ಹಮೀರ್​ಪುರ್​:ಮೊದಲ ರಾತ್ರಿಯಂದು ಕಾಮೋತ್ತೇಜಕ ಮಾತ್ರೆಗಳನ್ನು ಸೇವಿಸಿ, ಮದವೇರಿದ ಆನೆಯಂತೆ ಪತ್ನಿಯ ಮೇಲೆರಗಿದ ಪರಿಣಾಮ ಆಕೆ ದುರಂತ ಸಾವಿಗೀಡಾಗಿರುವ ಘಟನೆ ಉತ್ತರ ಪ್ರದೇಶದ ಹಮೀರ್​ಪುರದಲ್ಲಿ ನಡೆದಿದೆ.
ಮೊದಲ ರಾತ್ರಿಯಂದು ಗಂಡನ ದೌರ್ಜನ್ಯದಿಂದ ಗಂಭೀರವಾಗಿ ಗಾಯಗೊಂಡಿದ್ದ ನವವಿವಾಹಿತೆಯನ್ನು ಕಾನ್ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮದುವೆಯಾದ ಏಳೇ ದಿನದಲ್ಲಿ ಗಂಡನ ಕಾಮದಾಹಕ್ಕೆ ನವವಿವಾಹಿತೆ ಬಲಿಯಾಗಿದ್ದಾಳೆ.
ಫೆ.7ರಂದು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಫೆ.10ರಂದು ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಆಕೆಯ ಗಂಡ ಮತ್ತು ಕುಟುಂಬದ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಮೃತಳ ಕುಟುಂಬಸ್ಥರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಘಟನೆಯ ಬೆನ್ನಲ್ಲೇ ಮೃತಳ ಗಂಡ ಮನೆಯನ್ನು ಲಾಕ್​ ಮಾಡಿ, ತನ್ನ ಕುಟುಂಬಸ್ಥರೊಂದಿಗೆ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಉರೈ ಮೂಲದ ಇಂಜಿನಿಯರ್​ ಜತೆ ಫೆ.3ರಂದು ಮೃತ ಮಹಿಳೆ ಮದುವೆಯಾಗಿದ್ದಳು. ಮಹಿಳೆಯ ಪಾಲಕರು ಈಗಾಗಲೇ ತೀರಿಕೊಂಡಿದ್ದಾರೆ. ಸಂಬಂಧಿಕರೇ ಮುಂದೆ ನಿಂತು ಮದುವೆ ಮಾಡಿಕೊಟ್ಟಿದ್ದರು. ಆಕೆಯ ಸಹೋದರ, ಸರ್ಕಾರಿ ಕೆಲಸದಲ್ಲಿದ್ದು, ಸಹೋದರಿಯ ಮದುವೆಯನ್ನು ಅದ್ಧೂರಿಯಾಗಿ ಮಾಡಿಕೊಟ್ಟಿದ್ದ. ಫೆ.4ರಂದು ಮಹಿಳೆ ಅತ್ತೆಯ ಮನೆಗೆ ಸ್ಥಳಾಂತರವಾಗಿದ್ದಳು.
ಇಂಜಿನಿಯರ್​ ಗಂಡ ಕಾಮೋತ್ತೇಜಕ ಮಾತ್ರೆಗಳನ್ನು ಸೇವಿಸಿದ ನಂತರ ಮದವೇರಿದ ಆನೆಯಂತೆ ವಧುವಿನ ಮೇಲೆರಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಇದರಿಂದ ಮಹಿಳೆ ತೀವ್ರವಾಗಿ ಗಾಯಗೊಂಡಳು ಮತ್ತು ದಿನ ಕಳೆದಂತೆ ಆಕೆಯ ಸ್ಥಿತಿ ಇನ್ನಷ್ಟು ಹದಗೆಡಲು ಆರಂಭಿಸಿತು. ಮಹಿಳೆಯ ಸ್ಥಿತಿ ಹದಗೆಟ್ಟ ನಂತರ ಮಹಿಳೆಯನ್ನು ಸ್ತ್ರೀರೋಗತಜ್ಞರ ಬಳಿಗೆ ಕರೆದೊಯ್ಯಲಾಯಿತು. ಮಹಿಳೆಯು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗುವಷ್ಟು ದೌರ್ಜನ್ಯಕ್ಕೆ ಒಳಗಾಗಿದ್ದಾಳೆ ಎಂದು ವೈದ್ಯರು ಹೇಳಿದರು.
ಮದುವೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಮಹಿಳೆ ಕಾನ್ಪುರಕ್ಕೆ ಹೋಗಿದ್ದ ಸಮಯದಲ್ಲಿ ಅಲ್ಲಿಯೇ ಆಕೆ ಅಸ್ವಸ್ಥರಾಗಿದ್ದರು. ನಂತರ ಆಕೆಯನ್ನು ಕಾನ್ಪುರದ ಖಾಸಗಿ ನರ್ಸಿಂಗ್ ಹೋಂಗೆ ಕರೆದೊಯ್ಯಲಾಯಿತು. ಮಹಿಳೆಯ ಸ್ಥಿತಿ ಹದಗೆಟ್ಟಿದ್ದನ್ನು ನೋಡಿದ ಗಂಡ, ಕಾಮೋತ್ತೇಜಕ ಮಾತ್ರೆ ಸೇವಿಸಿ, ಆಕೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಮಹಿಳೆಯು ಮೊದಲ ರಾತ್ರಿಯಲ್ಲಿ ಅನುಭವಿಸಿದ ಗಾಯಗಳಿಂದ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾಳೆ. ಆಕೆಯ ಖಾಸಗಿ ಭಾಗದಲ್ಲಾದ ಗಾಯಗಳು, ಸೋಂಕಿಗೆ ಕಾರಣವಾಗಿ ಫೆ. 10 ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ.
ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮಹಿಳೆಯ ಸಹೋದರ ಆಗ್ರಹಿಸಿದ್ದು, ಪೊಲೀಸರಿಗೆ ಲಿಖಿತ ದೂರನ್ನೂ ಸಲ್ಲಿಸಿದ್ದಾರೆ. ಆರೋಪಿ ಪತಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.(ಏಜೆನ್ಸೀಸ್​)
ಗೂಗಲ್ ಸಿಇಒ ಸುಂದರ್ ಪಿಚೈ ತಮ್ಮ ದಿನ ಹೇಗೆ ಪ್ರಾರಂಭಿಸುತ್ತಾರೆ ಗೊತ್ತಾ?

ನಾನೇನಾದ್ರೂ ಅದರ ಬಗ್ಗೆ ಹೇಳಿದ್ರೆ ವಿವಾದ ಆಗ್ಬಿಡುತ್ತೆ! ಪಿವಿ ಸಿಂಧು ರಾಕ್,​ ವಿಜಯ್​ ಫ್ಯಾನ್ಸ್​ ಶಾಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 4 =
Remember me
