ಹೈದರಾಬಾದ್​:ಮೂರ್ನಾಲ್ಕು ದಿನಗಳ ಹಿಂದಷ್ಟೇ ಸುರಿದಿದ್ದ ಭಾರಿ ಮಳೆಗೆ ಪ್ರವಾಹ ಸೃಷ್ಟಿಯಾಗಿ ರಸ್ತೆಗಳೆಲ್ಲ ನದಿಯಂತಾಗಿ, ಕಾರುಗಳು ನೀರಲ್ಲಿ ಮುಳುಗಿ, ಕಟ್ಟಡಗಳೆಲ್ಲ ಸಂಪೂರ್ಣ ಜಲಾವೃತಗೊಂಡಿದ್ದಲ್ಲದೆ, 50 ಕ್ಕೂ ಹೆಚ್ಚು ಜನರ ಸಾವಿನಿಂದ ಕಂಗಾಲಾಗಿದ್ದ ಹೈದರಾಬಾದ್​ ಜನತೆಗೆ ಶನಿವಾರ ಸಂಜೆ ಮತ್ತೆ ಸುರಿದ ಭಾರಿ ಮಳೆ ಗಾಯದ ಮೇಲೆ ಬರೆ ಎಳೆದಿದೆ.
ಮುತ್ತಿನ ನಗರಿಯ ಕೆಲವು ಏರಿಯಾಗಳು ಮತ್ತೆ 150 ಮಿ. ಮೀಟರ್​ಗೂ ಅಧಿಕ ಮಳೆಯನ್ನು ಸುರಿದಿದೆ. ಮಂಗಳವಾರವಷ್ಟೇ ಬರೋಬ್ಬರಿ 190 ಮಿ. ಮೀ ಮಳೆಯಾಗಿತ್ತು. ನಿನ್ನೆ ಸುರಿದ ಮಳೆಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ರಸ್ತೆಗಳಲ್ಲಿ ಸುಮಾರು 2 ಅಡಿ ನೀರು ತುಂಬಿರುವುದು ಕಂಡುಬಂದಿದೆ.
ALERT : Innundation of low lying colonies Hafiz baba nagar, Phoolbagh, Omar Colony, Indra Nagar, Shivaji Nagar, Rajiv Nagar. Please cooperate with Police in evacuation exercise. ACP Santoshnagar, ACP Falaknuma, Insp Chandrayangutta, Insp Madannapet, Insp Chatrinaka are presentpic.twitter.com/xwErATGdMk
— C.V.ANAND, IPS (@CPHydCity)October 17, 2020

ಗ್ರೇಟರ್​ ಹೈದರಾಬಾದ್​ ಮುನ್ಸಿಪಲ್​ ಕಾರ್ಪೋರೇಷನ್​ (ಜಿಎಚ್​ಎಂಸಿ) ನ ವಿಪತ್ತು ಪ್ರತಿಕ್ರಿಯೆ ಪಡೆ (ಡಿಆರ್​ಎಫ್​)ನಗರದಲ್ಲಿ ತುಂಬಿರುವ ಮಳೆ ನೀರನ್ನು ತೆರವುಗೊಳಿಸಲು ನಿರಂತರ ಶ್ರಮಿಸುತ್ತಿದೆ. ಸಾಧ್ಯವಾದ ಎಲ್ಲ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಜಿಎಚ್​ಎಂಸಿಯ ಜಾಗರೂಕತೆ ಮತ್ತು ವಿಪತ್ತು ನಿರ್ವಹಣೆಯ ನಿರ್ದೇಶಕರಾದ ವಿಶ್ವಜಿತ್​ ಕಂಪತಿ ಟ್ವೀಟ್​ ಮೂಲಕ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಒಂದೂವರೆ ವರ್ಷದ ಬಳಿಕ ಕೋಮಾದಿಂದೆದ್ದು ಇಬ್ಬರ ಜೈಲಿಗಟ್ಟಿದ!
ಭಾನುವಾರವೂ ಕೂಡ ಹೈದರಾಬಾದಿನ ಕೆಲವು ಏರಿಯಾಗಳಲ್ಲಿ ಗುಡುಗು-ಮಿಂಚು ಸಹಿತ ಸಾಧಾರಣ ಮಳೆಯಾಗಲಿದ್ದು, ಒಂದು ಅಥವಾ ಎರಡು ಪ್ರದೇಶಗಳಲ್ಲಿ ತೀವ್ರ ಮಳೆಯಾಗಲಿದೆ ಎಂದು ಹೈದರಾಬಾದ್​ ಹವಮಾನ ಇಲಾಖೆ ಎಚ್ಚರಿಸಿದೆ. ಇನ್ನು ಭಾರಿ ಮಳೆಗೆ ಫಲಕ್ನುಮಾದ ರೈಲ್ವೆ ಸೇತುವೆ ಮೇಲೆ ದೊಡ್ಡ ರಂಧ್ರವೊಂದು ಕಾಣಿಸಿಕೊಂಡಿದ್ದು, ಮಾರ್ಗವನ್ನು ಬದಲಾವಣೆ ಮಾಡಲಾಗಿದೆ.
https://twitter.com/Hidderkaran/status/1317517264657076224?s=20
ಗುರುವಾರವಷ್ಟೇ ಮಾಹಿತಿ ನೀಡಿದ್ದ ತೆಲಂಗಾಣ ಸರ್ಕಾರ, ಭಾರಿ ಮಳೆಯಿಂದ ಉಂಟಾದ ಪ್ರವಾಹ ಮತ್ತು ಹಾನಿಯಿಂದ ಸುಮಾರು 50 ಮಂದಿ ಜೀವ ಕಳೆದುಕೊಂಡಿದ್ದಾರೆಂದು ತಿಳಿಸಿದೆ. ಸುಮಾರು 6000 ಕೋಟಿ ರೂ. ನಷ್ಟವಾಗಿದೆ ಎಂದು ಸರ್ಕಾರ ಅಂದಾಜಿಸಿದೆ.
ಮಳೆ ಹಾನಿ ಪ್ರದೇಶಗಳಲ್ಲಿ ಅಧಿಕಾರಿಗಳು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಕೆಲವು ಪ್ರದೇಶಗಳು ಈಗಲೂ ಜಲಾವೃತಗೊಂಡಿದ್ದು, ನೀರಿನಲ್ಲಿ ಸಿಲುಕಿಕೊಂಡಿರುವವರ ರಕ್ಷಣೆಗೆ ರಾಷ್ಟ್ರೀಯ ವಿಪ್ಪತ್ತು ನಿರ್ವಹಣಾ ತಂಡ ಮತ್ತು ಸೇನೆಯನ್ನು ನಿಯೋಜಿಸಲಾಗಿದೆ.
ಇನ್ನು ತೆಲಂಗಾಣ ಮಾತ್ರವಲ್ಲದೆ, ಪಕ್ಕದ ಆಂಧ್ರ ಪ್ರದೇಶ ಮತ್ತು ಕರ್ನಾಟಕವೂ ಸಹ ಭಾರಿ ಮಳೆಗೆ ತೀವ್ರ ಸಂಕಷ್ಟ ಎದುರಿಸಿವೆ. ಶನಿವಾರ ಮಾಧ್ಯಮ ಉದ್ದೇಶಿಸಿ ಮಾತನಾಡಿದ ತೆಲಂಗಾಣ ಸಚಿವ ಕೆ.ಟಿ. ರಾಮ ರಾವ್​, ಪ್ರವಾಹ ಪೀಡಿತ ಕುಟುಂಬಗಳಿಗೆ ಆಹಾರ ಕಿಟ್​ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
Car hit to TATA ACE vehicle from the backside on ORR.ORR Patrol mobile team alerting oncoming traffic about the incident.
Drive slow. Be safe.pic.twitter.com/KRmt6ThtLW
— CYBERABAD TRAFFIC POLICE సైబరాబాద్ ట్రాఫిక్ పోలీస్ (@CYBTRAFFIC)October 17, 2020

ಇದನ್ನೂ ಓದಿ:ದಲಿತರ ಬೀದಿಗೆ ದೇವರು ಬರಲಿ ಎಂದಿದ್ದಕ್ಕೆ 50 ಸಾವಿರ ರೂ. ದಂಡ!
ಪ್ರತಿ ಆಹಾರ ಕಿಟ್​ಗೆ 2,800 ವೆಚ್ಚವಾಗಲಿದ್ದು, ಒಂದು ಕಿಟ್​ನಲ್ಲಿ ಅಗತ್ಯ ಪಡಿತರ ಮತ್ತು ಮೂರು ಬ್ಲ್ಯಾಂಕೆಟ್ಸ್​ ಇರಲಿವೆ ಎಂದಿದ್ದಾರೆ.(ಏಜೆನ್ಸೀಸ್​)
ಆಗಸದಲ್ಲಿ ವಿಚಿತ್ರ ವಸ್ತು ನೋಡಿ ಬೆಚ್ಚಿಬಿದ್ದ ಉತ್ತರ ಪ್ರದೇಶ ಜನ: ಏಲಿಯನ್​ ಅಂದುಕೊಂಡವರಿಗೆ ಕಾದಿತ್ತು ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 14 =
Remember me
