ಬಾರಾಬಂಕಿ:ಸ್ವಾಮಿಯೊಬ್ಬರು ತನ್ನ ಸಮಾಧಿಯನ್ನು ತಾನೇ ತೊಡಿಕೊಳ್ಳುತ್ತಿರುವ ವಿಚಿತ್ರ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಇದು ಉತ್ತರಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ.
ಇದನ್ನೂ ಓದಿ:ಶಿಕ್ಷಕನ ಬೆರಳನ್ನೇ ಮುರಿದು ಹಾಕಿದ ವಿದ್ಯಾರ್ಥಿನಿಯ ತಂದೆ..!
ಈ ಘಟನೆಯು ರಾಮಸಾನೆಹಿಘಾಟ್ ತಹಸಿಲ್ ಪ್ರದೇಶದ ಕಿತ್ತಯ್ಯ ಗ್ರಾಮಕ್ಕೆ ಸಂಬಂಧಿಸಿದಾಗಿದ್ದು, ಜಾನಕಿ ಮಠದ ಮುಕುಂದ್ ಪುರಿ ಇದೀಗ ಸಮಾಧಿ ತೆಗೆದುಕೊಳ್ಳಲು ತಮ್ಮದೇ ಸಮಾಧಿಯನ್ನು ಅಗೆಯುತ್ತಿದ್ದಾರೆ. ರಾಮ್ ಜಾನಕಿ ಮಠದ ಜಾಗವನ್ನು ಕೆಲವರು ನಕಲಿ ಉಯಿಲು ಮಾಡಿ ಮಾರಾಟ ಮಾಡಿದ್ದು, ಆದರೆ ಆ ಜಾಗ ಮಠಕ್ಕೆ ಸೇರಿದೆ ಎಂದು ಸ್ವಾಮಿಗಳು ಆರೋಪಿಸಿದ್ದಾರೆ.ಗೃಹ ಸಚಿವಾಲಯ, ಮುಖ್ಯಮಂತ್ರಿ ಪೋರ್ಟಲ್ ಸೇರಿದಂತೆ ಹಲವು ಅಧಿಕಾರಿಗಳಲ್ಲಿ ನ್ಯಾಯಕ್ಕಾಗಿ ಮನವಿ ಮಾಡಿರುವುದಾಗಿ ಹೇಳಿಕೊಂಡಿರುವ ಸ್ವಾಮಿಗಳು. ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆಗಸ್ಟ್ 30ರೊಳಗೆ ಕ್ರಮ ಕೈಗೊಳ್ಳದಿದ್ದರೆ ಸೆಪ್ಟೆಂಬರ್ 1ರಂದು ಸಮಾಧಿಯಾಗುವುದಾಗಿ ಎಚ್ಚರಿಕೆ ನೀಡಿದ್ದಾರೆ.ಶುಕ್ಲಾ ಗ್ರಾಮದ ನಿವಾಸಿಗಳಾದ ಸಂತೋಷ್ ಕುಮಾರ್ ಸಿಂಗ್, ಬಾಬಾ ಭಗತ್ ಸಿಂಗ್, ಉಮಾಶಂಕರ್ ಗೋಸ್ವಾಮಿ, ರಾಮಶಂಕರ್ ಗೋಸ್ವಾಮಿ, ಮಹಾವೀರ್ ಬಾರತಿ ಲಾಲ್ ಹೆಸರಿನಲ್ಲಿ ಭೂಮಿಯನ್ನು ನೋಂದಾಯಿಸಲಾಗಿದ್ದು, ಇದಕ್ಕಾಗಿ ಅಧಿಕಾರಿಗಳಿಗೆ ಹಣ ನೀಡಲಾಗಿದೆ ಎಂದು ಆರೋಪ ಮಾಡಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 1 =
Remember me
