ನವದೆಹಲಿ: ಕರ್ನಾಟಕದ ಹೊಯ್ಸಳರ ಕಾಲದ ಮೂರು ಪ್ರಮುಖ ದೇವಾಲಯಗಳು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್​ (ಟ್ವಿಟರ್​) ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ಯುನೆಸ್ಕೋ ಪೋಸ್ಟ್​ ಅನ್ನು ಶೇರ್​ ಮಾಡಿರುವ ಪ್ರಧಾನಿ ಮೋದಿ ಭಾರತಕ್ಕೆ ಇನ್ನಷ್ಟು ಹೆಮ್ಮೆ ಎಂದಿದ್ದಾರೆ. ಹೊಯ್ಸಳರ ಭವ್ಯವಾದ ಪವಿತ್ರ ದೇವಾಲಯಗಳು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಹೊಯ್ಸಳ ದೇವಾಲಯಗಳ ಕಾಲಾತೀತ ಸೌಂದರ್ಯ ಮತ್ತು ಸಂಕೀರ್ಣ ವಿವರಗಳು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ನಮ್ಮ ಪೂರ್ವಜರ ಅಸಾಧಾರಣ ಕರಕುಶಲತೆಗೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.
More pride for India!
The magnificent Sacred Ensembles of the Hoysalas have been inscribed on the@UNESCOWorld Heritage List. The timeless beauty and intricate details of the Hoysala temples are a testament to India’s rich cultural heritage and the exceptional craftsmanship of…https://t.co/cOQ0pjGTjx
— Narendra Modi (@narendramodi)September 18, 2023

ಅಂದಹಾಗೆ ಮೈಸೂರು ಜಿಲ್ಲೆಯ ಸೋಮನಾಥಪುರಲ್ಲಿರುವ ಕೇಶವ ದೇವಸ್ಥಾನ, ಹಾಸನ ಜಿಲ್ಲೆಯ ಬೇಲೂರಿನಲ್ಲಿರುವ ಚನ್ನಕೇಶವ ದೇವಸ್ಥಾನ ಹಾಗೂ ಹಳೆಬೀಡಿನಲ್ಲಿರುವ ಹೊಯ್ಸಳೇವರ ದೇವಸ್ಥಾನಗಳು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿವೆ. ಇದು ಕನ್ನಡಿಗರ ಪಾಲಿಗೆ ಹೆಮ್ಮೆ ಸಂಗತಿಯಾಗಿದೆ.
ಈ ದೇವಾಲಯಗಳನ್ನು ವಿಶ್ವ ಪರಂಪರೆ ತಾಣಗಳ ಪಟ್ಟಿಗೆ 2022-23ರಲ್ಲಿ ಸೇರಿಸುವ ಸಂಬಂಧ ಕೇಂದ್ರದ ಸಂಸ್ಕೃತಿ ಮತ್ತು ಪ್ರಾಚ್ಯವಸ್ತು ಸರ್ವೇಕ್ಷಣಾಲಯ ಸಚಿವಾಲಯ ಭಾರತದಿಂದ ನಾಮನಿರ್ದೇಶನ ಮಾಡಿ 2022ರ ಫೆಬ್ರವರಿ ತಿಂಗಳಲ್ಲಿ ಕಳುಹಿಸಿತ್ತು. ಕೇಂದ್ರದ ಸಂಸ್ಕೃತಿ, ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಈಶಾನ್ಯ ಪ್ರದೇಶ ಅಭಿವೃದ್ಧಿ ಖಾತೆಯ ರಾಜ್ಯ ಸಚಿವ ಜಿ.ಕಿಷನ್ ರೆಡ್ಡಿ ಈ ವಿಚಾರವನ್ನು ಅಂದಿನ ಟ್ವಿಟ್ಟರ್‌ (ಪ್ರಸ್ತುತ ಎಕ್ಸ್) ನಲ್ಲಿ ತಿಳಿಸಿದ್ದರು.
2022ರ ಅಕ್ಟೋಬರ್ 10ರಂದು ಬೇಲೂರು-ಹಳೇಬೀಡಿಗೆ ಯುನೆಸ್ಕೊ ತಂಡದಿಂದ ಮಲೇಶಿಯಾದಿಂದ ಟಿಯಾಂಗ್ ಕಿಯಾನ್ ಭೂಮ್ ಭೇಟಿ ನೀಡಿದ್ದರು. ಯುನೆಸ್ಕೋ ತಂಡದ ಜೊತೆ ಟೂರಿಸಂ ಟಾಸ್ಕ್ ಪೋರ್ಸ್ ಮುಖ್ಯೆಸ್ಥೆಯಾಗಿದ್ದ ಡಾ.ಸುಧಾಮೂರ್ತಿ ಅವರು ದೇವಾಲಯ ಕೆತ್ತನೆ ಶ್ರೀಮಂತಿಕೆ ಬಗ್ಗೆ ವಿವರಣೆ ನೀಡಿದ್ದರು
ಈ ದೇವಾಲಯಗಳು ಕಲೆ, ವಾಸ್ತುಶಿಲ್ಪ, ಸಂಸ್ಕೃತಿಯ ಪ್ರತೀಕವಾಗಿದ್ದು, ಪ್ರಸ್ತುತ ಮೂರು ಸ್ಮಾರಕಗಳು ಯುನೆಸ್ಕೋ ತಾಣವಾಗಿ ಘೋಷಣೆಯಾಗಿವೆ. 12-13 ನೇ ಶತಮಾನದಲ್ಲಿ ನಿರ್ಮಿಸಲಾದ ಹೊಯ್ಸಳರ ಶೈಲಿಯ ಶಿಲ್ಪಕಲಾ ಶೈಲಿಯ ದೇಗುಲಗಳು, ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದ ಮೂರು ದೇವಾಲಯಗಳಿಂದ ಇಲ್ಲಿ ಪ್ರತಿನಿಧಿಸಲ್ಪಟ್ಟಿದೆ.
CWMA ಆದೇಶ ವಿಚಾರ; ತಮಿಳುನಾಡಿನ ರಾಜಕಾರಣಿಗಳಲ್ಲಿ ಇರುವ ಒಗ್ಗಟ್ಟು ನಮ್ಮವರಲಿಲ್ಲ: ಎಚ್​.ಡಿ. ದೇವೇಗೌಡ

ಗ್ರಾಚ್ಯುಟಿ ಮಿತಿ ಹೆಚ್ಚಳ, ಕುಟುಂಬ ಪಿಂಚಣಿ: LIC ಏಜೆಂಟರು​, ಉದ್ಯೋಗಿಗಳಿಗೆ ಸಿಹಿ ಸುದ್ದಿ​ ಕೊಟ್ಟ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
