಂಧನ ಇರುವುದಾಗಿ ತಿಳಿಸಿತ್ತು. ಹಾಗಾಗಿ 2014ರ ಸೆ.14ರಂದು ಮಂಗಳ ಗ್ರಹದ ಕಕ್ಷೆಗೆ ಸೇರ್ಪಡೆಗೊಳಿಸಲಾಗಿದ್ದ ಮಾಮ್​ನ ಜೀವಾವಧಿ ಇನ್ನಷ್ಟು ವರ್ಷ ವಿಸ್ತರಣೆಯಾಗುವ ಹಾಗೂ ಮಂಗಳ ಗ್ರಹದ ಕುರಿತು ಇನ್ನಷ್ಟು ಮಾಹಿತಿಗಳು ಲಭಿಸುವ ನಿರೀಕ್ಷೆ ಇದೆ ಎಂದು ಇಸ್ರೋ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಲೇಹ್​ ಭೇಟಿಯ ಪರಿಣಾಮ ಅಗಾಧ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 20 =
Remember me
