ನವದೆಹಲಿ:ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಬೆನ್ನಲ್ಲೇ ಎಎಪಿಯು ಸದಸ್ಯತ್ವ ಅಭಿಯಾನವನ್ನು ಜೋರಾಗಿ ನಡೆಸಲಾರಂಭಿಸಿದೆ. ರಾಷ್ಟ್ರ ನಿರ್ಮಾಣಕ್ಕಾಗಿ ಮಿಸ್​ ಕಾಲ್​ ಕೊಡಿ, ಎಎಪಿ ಸದಸ್ಯರಾಗಿ ಎಂದು ಮೊಬೈಲ್​ ನಂಬರ್​ ಒಂದನ್ನು ನೀಡಲಾಗಿದ್ದು, ಚುನಾವಣೆಯ ಫಲಿತಾಂಶ ಹೊರಬಿದ್ದ ನಂತರ ಕೇವಲ 24 ತಾಸುಗಳಲ್ಲಿ 11 ಲಕ್ಷ ಜನರು ಎಎಪಿ ಸೇರಿದ್ದಾರೆ ಎಂದು ಪಕ್ಷವು ಹೇಳಿಕೊಂಡಿದೆ.
ದೆಹಲಿಯ 70 ಕ್ಷೇತ್ರಗಳಿಗೆ ಫೆಬ್ರವರಿ 8ರಂದು ವಿಧಾನಸಭಾ ಚುನಾವಣೆ ನಡೆದಿದ್ದು ಫೆ.11ರಂದು ಫಲಿತಾಂಶ ಹೊರಬಿದ್ದಿದೆ. 62 ಸ್ಥಾನಗಳಲ್ಲಿ ಜಯಗೊಳಿಸುವ ಮೂಲಕ ಎಎಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದೆ. ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ನಗರದ ಹಲವು ಕಡೆಗಳಲ್ಲಿ ರಾಷ್ಟ್ರ ನಿರ್ಮಾಣಕ್ಕಾಗಿ ಮಿಸ್​ ಕಾಲ್​ ಕೊಡಿ ಎಎಪಿ ಸೇರಿಕೊಳ್ಳಿ ಎಂಬ ಪೋಸ್ಟರ್​ಗಳು ಕಾಣಿಸಿಕೊಂಡಿವೆ. ಫಲಿತಾಂಶ ಹೊರಬಿದ್ದ 24 ತಾಸುಗಳಲ್ಲಿ ಒಟ್ಟು 11 ಲಕ್ಷ ಜನರು ಮಿಸ್​ ಕಾಲ್​ ನೀಡುವುದರ ಮೂಲಕ ಎಎಪಿ ಸೇರಿಕೊಂಡಿದ್ದಾರೆ ಎಂದು ಎಎಪಿ ಟ್ವೀಟ್​ ಮಾಡಿದೆ.
ಎರಡನೇ ಬಾರಿ ದೆಹಲಿಯಲ್ಲಿ ಎಎಪಿಯು ಜಯಭೇರಿ ಬಾರಿಸಿದ್ದು, ಭಾನುವಾರದಂದು ಪಕ್ಷದ ಅಧ್ಯಕ್ಷ ಅರವಿಂದ್​ ಕೇಜ್ರಿವಾಲ್​ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಿಸಲಿದ್ದಾರೆ.(ಏಜೆನ್ಸೀಸ್​)
आम आदमी पार्टी के चलाए जा रहे 'राष्ट्र निर्माण के लिए आप' से जुड़े अभियान में मात्र 24 घंटे के अंदर देश भर से करीब 11 लाख लोग जुड़ गए हैं.https://t.co/D4CZYtQ5z1
— AAP (@AamAadmiParty)February 13, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
