ಕೊಚ್ಚಿನ್​:ಈಗಾಗಲೇ ಎಡಬಿಡದೇ ಸುರಿಯುತ್ತಿರುವ ಅಕಾಲಿಕ ಮಳೆ ಭಾರೀ ಅನಾಹುತವನ್ನೇ ಸೃಷ್ಟಿ ಮಾಡಿದ್ದು, ಇದರ ಬೆನ್ನಲ್ಲೇ ಮುಂಗಾರು ಪ್ರವೇಶಿಸಲಿದ್ದು, ಮುಂದಿನ ವಾರದಿಂದ ಮತ್ತಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಾನ್ಸೂನ್​ ಪ್ರವೇಶಕ್ಕೂ ಮುನ್ನ ಸುರಿಯುತ್ತಿರುವ ಮಳೆಯಿಂದಾಗಿ ಈಗಾಗಲೇ ಜನರು ಸಂಕಷ್ಟಕ್ಕೀಡಾಗಿದ್ದು, ಈ ಬಾರಿ ಅವಧಿಗೂ ಮುನ್ನ ಪ್ರವೇಶಿಸುತ್ತಿರುವ ಮಾನ್ಸೂನ್​ ಮಾರುತಗಳು ಭಾರೀ ಮಳೆ ಸುರಿಸುವ ಸಾಧ್ಯತೆ ಇದೆ.
ಇನ್ನು ಕರಾವಳಿ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿಯನ್ನೇ ತಂದೊಡ್ಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಾರಿ ಮೂರು ದಿನ ಮೊದಲೇ ಮಾನ್ಸೂನ್​ ಮಳೆಯಾಗಲಿದ್ದು, ಪ್ರತಿ ವರ್ಷ ಜೂನ್​ 1 ರಂದು ಪ್ರವೇಶಿಸುತ್ತಿದ್ದ ಮಾರುತಗಳು ಈ ಬಾರಿ ಮೇ 27ರಂದೇ ಪ್ರವೇಶಿಸುತ್ತಿವೆ.
ಕೇರಳಕ್ಕೆ ತಲುಪುತ್ತಿದ್ದಂತೆ ಭಾರೀ ಮಳೆ ಸುರಿಸಲಿರುವ ಮಾನ್ಸೂನ್​ ಮಳೆ ಕರ್ನಾಟಕಕ್ಕೆ ಬರುತ್ತಿದ್ದಂತೆ ಮಳೆ ಪ್ರಮಾಣ ತಗ್ಗಿಸುವ ಸಾಧ್ಯತೆ ಇದೆ. ಹಾಗಾಗಿ ಭಾರೀ ಮಳೆಯಾಗುವ ಸಾಧ್ಯತೆ ಕಡಿಮೆ ಇದೆ ಎಂದು ಹೇಳಿದೆ.
ಮಾನ್ಸೂನ್​​ ಮಳೆ ಈ ಬಾರಿಯೂ ಉತ್ತಮ ಮಳೆಯಾಗಲಿದ್ದು, ದೇಶಾದ್ಯಂತ ಮಳೆ ಕೊರತೆ ಕಾಡುವುದಿಲ್ಲ. ಸದ್ಯ ರಾಷ್ಟ್ರ ರಾಜದಾನಿ ದೆಹಲಿಯಲ್ಲಿ ಮಾತ್ರ ಬಿಸಿಗಾಳಿ ಬೀಸುತ್ತಿದ್ದು, ಗರಿಷ್ಠ 45 ಡಿಗ್ರಿ ತಾಪಮಾನವಿದೆ. ಮುಂದಿನ ವಾರದಿಂದ ಇದು ತಗ್ಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.(ಏಜೆನ್ಸೀಸ್​)
ಕೆನಡಾ ಸಂಸತ್​​ನಲ್ಲಿ ಕನ್ನಡದ ಕಂಪು: ಕುವೆಂಪು ಅವರ ಗೀತೆ ಹಾಡಿದ ಸಂಸದನ ವಿಡಿಯೋ ವೈರಲ್​​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + one =
Remember me
