ಬೆಳಗಾವಿ:ನೆರೆಯ ಗೋವಾ ರಾಜ್ಯದಲ್ಲಿ ವಾಣಿಜ್ಯ ವಾಹನಗಳ ಸಂಚಾರ್ ಬಂದ್ ಹಿನ್ನೆಲೆ ಬೆಳಗಾವಿ-ಚೋರ್ಲಾ ರಾಜ್ಯ ಹೆದ್ದಾರಿ ಮೇಲೆ 200ಕ್ಕೂ ಅಧಿಕ ಲಾರಿಗಳು ಎರಡು ದಿನಗಳಿಂದ ನಿಂತಿದ್ದು, ವಾಹನ ಸಂಚಾರ ಬಂದ್ ಆಗಿದೆ.
ಗೋವಾದಲ್ಲಿ ವಾಹನ ಸಂಚಾರ ದಟ್ಟಣೆ, ರಸ್ತೆ ಹಾಳು ಸೇರಿದಂತೆ ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ವಾಣಿಜ್ಯ ವಾಹನಗಳ ಸಂಚಾರವನ್ನು ಗೋವಾ ಉತ್ತರ ಭಾಗದ ಜಿಲ್ಲಾಧಿಕಾರಿ ಬಂದ್ ಮಾಡಿ ಆದೇಶ ಹೊರಡಿಸಿದ್ದಾರೆ.
ಗೋವಾಕ್ಕೆ ಹೋಗಲು ಪರ್ಯಾಯ ಮಾರ್ಗಗಳು ಇಲ್ಲದಿರುವ ಕಾರಣ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ, ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳ ವಾಣಿಜ್ಯ ಲಾರಿಗಳು ಎರಡು ದಿನಗಳಿಂದ ಗೋವಾ ಪ್ರವೇಶದ ಗಡಿಯಲ್ಲಿಯೇ ನಿಂತುಕೊಂಡಿವೆ. ಈಗಾಗಲೇ ಸಿಮೆಂಟ್, ಕಬ್ಬಿಣ, ಬಟ್ಟೆ, ಇತರೆ ಗೂಡ್ಸ್ ವಾಹನಗಳು ನಿಂತಿವೆ.‌ ಇದರಿಂದಾಗಿ ಸಂಚಾರ ದಟ್ಟಣೆ ಉಂಟಾಗಿದೆ.
ಬೆಳಗಾವಿ-ರಾಮನಗರ- ಮೌಲಂ-ಗೋವಾ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ 3 ವರ್ಷಗಳಿಂದ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಗೋವಾಗೆ ಹೋಗಲು ಬೆಳಗಾವಿ- ಚೋರ್ಲಾ ಹೆದ್ದಾರಿಯನ್ನು ಅವಲಂಬಿಸಿದ್ದಾರೆ.‌ ಇದೀಗ ಈ ಮಾರ್ಗವನ್ನು ಗೋವಾ ಬಂದ್ ಮಾಡಿದೆ. ಕೂಡಲೇ ವಾಹನ ಸಂಚಾರಕ್ಕೆ ಅವಕಾಶ ನೀಡುವಂತೆ ವಾಹನಗಳ ಮಾಲೀಕರಾದ ನಂದಕುಮಾರ ಲಮಾಣಿ, ಮಹಾದೇವಪ್ಪ ಸೋಮನಟ್ಟಿ ಮನವಿ ಮಾಡಿದ್ದಾರೆ.
ಆಸ್ಕರ್ ಜ್ಯೂರಿಯಾಗಿ ಪಾಲ್ಗೊಂಡ ಪವನ್ ಒಡೆಯರ್; ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ ಭಾಗಿ

ಬಟ್ಟೆ ಒಗೆಯಲೆಂದು ಹೋದವರು ಬರಲೇ ಇಲ್ಲ; ಅಮ್ಮಂದಿರ ಜತೆಗೆ ಮಕ್ಕಳ ದುರ್ಮರಣ..

ಬದುಕಿಗೆ ನವತ್ವ ತರುವ ಮಹಾಪರ್ವ; ನವರಾತ್ರ ಮಹೋತ್ಸವದ ಅಂತರಾರ್ಥ

ಶ್ರೀಧರ ಎಂಬ ಯುವಕ ಮೊಹ್ಮದ್ ಸಲ್ಮಾನ್ ಆದ ಕಥೆ-ವ್ಯಥೆ; ಬಲವಂತದ ಖತ್ನಾ, ಮತಾಂತರ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + fifteen =
Remember me
