ಅಹಮದಾಬಾದ್​:ಗುಜರಾತ್​ನ ಮಚ್ಚು ನದಿಗೆ ನಿರ್ಮಿಸಲಾಗಿದ್ದ ತೂಗುಸೇತುವೆ ಕುಸಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 132ಕ್ಕೆ ಏರಿದ್ದು, ಕ್ಷಣಕ್ಷಣಕ್ಕೂ ಆತಂಕ ಮಡುಗಟ್ಟಿದೆ. ಸೇತುವೆ ಬಳಿ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
132 deaths have been reported so far: Gujarat Home Minister Harsh Sanghavi briefs on#MorbiBridgeCollapsepic.twitter.com/wIvQkAGr1z
— ANI (@ANI)October 31, 2022

ಇನ್ನೂ ನೂರಾರು ಜನ ನಾಪತ್ತೆಯಾಗಿದ್ದು, ಎನ್​ಡಿಆರ್​ಎಫ್​​ ತಂಡ, ಸೇನಾಪಡೆ, ವಾಯುಪಡೆ, ನೌಕಾಪಡೆ, ಅಗ್ನಿಶಾಮಕ ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಶವಗಳು ಸಿಗುತ್ತಲೇ ಇವೆ. ತೂಗುಸೇತುವೆ ಮೇಲೆ ಛತ್​ ಪೂಜೆಯ ನಿಮಿತ್ತ ಕೆಲವು ವಿಧಿವಿಧಾನಗಳನ್ನು ನೆರವೇರಿಸಲು ನದಿ ತೀರದಲ್ಲಿ ಸಾವಿರಾರು ಮಂದು ಭಾನುವಾರ ಜಮಾಯಿಸಿದ್ದರು. ಸಂಜೆ 6.30ರಲ್ಲಿ ಪ್ರವಾಸಿಗರು ಸೇರಿ 500ಕ್ಕೂ ಅಧಿಕ ಮಂದಿ ಸೇತುವೆ ಮೇಲೆ ನಿಂತಿದ್ದರು. ಆ ವೇಳೆ ಸೇತುವೆ ಕುಸಿದಿದೆ. ಈ ದುರಂತ ಇಡೀ ಗುಜರಾತ್​ ಬೆಚ್ಚಿಬಿದ್ದಿದೆ. ಇನ್ನು ಸ್ಥಳೀಯರೂ ಇಡೀ ರಾತ್ರಿ ನಿದ್ರೆ ಮಾಡದೆ ಸ್ಥಳದಲ್ಲೇ ಇದ್ದು ರಕ್ಷಣಾ ಕಾಯಾಚರಣೆಗೆ ಸಹಕರಿಸಿದ್ದಾರೆ.
#MorbiBridgeCollapse| Indian Army teams deployed in Morbi, Gujarat carried out search and rescue operations for survivors of the mishap. All three defence services have deployed their teams for search operations: Defence officialspic.twitter.com/tfEjCW3MhE
— ANI (@ANI)October 31, 2022

ಈ ದುರಂತದ ಬಗ್ಗೆ ವಿವರಿಸಲು ಸಾಧ್ಯವಿಲ್ಲ. ಹಲವು ಮಕ್ಕಳೂ ಸತ್ತಿದ್ದಾರೆ. ಮೃತದೇಹಗಳನ್ನು ಸಾಗಿಸಲು ನಾನು ನನ್ನ ಸ್ವಂತ ವಾಹನವನ್ನೇ ಕೊಟ್ಟೆ. ಇಂತಹ ದುರ್ಘಟನೆಯನ್ನು ನಾನು ಎಂದೂ ನೋಡಿಲ್ಲ.. ಎನ್ನುತ್ತಲೇ ಪ್ರತ್ಯಕ್ಷದಶಿ ಹಸೀನಾ ಕಂಬನಿ ಮಿಡಿದರು.
ತೂಗು ಸೇತುವೆ ಬಳಿ ವಾರಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕ. ನಾನು ನಾನು ಪ್ರತಿ ಭಾನುವಾರ ಅಲ್ಲಿ ಟೀ ಮಾರುತ್ತೇನೆ. ನೋಡನೋಡುತ್ತಿದ್ದಂತೆ ಸೇತುವೆ ಕುಸಿದು ಬಿತ್ತು. ಸುಮಾರು 8 ತಿಂಗಳ ಗರ್ಭಿಣಿಯೊಬ್ಬರು ಈ ದುರಂತದಲ್ಲಿ ಮೃತಪಟ್ಟಿದ್ದಾರೆ. ಇಂತಹ ಹೃದಯ ವಿದ್ರಾವಕ ದುರ್ಘಟನೆ ನೋಡಿ ರಾತ್ರಿ ಇಡೀ ನಿದ್ರೆಯೇ ಬರಲಿಲ್ಲ. ಸ್ಥಳದಲ್ಲೇ ಇದ್ದು ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಿದೆ, ಶವಗಳನ್ನು ಸಾಗಿಸಲು ಹೆಗಲು ಕೊಟ್ಟೆ… ಇಂತಹ ದುರಂತವನ್ನ ನಾನು ನನ್ನ ಜೀವನದಲ್ಲಿ ನೋಡಿಯೇ ಇರಲಿಲ್ಲ… ನನ್ನ ಕಣ್ಣೆದುರೇ ಅರೆಕ್ಷಣದಲ್ಲಿ ಎಲ್ಲರ ಬದುಕು ಸರ್ವನಾಶವಾಯ್ತು… ಎಂದು ಮತ್ತೊಬ್ಬ ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದ್ದಾರೆ.
Gujarat | "I sell tea there every Sunday. People were hanging from cables & then slipped down. I didn't sleep & helped people entire night. It was heart-wrenching to see a 7-8-month-pregnant woman die. Never saw anything like that in my life," says an eye-witness of#MorbiTragedypic.twitter.com/sippTi2oaC
— ANI (@ANI)October 31, 2022

ಇನ್ನು ಬಿಜೆಪಿ- ಕಾಂಗ್ರೆಸ್​ ಎರಡೂ ಪಕ್ಷಗಳೂ ಗುಜರಾತ್​ನಲ್ಲಿ ಇಂದು ನಡೆಯಬೇಕಿದ್ದ ಕಾರ್ಯಕ್ರಮಗಳನ್ನು ಮುಂದೂಡಿವೆ. ಇಂದು ನಡೆಯಬೇಕಿದ್ದ ಕಾಂಗ್ರೆಸ್​ನ​ ‘ಪರಿವರ್ತನಾ ಯಾತ್ರೆ’, ಪ್ರಧಾನಿ ನರೇಂದ್ರ ಮೋದಿ ಅವರ ರೋಡ್​ ಶೋ ಕಾರ್ಯಕ್ರಮ ರದ್ದಾಗಿದೆ.
ಗುಜರಾತ್​ನಲ್ಲಿ ತೂಗುಸೇತುವೆ ದುರಂತ: ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಕೇಂದ್ರ-ರಾಜ್ಯ ಸರ್ಕಾರ

ಹೊಸದುರ್ಗದಲ್ಲಿ ಇಬ್ಬರು ಮಕ್ಕಳೊಂದಿಗೆ ಚೆಕ್​ ಡ್ಯಾಂಗೆ ಹಾರಿ ಪ್ರಾಣಬಿಟ್ಟ ತಾಯಿ! ಸಾವಿಗೂ ಮುನ್ನ ಆಕೆ ಮಾಡಿಟ್ಟ ವಿಡಿಯೋ ನೋಡಿದ್ರೆ ಮನಕಲಕುತ್ತೆ

ಇನ್ನೇನು ತಾಳಿಕಟ್ಟಬೇಕು, ನಾಳೆಯೇ ಹನಿಮೂನ್​… ಅಷ್ಟರಲ್ಲಿ ಪೊಲೀಸರ ಅತಿಥಿಯಾದ ವರ! ನಿಟ್ಟುಸಿರು ಬಿಟ್ಟ ವಧುವಿನ ಕುಟುಂಬಸ್ಥರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
