ಪುಣೆ :ಸೈಬರ್​ ಖದೀಮರು ಯಾವ ರೂಪದಲ್ಲಿ ಯಾವ ಕಡೆಯಿಂದ ಬೇಕಿದ್ದರೂ ನುಸುಳಿಬಂದು ವಂಚಿಸುತ್ತಾರೆ ಎನ್ನುವುದಕ್ಕೆ ಇದು ಉದಾಹರಣೆ. ಅವಿವಾಹಿತ ವೈದ್ಯೆಯೊಬ್ಬರನ್ನು ಮ್ಯಾಟ್ರಿಮೋನಿಯಲ್​ ವೆಬ್​ಸೈಟ್​ನಲ್ಲಿ ಪರಿಚಯ ಮಾಡಿಕೊಂಡು ಹಣ ಲಪಟಾಯಿಸಿರುವ ಪ್ರಕರಣ ವರದಿಯಾಗಿದೆ.
ಪುಣೆಯ ಖಾಸಗಿ ಆಸ್ಪತ್ರೆಯ ಉದ್ಯೋಗಿಯಾದ 36 ವರ್ಷದ ಮಹಿಳೆಯೊಬ್ಬರು ವಧುವರರ ಸಂಪರ್ಕ ವೇದಿಕೆಯಾದ ವೆಬ್​ಸೈಟ್​ ಒಂದರಲ್ಲಿ ಸದಸ್ಯರಾಗಿದ್ದರು. ಮಾರ್ಚ್​ ಕೊನೆಯ ವಾರದಲ್ಲಿ, ವ್ಯಕ್ತಿಯೊಬ್ಬ, ವಿದೇಶದಲ್ಲಿ ನೆಲೆಸಿರುವ ಭಾರತೀಯ ವೈದ್ಯನೆಂಬಂತೆ ಆಕೆಯನ್ನು ಆನ್​​ಲೈನ್​​ನಲ್ಲಿ ಸಂಪರ್ಕಿಸಿದ. ಆರಂಭಿಕವಾಗಿ ಅದೇ ವೇದಿಕೆಯ ಮೂಲಕ ಮಾತನಾಡುತ್ತಿದ್ದ ಅವರು ನಂತರ ತಮ್ಮ ಫೋನ್​ ನಂಬರ್​ಗಳನ್ನು ಬದಲಾಯಿಸಿಕೊಂಡರು.
ಇದನ್ನೂ ಓದಿ:ನಿವೇಶನರಹಿತರಿಗೆ ಎರಡು ತಿಂಗಳಲ್ಲಿ ಹಕ್ಕುಪತ್ರ : ಈಗಾಗಲೇ 600 ಎಕರೆ ಜಮೀನು ಗುರುತು
ಮಾತುಕತೆ ಮುಂದುವರೆದಂತೆ ಕೆಲವು ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಿರುವ ವಂಚಕನು ಮಹಿಳೆಯ ತಾಯಿಯ ಜನ್ಮದಿನಕ್ಕೆ ತಾನೊಂದು ಉಡುಗೊರೆ ಕಳುಹಿಸಿರುವುದಾಗಿ ಹೇಳಿದ್ದಾನೆ. ನಂತರ ಆ ಉಡುಗೊರೆಯ ಕಸ್ಟಮ್​ ಕ್ಲಿಯರೆನ್ಸ್​ಗಾಗಿ 36,000 ರೂಪಾಯಿ ಅಗತ್ಯವಿದೆ ಎಂದು ವರ್ಗಾಯಿಸಿಕೊಂಡಿದ್ದಾನೆ. ಆದರೆ, ಅದೇ ನೆಪದಲ್ಲಿ ಮತ್ತೆ 90,000 ರೂ.ಗಳ ಬೇಡಿಕೆ ಇಟ್ಟಾಗ ಮಹಿಳೆಗೆ ಅನುಮಾನ ಬಂದು ಪ್ರಶ್ನೆಗಳನ್ನು ಕೇಳಿದ್ದಾರೆ. ತದನಂತರ ನಕಲಿ ಪ್ರೊಫೈಲ್​ನ ಹಿಂದಿನ ಖದೀಮ, ಆಕೆಯ ಕಾಲ್​ಗಳಿಗೆ ಪ್ರತಿಕ್ರಿಯಿಸುವುದನ್ನೇ ನಿಲ್ಲಿಸಿದ್ದಾನೆ.
ನೊಂದ ಮಹಿಳೆಯು ಪುಣೆ ನಗರದ ಕೋಂಧ್ವ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಐಟಿ ಕಾಯ್ದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್​​ಗಳಡಿ ಎಫ್​.ಐ.ಆರ್​. ದಾಖಲಿಸಲಾಗಿದ್ದು, ನಕಲಿ ಪ್ರೊಫೈಲ್​ ಸೃಷ್ಟಿಸಿ ವಂಚಿಸಿರುವ ಸೈಬರ್​ ಖದೀಮನ ಪತ್ತೆ ಕಾರ್ಯ ಆರಂಭವಾಗಿದೆ. ಕೆಲವು ಶಂಕಿತರ ದೂರವಾಣಿ ಸಂಖ್ಯೆ ಮತ್ತು ಬ್ಯಾಂಕ್​ ಖಾತೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಇನ್ಸ್​ಪೆಕ್ಟರ್ ಶಬ್ಬೀರ್ ಸಯ್ಯೆದ್ ಹೇಳಿದ್ದಾರೆ.(ಏಜೆನ್ಸೀಸ್)
VIDEO | ಮೆಟ್ರೋದಲ್ಲಿ ಮಂಗ! ಸಭ್ಯವಾಗಿ ಸೀಟಲ್ಲಿ ಕೂತು ಪ್ರಯಾಣ!

ಪಾಟ್ನದಿಂದ ಲೂಧಿಯಾನಕ್ಕೆ ಗಂಡನನ್ನು ಅರಸಿ ಬಂದ ಯುವತಿ! ಅಪೂರ್ಣ ಮೊಬೈಲ್ ಸಂಖ್ಯೆ ಹಿಡಿದು ಹುಡುಕಾಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
