ನವದೆಹಲಿ:ಹಾವು-ಮುಂಗುಸಿ ನಡುವೆ ನಡೆಯುವ ರೋಚಕ ಜಗಳ ಎಲ್ಲರಿಗೂ ಗೊತ್ತಿರುವ ಸಂಗತಿ. ಅಲ್ಲಿ ಬಹುತೇಕ ಸಮಯ ಮುಂಗುಸಿಯದ್ದೇ ಮೇಲುಗೈ ಆಗುತ್ತದೆ. ಆದರೆ, ಮಂಗ ಮತ್ತು ಹಾವಿನ ನಡುವಿನ ಜಗಳ ಆಗುವ ಬಗ್ಗೆ ಅಷ್ಟೇನೂ ಮಾಹಿತಿ ಇಲ್ಲ. ಆದರೆ, ಇಲ್ಲೊಂದು ಮಂಗ ನಾಗರಹಾವಿನೊಡನೆ ಕಬಡ್ಡಿ ಆಡಿದೆ. ಹಿಂಗಾಲು ಚಾಚಿ ಹಾವನ್ನು ಕಿಚಾಯಿಸುವ ಜತೆಗೆ, ಅದು ಹೆಡೆ ಹೊಡೆಯಲು ಬಂದಾಚ ಛಂಗನೆ ನೆಗೆದು ದಾಳಿಯಿಂದ ತಪ್ಪಿಸಿಕೊಳ್ಳುವ ದೃಶ್ಯ ಮನಮೋಹಕವಾಗಿದೆ.
ಹಾಗಾದರೆ, ಈ ಕಬಡ್ಡಿ ಆಟದಲ್ಲಿ ಗೆದ್ದಿದ್ದು ಯಾರು? ಈ ಕಬಡ್ಡಿ ಆಟದಲ್ಲಿ ಗೆದ್ದಿದ್ದು ಮಂಗ ಎಂದರೆ ಅಚ್ಚರಿಯಾಗಬಹುದು. ಆದರೆ, ಇದು ನಿಜ. ಅದಕ್ಕೆ ಹೊಡೆಯಲು ಹೋಗಿ, ನೆಲ್ಲಕ್ಕೆ ಎಡೆಯಲ್ಲಿ ಹೊಡೆದು, ಹೊಡೆದು ಸುಸ್ತಾದ ನಾಗರಹಾವು, ಸೋಲೊಪ್ಪಿಕೊಂಡು ಬೇರೆ ದಿಕ್ಕಿನೆಡೆಗೆ ಹರಿದುಹೋಗಿದೆ.
ಭಾರತೀಯ ಅರಣ್ಯ ಸೇವೆಗಳ (ಐಎಫ್​ಎಸ್​) ಅಧಿಕಾರಿ ಸುಶಾಂತ್​ ನಂದಾ ಈ ವಿಡಿಯೋವನ್ನು ಟ್ವಿಟರ್​ನಲ್ಲಿ ಹರಿಬಿಟ್ಟಿದ್ದಾರೆ. ಮಂಗ ಮತ್ತು ನಾಗರಹಾವಿನ ನಡುವಿನ ಜಗಳ ತುಂಬಾ ರೋಚಕವಾಗಿತ್ತು. ಈ ಜಗಳದಲ್ಲಿ ಕೋತಿ ಗೆದ್ದಿದ್ದನ್ನು ಕಂಡು ಬೆರಗುಗೊಂಡಿದ್ದಾಗಿ ಈ ವಿಡಿಯೋವನ್ನು ನೋಡಿದ ಹಲವು ಟ್ವೀಟಿಗರು ಹೇಳಿದ್ದಾರೆ.
Monkey fighting a king Cobra & coming out triumphant.One of its kind🙏
( Free wild from chains & cages. Forest is their rightful place)pic.twitter.com/OiNoAJEnrQ
— Susanta Nanda (@susantananda3)June 3, 2020

ಮಗುವಿಗೆ ಎರಡೆರಡು ಬಾಯಿ, ಎರಡೂ ಬಾಯಲ್ಲೂ ಹಲ್ಲು, ನಾಲಿಗೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:thirteen + six =
Remember me
