ಮೀರತ್‌ (ಉತ್ತರ ಪ್ರದೇಶ):ಕರೊನಾದಿಂದ ಮೊದಲೇ ತತ್ತರಿಸಿಹೋಗಿರುವ ಉತ್ತರ ಪ್ರದೇಶದಲ್ಲಿ ಈಗ ಮಂಗನ ಹಾವಳಿಯೂ ಹೆಚ್ಚಾಗಿಬಿಟ್ಟಿದೆ. ಇಲ್ಲಿಯ ಮೀರತ್​ನಲ್ಲಿ ಕರೊನಾ ಸೋಂಕು ಶಂಕಿತರಿಂದ ಸಂಗ್ರಹಿಸಿದ್ದ ಗಂಟಲು ದ್ರವದ ಸ್ಯಾಂಪಲ್​ಗಳನ್ನು ಕೋತಿಗಳು ಎತ್ತಿಕೊಂಡು ಹೋಗಿಬಿಟ್ಟಿವೆ!
ಮೀರತ್‌ ಮೆಡಿಕಲ್‌ ಕಾಲೇಜಿನಲ್ಲಿ ಸ್ಯಾಂಪಲ್​ಗಳನ್ನು ಕೊಂಡೊಯ್ಯುತ್ತಿದ್ದ ಲ್ಯಾಬ್ ಟೆಕ್ನಿಷಿಯನ್ ಮೇಲೆ ಏಕಾಏಕಿ ದಾಳಿ ಮಾಡಿರುವ ಮಂಗಗಳು ಈ ಕೃತ್ಯ ಎಸಗಿವೆ! ಇವರು ಮೂವರು ಕರೊನಾ ಶಂಕಿತರ ಸ್ಯಾಂಪಲ್​ಗಳನ್ನು ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿದ್ದರು. ಆದರೆ ಮಂಗಗಳ ಹಿಂಡು ಸ್ಯಾಂಪಲ್‌‌ಗಳನ್ನ ಎಳೆದುಕೊಂಡು ಹೋಗಿವೆ.
ಇದನ್ನೂ ಓದಿ:VIDEO: ರಾತ್ರೋರಾತ್ರಿ ಈ 76ರ ಅಜ್ಜಿ ರಾಕಿಂಗ್​ ಸ್ಟಾರ್​ ಆದದ್ದೇಕೆ?
ಸ್ಯಾಂಪಲ್​ಗಳು ಹೋಗಿರುವುದು ಒಂದೆಡೆ ಭೀತಿ ತಂದರೆ, ಆ ಸ್ಯಾಂಪಲ್​ಗಳನ್ನು ಸಂಗ್ರಹಿಸಿರುವ ಶಂಕಿತರದಲ್ಲಿ ಸೋಂಕು ಇದ್ದರೆ ಈ ಮಂಗನಿಂದಾಗಿ ಎಲ್ಲಿ ಅದು ಹರಡುವುದೋ ಎಂಬ ಭಯ ಇನ್ನೊಂದೆಡೆ ಶುರುವಾಗಿದೆ. ಅದು ದ್ರವದ ರೂಪದಲ್ಲಿ ಇರುವ ಹಿನ್ನೆಲೆಯಲ್ಲಿ, ಮಂಗಗಳು ಅದನ್ನು ಎಲ್ಲಿಯಾದರೆ ಚೆಲ್ಲಿದರೆ ಸೋಂಕು ಹರಡಬಹುದು ಎಂಬ ಭಯ ಕಾಡತೊಡಗಿದೆ.
ಸ್ಯಾಂಪಲ್​ಗಳನ್ನು ಕೊಂಡೊಯ್ದ ಮಂಗಗಳು ಮರದ ಮೇಲೆ ಕುಳಿತು ಕಿಟ್‌ ಜಗಿಯುತ್ತಿದ್ದು, ಸೋಂಕಿನ ಭೀತಿ ಇನ್ನಷ್ಟು ಹೆಚ್ಚಾಗಿದೆ. ಇದರ ವಿಡಿಯೋಯನ್ನು ಸ್ಥಳೀಯರು ಮಾಡಿದ್ದು ಅದೀಗ ಭಾರಿ ವೈರಲ್​ ಆಗುತ್ತಿದ್ದಂತೆಯೇ ಸ್ಥಳೀಯ ಜನರನ್ನು ಇನ್ನಷ್ಟು ಭೀತಿಗೆ ಸಿಲುಕಿಸಿದೆ.
ಇದನ್ನೂ ಓದಿ:300ರ ಗಡಿ ದಾಟಿತು ಬೆಂಗಳೂರು: 11 ಜಿಲ್ಲೆಗಳಲ್ಲಿ ಶತಕ ಮೀರಿದ ಕರೊನಾ ಸೋಂಕು!
ಮಂಗಗಳ ಹಾವಳಿ ಇಲ್ಲಿ ಹೆಚ್ಚಾಗಿದ್ದು, ಹಿಂದೆ ಕೂಡ ನಮಗೆ ಸಾಕಷ್ಟು ತೊಂದರೆ ನೀಡಿವೆ ಎಂದಿದ್ದಾರೆ ವೈದ್ಯಕೀಯ ಸಿಬ್ಬಂದಿ. ಇನ್ನು ಜಿಲ್ಲಾ ಆರೋಗ್ಯ ಇಲಾಖೆ ಈ ಸಂಬಂಧ ತನಿಖೆಗೆ ಆದೇಶಿಸಿದ್ದು, ಕೋತಿಗಳನ್ನ ಹಿಡಿಯಲು ಅರಣ್ಯ ಇಲಾಖೆ ಮುಂದಾಗಿದೆ.
Meerut: Monkey run away with#coronatest samples, locals fear spread of infection.#IndiaFightsCoronaviruspic.twitter.com/Mpe9tuR3H6
— Sanjay Jha (@JhaSanjay07)May 29, 2020

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 − ten =
Remember me
