ಉತ್ತರ ಪ್ರದೇಶ:ಪತ್ನಿಯ ಆಸೆಗಳನ್ನು ಪೂರೈಸಲು ಮುಂದಾದ ಗಂಡನಿಗೆ ಇದೀಗ ಕಂಬಿ ಎಣಿಸುವ ಸ್ಥಿತಿ ಬಂದೊದಗಿದೆ. ಹೌದು, ಹೆಂಡತಿಯನ್ನು ಕುನು ಮನಾಲಿಗೆ ಕರೆದುಕೊಂಡು ಹೋಗಿ, ಸತ್ತಾಡಿಸಬೇಕೆಂದು ಬೈಕ್ ಹಾಗೂ ನಗದು ದೋಚಿದ್ದ ವ್ಯಕ್ತಿಯನ್ನು ಕೊತ್ವಾಲಿ ಪೊಲೀಸರು ಬಂಧಿಸಿದ್ದಾರೆ.
ಹಾಶಿಮ್ ಎಂಬಾತನಿಗೆ ಕೆಲ ತಿಂಗಳ ಹಿಂದೆ ಮದುವೆಯಾಗಿತ್ತು. ಪತ್ನಿ ದುಬಾರಿ ಬೆಲೆ ವಾಹನ ಹಾಗೂ ವಸ್ತುಗಳಿಗೆ ಬೇಡಿಕೆ ಇಡುತ್ತಿದ್ದಳು. ಆದರೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ ಹಾಶಿಮ್​ಗೆ ಹೆಂಡಿತಿಯ ಬಯಕೆ ತೀರಿಸಲು ಹಣ ಹೊಂದಿಸುವುದೇ ಸವಾಲಾಗಿತ್ತು. ಇದಕ್ಕಾಗಿ ಆತ ಆರಿಸಿಕೊಂಡ ದಾರಿ ಕಳ್ಳತನ.
ಇದನ್ನೂ ಓದಿ:VIDEO | ಮತಾಂತರಗೊಂಡು ಮದುವೆಯಾದ ಯುವತಿ; ಬೇಸತ್ತ ಪಾಲಕರು ಠಾಣೆಯಲ್ಲಿ ಮಾಡಿದ್ದೇನು ನೋಡಿ…
ಹನಿಮೂನ್​ಗೆ ಹೆಂಡತಿಯನ್ನು ಆಕೆಯ ನೆಚ್ಚಿನ ಬುಲೆಟ್ ಬೈಕ್​ನಲ್ಲಿ ಕರೆದುಕೊಂಡು ಹೋಗಲು ನಿರ್ಧರಿಸಿದ್ದ. ಇದಕ್ಕಾಗಿ ಹಾಶಿಮ್, ಬೈಕ್ ಕಳ್ಳತನ ಮಾಡಿದ್ದಾನೆ. ಅಲ್ಲದೆ ಮೆಡಿಕಲ್ ಶಾಪ್​ ಒಂದರಿಂದ 1.90 ಲಕ್ಷ ರೂಪಾಯಿಯನ್ನೂ ದೋಚಿದ್ದ. ಬಳಿಕ ಪತ್ನಿಯೊಂದಿಗೆ ಕದ್ದ ಬೈಕ್​ನಲ್ಲಿ ಕುನು ಮನಾಲಿಗೆ ಹೋಗಿದ್ದಾನೆ.
ಪ್ರಕರಣದ ಬಗ್ಗೆ ದೂರು ದಾಖಲಿಸಿಕೊಂಡು ಪೊಲೀಸರು ನಗರರ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಹನಿಮೂನ್​ನಿಂದ ಮುಗಿಸಿ ಬಂದಿದ್ದ ಹಾಶಿಮ್, ಕದ್ದ ಹಣದಲ್ಲಿ ಈ ಹಿಂದೆ ಮಾಡಿದ್ದ ಸಾಲ ತೀರಿಸಲು ತೆರಳಿದ್ದ. ಈ ವೇಳೆ ಬಂಧಿಸಿದ ಪೊಲೀಸರು, ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ:ಕೈಕೊಟ್ಟ ಮುಂಗಾರು | ಮಳೆಗಾಗಿ ಪ್ರಾರ್ಥಿಸಿ ವಿಜಯಪುರದಲ್ಲಿ ಗೊಂಬೆಗಳ‌ ಮದುವೆ; ಬೆಳಗಾವಿಯಲ್ಲಿ ಕತ್ತೆಗಳಿಗೆ ಮದುವೆ
ಹಾಶಿಮ್ ತನ್ನ ಹೆಂಡತಿಯ ಆಸೆಗಳನ್ನು ಪೂರೈಸಲು ಕಳ್ಳತನಕ್ಕೆ ಇಳಿದಿದ್ದ. ಜೂನ್ 3ರಂದು ಮಜೋಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಲೆಟ್ ಬೈಕ್ ಹಾಗೂ ಜೂನ್ 4ರಂದು ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಮೆಡಿಕಲ್​ನಲ್ಲಿ ಹಣ ತುಂಬಿದ್ದ ಬ್ಯಾಗ್ ದೋಚಿದ್ದಾನೆ. ಆತನಿಂದ ಸದ್ಯ 45,000 ರೂ., ಪಿಸ್ತೂಲ್ ಹಾಗೂ ಬುಲೆಟ್ ಬೈಕ್​ನ್ನು ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
