ಕ್ಯಾಲಿಫೋರ್ನಿಯಾ:ಕೆಲವರು ಎಲ್ಲರಿಗಿಂತ ವಿಭಿನ್ನವಾಗಿ ಮತ್ತು ಸುಂದರವಾಗಿ ಕಾಣಲು ಬಯಸುತ್ತಾರೆ. ಪ್ಲಾಸ್ಟಿಕ್ ಸರ್ಜರಿಯಿಂದ ತಮ್ಮ ನೋಟವನ್ನು ಸಂಪೂರ್ಣವಾಗಿ ಬದಲಾಯಿಸಿದ ಅನೇಕ ಮಹಿಳೆಯರು ಜಗತ್ತಿನಲ್ಲಿದ್ದಾರೆ. ಸುಂದರವಾಗಿ ಕಾಣಲು ಹಲವು ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಮಹಿಳೆಯರಲ್ಲಿ ಮೋನಿಕಾ ಎ ಅಲೆನ್ ಕೂಡ ಒಬ್ಬರು.. ಈಗ ಪ್ಲಾಸ್ಟಿಕ್ ಸರ್ಜರಿಯ ದುಷ್ಪರಿಣಾಮದಿಂದಾ ತಮ್ಮ ಸೌಂದರ್ಯವನ್ನೇ ಹಾಳು ಮಾಡಿಕೊಂಡಿದ್ದಾರೆ.
ಕ್ಯಾಲಿಫೋರ್ನಿಯಾ ನಿವಾಸಿಯಾದ ಮೋನಿಕಾ ಎ. ಅಲೆನ್ ಮೋನಿಕ್ ಪ್ಲಾಸ್ಟಿಕ್ ಸರ್ಜರಿಯ ಬಗ್ಗೆ ಒಲವು ಬೆಳೆಸಿಕೊಂಡರು. ಇಲ್ಲಿಯವರೆಗೆ, ಅವರು ಬಾಯಿ, ಮೂಗು, ಕೈಗಳು, ಕಾಲುಗಳು  ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಸುಮಾರು 200 ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅವರು ತಮ್ಮ ಶಸ್ತ್ರಚಿಕಿತ್ಸೆಯ ಫಲಿತಾಂಶಗಳನ್ನು ಮತ್ತು ತನಗೆ ಏನಾಯಿತು ಎಂಬ ಸಂಪೂರ್ಣ ಕಥೆಯನ್ನು ಹಂಚಿಕೊಂಡಿದ್ದಾರೆ.
ಪ್ಲಾಸ್ಟಿಕ್ ಸರ್ಜರಿ ಶಸ್ತ್ರಚಿಕಿತ್ಸೆಗಳಿಂದಾಗಿ ನನ್ನ ಪಾದದ ಚರ್ಮವು ಸತ್ತಿದೆ. ಶಸ್ತ್ರ ಚಿಕಿತ್ಸೆಯಿಂದ ಅಂಗವಿಕಲತೆ ಉಂಟಾಗಿದ್ದು, ಈಗ ಸರಿಯಾಗಿ ನಡೆಯಲು ಸಾಧ್ಯವಾಗುತ್ತಿಲ್ಲ. ನನ್ನ ತುಟಿಗಳನ್ನು ಸುಂದರಗೊಳಿಸಲು ಲಿಪ್ ಫಿಲ್ಲರ್ ಕೂಡ ಮಾಡಿಸಿಕೊಂಡಿದ್ದೇನೆ. ಆದರೆ ಈ ಸರ್ಜರಿಯೂ ವಿಫಲವಾಗಿ ತುಟಿಗಳ ಆಕಾರವೇ ಬದಲಾಯಿತು. ಸೌಂದರ್ಯ ಹೆಚ್ಚಿಸಿಕೊಳ್ಳಲು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡೆ, ಆದರೆ ಈಗ ರೂಪವೇ ಬದಲಾಗಿದ್ದು ವಿದೂಷಕಿಯಂತೆ ಕಾಣುತ್ತಿದ್ದೇನೆ. ಈಗ ಎಲ್ಲೇ ಹೋದರೂ ಜನ ಹೆದರುತ್ತಾರೆ ಎಂದು ಬೇಸರ ವ್ಯಕ್ತ ಪಡಿಸಿದ್ದಾಳೆ.

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:17 + 12 =
Remember me
