ಕಾನ್ಪುರ್, ಉತ್ತರಪ್ರದೇಶ:ಬಿಸಿಲಿನ ಬೇಗೆ ಆವರಿಸಿದ್ದ ದಿನವೇ ಮಂಗವೊಂದು ಕಾನ್ಪುರ ಪೊಲೀಸ್ ಠಾಣೆ ಬಳಿ ನಿಂತಿದ್ದ ಬೈಕ್​ನಿಂದ ಮದ್ಯದ ಬಾಟಲಿಯನ್ನು ಹೊತ್ತೊಯ್ದ ಘಟನೆ​ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಇದನ್ನೂ ಓದಿ:ಕುತೂಹಲ ಕೆರಳಿಸಿದ ಗ್ರಂಥಾಲಯ ಭೇಟಿ; ಮೊಬೈಲ್ ಮರೆತು ಅಕ್ಷರದ ಜತೆಗೆ ಕಾಲ ಕಳೆದ ಚಿಣ್ಣರು
ಗಾಂಧಿ ಜಯಂತಿ ದಿನದಂದೇ ಕಾನ್ಪುರದ ಪೊಲೀಸ್​ ಠಾಣೆ ಎದುರಿಗೆ ನಿಲ್ಲಿಸಿದ್ದ ಹಲವು ಬೈಕ್​ಗಳ ಪೈಕಿ ಒಂದು ಬೈಕ್​ನ ಬ್ಯಾಗ್​ನೊಳಗೆ ಇಟ್ಟಿದ್ದ ಮದ್ಯದ ಬಾಟಲಿಯನ್ನು ತೆಗೆದುಕೊಂಡ ಕೋತಿಯೊಂದು, ಅದರ ಮುಚ್ಚಳವನ್ನು ತೆಗೆಯಲು ಹರಸಾಹಸ ಪಟ್ಟಿದೆ.
ರಾಯಲ್ ಚಾಲೆಂಜ್ ಮತ್ತು ರಾಯಲ್ ಸ್ಟಾಗ್ ಸೇರಿದಂತೆ ಎರಡು ಮದ್ಯದ ಬಾಟಲಿಗಳು ಬ್ಯಾಗ್‌ನಲ್ಲಿ ಇರಿಸಲಾಗಿತ್ತು. ಈ ಪ್ರದೇಶದಲ್ಲಿ ಮುಂಚಿನಿಂದಲೂ ಕೋತಿಗಳ ಹಾವಳಿ ಹೆಚ್ಚಾಗಿಯೇ ಇದ್ದು, ಅದೇ ರೀತಿ ಈ ಬಾರಿ ಕೂಡ ಸ್ಥಳಕ್ಕೆ ಬಂದ ಕೋತಿ, ಒಂದು ಬಾಟಲಿಯ ಕ್ಯಾಪ್​ ತೆಗೆಯುವಲ್ಲಿ ಯಶಸ್ವಿಯಾಗಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
कानपुर
➡पुलिस आयुक्त कार्यालय परिसर में घुसा बंदर
➡शराब की बोतल खोलता नजर आया बंदर
➡परिसर में खड़ी बाइक के बैग से निकाली शराब
➡CP ऑफिस में मौजूद पुलिसवालों ने बंदर को भगाया#Kanpurpic.twitter.com/KVMxiohwEz
— भारत समाचार | Bharat Samachar (@bstvlive)October 2, 2023

ಈ ಘಟನೆ ಬಗ್ಗೆ ಮಾತನಾಡಿದ ಕಾನ್ಪುರದ ಜಂಟಿ ಕಮಿಷನರ್ ಆನಂದ್ ಪ್ರಕಾಶ್ ತಿವಾರಿ, ವೀಡಿಯೊದ ಬಗ್ಗೆ ನಮಗೆ ತಿಳಿದಿಲ್ಲ. ಮದ್ಯದ ಬಾಟಲಿಗಳು ಯಾರ ಬೈಕ್‌ನಲ್ಲಿವೆ ಎಂಬುದನ್ನು ಪರಿಶೀಲಿಸುತ್ತೇವೆ ಎಂದು ಹೇಳಿದರು,(ಏಜೆನ್ಸೀಸ್).
ಆ ಸಂಗತಿ ನನಗೆ ಗೊತ್ತಾಗಿದ್ದೇ ಲಾಕ್​ಡೌನ್​ ಸಮಯದಲ್ಲಿ: ನಟಿ ಸಂಯುಕ್ತಾ ಶಾನ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
