ತಿರುವನಂತಪುರ:ನೈಋತ್ಯ ಮಾನ್ಸೂನ್​ ಮಾರುತಗಳು ಇಂದು ಕೇರಳ ತಲುಪಿವೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಜೂನ್​ ತಿಂಗಳ ಆರಂಭದಲ್ಲೇ ಆಗಮಿಸಬೇಕಾದ ಮಾನ್ಸೂನ್​ ಈ ಬಾರಿ ಕೊಂಚ ತಡವಾಗಿ ಆಗಮಿಸಿದೆ.
ನೈಋತ್ಯ ಮಾನ್ಸೂನ್​ ಆಗಮನ ಹಿನ್ನೆಲೆಯಲ್ಲಿ ಕೇರಳದ ವಿವಿಧ ಭಾಗಗಳಲ್ಲಿ ಮಳೆಯಾಗಲಿದೆ. ಮಾನ್ಸೂನ್​ ಮಾರುತಗಳು ರಾಜ್ಯಕ್ಕೆ ಅಪ್ಪಳಿಸುತ್ತಿದ್ದಂತೆ ಹವಾಮಾನ ಇಲಾಖೆ ಮಳೆಯ ಎಚ್ಚರಿಕೆ ನೀಡಿದೆ. ಮಾನ್ಸೂನ್​ ಮಾರುತಗಳು ನಿನ್ನೆಯೇ ಲಕ್ಷದ್ವೀಪ ತಲುಪಿದ್ದವು. ಆದರೆ, ಸೈಕ್ಲೋನ್​ ಬಿಪರ್ಜೋಯ್​ ಕಾರಣದಿಂದಾಗಿ ಬೇಗ ಕೇರಳ ತಲುಪಲು ಸಾಧ್ಯವಾಗಲಿಲ್ಲ.
ಅರೆಬಿಯನ್​ ಸಮುದ್ರದಿಂದ ಸೈಕ್ಲೋನ್​ ಉತ್ತರಕ್ಕೆ ಚಲಿಸಿದರಿಂದ ಮಾನ್ಸೂನ್​ ಮಾರುತಗಳು ಕೇರಳ ಕಡೆಗೆ ಚಲಿಸಲು ಆರಂಭಿಸಿತು. ಅಂತಿಮವಾಗಿ ಇಂದು ಕೇರಳಕ್ಕೆ ಮಾನ್ಸೂನ್​ ಆಗಮಿಸಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ತಮಿಳುನಾಡು ಮತ್ತು ಕರ್ನಾಟಕಕ್ಕೂ ಮಾನ್ಸೂನ್​ ಮಾರುಗಳು ಅಪ್ಪಳಿಸಲಿವೆ. ಮುಂದಿನ 48 ಗಂಟೆಗಳಲ್ಲಿ ಕರ್ನಾಟಕದಲ್ಲೂ ಮಳೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ:ಕೊಪ್ಪಳ | ನವಜಾತ ಹೆಣ್ಣು ಶಿಶುವನ್ನು ಮುಳ್ಳಿನ ಪೊದೆಗೆ ಎಸೆದು ಹೋದ ತಾಯಿ!
ಮುಂದಿನ ಕೆಲವೇ ಗಂಟೆಗಳಲ್ಲಿ ಕೇರಳ ರಾಜ್ಯದ ಒಂಟಿ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೊಯಿಕ್ಕೋಡ್​ಗೆ ಆರೆಂಜ್​ ಅಲರ್ಟ್​ ಘೋಷಣೆ ಮಾಡಲಾಗಿದೆ. ತಿರುವನಂತಪುರಂ, ಕೊಲ್ಲಂ, ಪಟ್ಟಣಂತಿಟ್ಟ, ಅಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ಮಲಪ್ಪುರಂ ಮತ್ತು ಕಣ್ಣೂರಿಗೆ ಇಂದು ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಸೋಮವಾರದವರೆಗೂ ಯೆಲ್ಲೋ ಅಲರ್ಟ್​ ವಿವಿಧ ಜಿಲ್ಲೆಗಳಲ್ಲಿ ಮುಂದುವರಿಯಲಿದೆ.
ಜೂ. 9: ಕೊಯಿಕ್ಕೋಡ್​, ತಿರುವನಂತಪುರಂ, ಕೊಲ್ಲಂ, ಪಟ್ಟಣಂತಿಟ್ಟ, ಅಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ಮಲಪ್ಪುರಂ ಮತ್ತು ಕಣ್ಣೂರು.ಜೂ. 10: ಪಟ್ಟಣಂತಿಟ್ಟ, ಅಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ ಮತ್ತು ಇಡುಕ್ಕಿ.ಜೂ. 11: ಪಟ್ಟಣಂತಿಟ್ಟ, ಅಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ ಮತ್ತು ಇಡುಕ್ಕಿ.ಜೂ. 12: ಪಟ್ಟಣಂತಿಟ್ಟ, ಅಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ ಮತ್ತು ಇಡುಕ್ಕಿ.
ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಕಸರತ್ತು: ಸಿಟಿ ರೌಂಡ್ಸ್​ ನಡುವೆ ಸಿಎಂ ಸಿದ್ದುಗೆ ಸಲಹೆ ಕೊಟ್ರಾ ಡಿಕೆಶಿ?

ಗಾಯಾಳುವನ್ನು ಸಾಗಿಸುತ್ತಿದ್ದ ಆಂಬ್ಯುಲೆನ್ಸ್​ಗೆ ಬೆಂಕಿ ಇಟ್ಟ ಬಂಡುಕೋರರು; ಮೂವರು ಸಜೀವ ದಹನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 6 =
Remember me
