ಥಾಣೆ(ಮಹಾರಾಷ್ಟ್ರ):ಭಿವಂಡಿಯಲ್ಲಿ ಶಿವಸೇನಾ(ಯುಬಿಟಿ-ಠಾಕ್ರೆ ಗುಂಪು) ನಾಯಕಿ ಸುಷ್ಮಾ ಅಂಧಾರೆ ತಮ್ಮ ಇತ್ತೀಚಿನ ಸಾರ್ವಜನಿಕ ಸಭೆಯೊಂದರಲ್ಲಿ ವಿಚಿತ್ರ ಸನ್ನಿವೇಶವನ್ನು ಎದುರಿಸಿದರು. ಆಕೆ ಭಾಷಣದ ವೇಳೆ ವೇದಿಕೆಗೆ ಪ್ರವೇಶಿಸಿದ ಮಂಗ ಕಡೇ ತನಕ ಅಲ್ಲೇ ಠಿಕಾಣಿ ಹೂಡಿತ್ತು. ಇದು ನೆರೆದಿದ್ದ ಜನರನ್ನು ಆಕರ್ಷಿಸಿತು. ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್​ ಆಗಿದ್ದು, ವ್ಯಾಪಕ ಪ್ರಚಾರಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ:ರಾಧಿಕಾ ಮರ್ಚೆಂಟ್​ರನ್ನೇ ಆರಿಸಿಕೊಂಡಿದ್ದೇಕೆ? ಬಾಳ ಸಂಗಾತಿ ಬಗ್ಗೆ ನಿಜವಾದ ಕಾರಣ ಬಿಚ್ಚಿಟ್ಟ ಅನಂತ್ ಅಂಬಾನಿ!
ವೈರಲ್ ವೀಡಿಯೊದಲ್ಲಿ, ಸುಷ್ಮಾ ಅಂಧಾರೆ ಮೈಕ್ರೊಫೋನ್ ಮೂಲಕ ಸಂಭಾಷಣೆಯಲ್ಲಿ ತೊಡಗಿರುವುದನ್ನು ಕಾಣಬಹುದು. ಅವರು ಶಿಂಧೆ ಸೇನೆಯ ಮೇಲೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು, “ಮಹಾರಾಷ್ಟ್ರ ಯಾವತ್ತೂ ಈ ರೀತಿ ಇರಲಿಲ್ಲ. ಕೆಲವರು ಉದ್ಧವ್ ಠಾಕ್ರೆ ಪಕ್ಷವನ್ನು ಉತ್ತಮವಾಗಿ ನಡೆಸಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ.” ಎನ್ನುತ್ತಿದ್ದಂತೆ ಕೋತಿ ಆಕೆಯ ಕಡೆಗೆ ಹಾರಿ ಬಂದಿತು. ಬಳಿಕ ಆಕೆಯ ಮುಂದೆ ಕುಳಿತಿತುಕೊಂಡಿತು. ಸ್ವಲ್ಪ ಸಮಯದ ಬಳಿಕ ಆಕೆ ಪಕ್ಕದಲ್ಲಿ ಕುಳಿತುಕೊಂಡಿತು. ಆದರೆ ಸುಷ್ಮಾ ವಿಚಲಿತರಾಗದೆ ತಮ್ಮ ಮಾತನ್ನು ಮುಂದುವರಿಸಿರುವುದು ಕಾಣಬಹುದಾಗಿದೆ.
ಸುಷ್ಮಾ ಮಾತಿನ ಉದ್ದಕ್ಕೂ ಕೋತಿ ಅಲ್ಲಿಂದ ಬಿಟ್ಟು ಕದಲಲಿಲ್ಲ. ಮಂಗನ ಉಪಸ್ಥಿತಿ ನಡುವೆಯೂ ಆಕೆ ಶಾಂತವಾಗಿದ್ದರು. ವೇದಿಕೆಯಲ್ಲಿದ್ದ ಆಕೆಯ ಬೆಂಬಲಿಗರು ಕೋತಿಗೆ ಬಾಳೆಹಣ್ಣುಗಳನ್ನು ಪಕ್ಕಕ್ಕೆ ಎಸೆದು ಓಡಿಸಲು ಯತ್ನಿಸಿದರು. ಆದರೂ ಅದು ಹೋಗಲಿಲ್ಲ. ಕಡೆಗೆ ಆಕೆ ಭಾಷಣ ನಿಲ್ಲಿಸಿ ಮತ್ತಷ್ಟು ಬಾಳೆಹಣ್ಣುಗಳನ್ನು ಪಕ್ಕಕ್ಕೆ ಎಸೆದಾಗ ಕೋತಿ ಅವುಗಳನ್ನು ತೆಗೆದುಕೊಂಡು ಆಕೆಯ ಹಿಂದೆ ಹಾರಿ ವೇದಿಕೆಯಿಂದ ಮತ್ತು ಸಾರ್ವಜನಿಕ ಸಭೆಯಿಂದ ನಿರ್ಗಮಿಸಿತು.
ಪತ್ನಿಗೆ ಇರಿದು ಬಾಲ್ಕನಿಯಿಂದ ತಳ್ಳಲು ಯತ್ನಿಸಿದ ಪಾಪಿ ಪತಿ..ಭಯಾನಕ ದೃಶ್ಯದ ವೀಡಿಯೋ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − seven =
Remember me
