ನವದೆಹಲಿ:ಮಾರ್ಚ್​ 31ರಂದು ಸುಮಾರು 17.58 ಕೋಟಿ ಭಾರತೀಯರ ಪ್ಯಾನ್​ ಕಾರ್ಡ್​ಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ಳಲಿವೆ. ಪ್ಯಾನ್​ ಕಾರ್ಡ್​ಗಳಿಗೆ ಆಧಾರ್​ ಲಿಂಕ್​ ಮಾಡಲು ಸಾಕಷ್ಟು ಸಮಯ ನೀಡಲಾಗಿದ್ದು ಮಾರ್ಚ್​ 31ರೊಳಗೆ ಲಿಂಕ್​ ಮಾಡದಿದ್ದರೆ ಅವುಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ಳಲಿವೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
2018ರಲ್ಲಿ ಸುಪ್ರೀಂ ಕೋರ್ಟ್​ ಪ್ಯಾನ್​ ಕಾರ್ಡ್​ಗಳಿಗೆ ಆಧಾರ್​ ಲಿಂಕ್​ ಮಾಡುವುದು ಕಡ್ಡಾಯ ಎಂದು ಆದೇಶ ಹೊರಡಿಸಿತ್ತು. ಪ್ಯಾನ್​ಗೆ ಆಧಾರ್​ ಲಿಂಕ್​ ಮಾಡದಿದ್ದರೆ ಆದಾಯ ತೆರಿಗೆ ಇಲಾಖೆಯ ಯಾವುದೇ ಸೇವೆಗಳಿಗೆ ನಾಗರಿಕರು ಅರ್ಹರಾಗುವುದಿಲ್ಲ ಎಂದು ಹೇಳಲಾಗಿತ್ತು. ಅಂದಿನಿಂದ ಅನೇಕ ಬಾರಿ ಪ್ಯಾನ್​ಗೆ ಆಧಾರ್​ ಲಿಂಕ್​ ಮಾಡಲು ಕೊನೆಯ ದಿನವನ್ನು ನೀಡಿ ಅದನ್ನು ವಿಸ್ತರಿಸುತ್ತಾ ಬರಲಾಗಿದೆ. ಹಾಗೆ ವಿಸ್ತರಣೆ ಮಾಡಿ 2020ರ ಮಾರ್ಚ್​ 31ರೊಳಗೆ ಲಿಂಕ್​ ಮಾಡಬೇಕು ಎಂದು ಕೊನೆಯ ದಿನಾಂಕವನ್ನು ಪ್ರಕಟಿಸಿ ತಿಂಗಳುಗಳು ಉರುಳಿದೆ. ಆದರೂ ಅನೇಕರು ಲಿಂಕ್​ ಮಾಡಿಲ್ಲ ಎನ್ನಲಾಗಿದೆ.
ಭಾರತದಲ್ಲಿ ಈವರೆಗೆ ಸುಮಾರು 30.75 ನಾಗರಿಕರು ತಮ್ಮ ಪ್ಯಾನ್​ ಕಾರ್ಡ್​ಗಳಿಗೆ ಆಧಾರ್​ ಲಿಂಕ್​ ಮಾಡಿದ್ದಾರೆ. ಇನ್ನೂ 17.58 ಕೋಟಿ ಜನರು ಆಧಾರ್​ ಲಿಂಕ್​ ಮಾಡುವುದು ಬಾಕಿ ಇದೆ.
ಮಾರ್ಚ್​ 31ರ ನಂತರ ಆಧಾರ್​ ಲಿಂಕ್​ ಆಗದ ಪ್ಯಾನ್​ ಕಾರ್ಡ್​ಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ಳಲಿದ್ದು, ಪ್ಯಾನ್ ಕಾರ್ಡ್​ ಹೊಂದಿರುವವನು ಆಧಾರ್​ ಲಿಂಕ್​ ಮಾಡಿದ ನಂತರ ಅದರ ಮೌಲ್ಯ ವಾಪಾಸಾಗುವುದು ಎಂದು ತಿಳಿಸಲಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
