ಹೊಸದಿಲ್ಲಿ:ಇಂದು ಬೆಳಗ್ಗೆ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ದಟ್ಟವಾದ ಮಂಜು ಆವರಿಸಿದ್ದು, ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 100ಕ್ಕೂ ಹೆಚ್ಚು ವಿಮಾನಗಳು ವಿಳಂಬವಾಗಿದೆ. ರಸ್ತೆಗಳು ಗೋಚರವಾಗದಂತ ಪರಿಸ್ಥಿತಿ ನಿರ್ಮಾಣವಾದ ಕಾರಣ ವಿಮಾನ ಸೇರಿದಂತೆ ರೈಲುಗಳ ವೇಳಾಪಟ್ಟಿಯಲ್ಲಿಯೂ ಕೂಡ ಬದಲಾವಣೆಗೊಂಡಿದೆ.
ಇದನ್ನೂ ಓದಿ:700 ಶವಪರೀಕ್ಷೆ ನಡೆಸಿದ ಮಹಿಳೆಗೆ ಶ್ರೀರಾಮ ಪ್ರಾಣ ಪ್ರತಿಷ್ಠೆಗೆ ಆಹ್ವಾನ
ದೆಹಲಿಯಿಂದ ದೇಶದ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಹದಿನೆಂಟು ರೈಲುಗಳು ಇಂದು ಕೂಡ ವಿಳಂಬಗೊಂಡಿದ್ದು, ಮುಂಜಾನೆ 3 ಗಂಟೆಗೆ, ದೆಹಲಿ ವಿಮಾನ ನಿಲ್ದಾಣದಲ್ಲಿ ಗೋಚರತೆ ಲಭಿಸದ ಕಾರಣ ವಿಮಾನಗಳ ಸಮಯದಲ್ಲಿ ವ್ಯತ್ಯಾಸ ಉಂಟಾಗಿದೆ. ದೆಹಲಿಯ ಹಲವು ಪ್ರದೇಶಗಳಲ್ಲಿ ಇಂದು ಸಹ ದಟ್ಟ ಮಂಜು ಆವರಿಸಿದೆ.
“ದಟ್ಟವಾದ ಮಂಜಿನಿಂದಾಗಿ, ದೆಹಲಿ ವಿಮಾನ ನಿಲ್ದಾಣದಲ್ಲಿ ಹಾರಾಟದ ಕಾರ್ಯಾಚರಣೆಗಳು ಪರಿಣಾಮ ಬೀರಬಹುದು. ಫ್ಲೈಟ್​ನ​ ಮಾಹಿತಿ ಪಡೆಯಲು ಸಂಬಂಧಿಸಿದ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಲು ಪ್ರಯಾಣಿಕರಿಗೆ ವಿನಂತಿಸಲಾಗಿದೆ” ಎಂದು ಏರ್​ಪೋರ್ಟ್​ ಪ್ರಾಧಿಕಾರ ತಿಳಿಸಿದೆ,(ಏಜೆನ್ಸೀಸ್).
BBKS10: ಬೂದಿನೂ ಸಿಗದೆ ಇರೋ ಅಷ್ಟು ಕ್ರೂರಿ ಆಗ್ತೀನಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
