ಪ್ಯಾರಿಸ್​/ನವದೆಹಲಿ: ಕರೊನಾ ಸೋಂಕಿನ ಕಾರಣಕ್ಕೆ ಜಗತ್ತಿನಾದ್ಯಂತ ಬರೋಬ್ಬರಿ 300 ಕೋಟಿ ಜನರಿಗೆ ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ. ಕರೊನಾ ವೈರಸ್ COIVID19 ಸೋಂಕು ಹೋಗಲಾಡಿಸಲು ಬಹುತೇಕ 70 ರಾಷ್ಟ್ರಗಳು ಮತ್ತು ಪ್ರಾಂತ್ಯಗಳಲ್ಲಿ ಕಟ್ಟುನಿಟ್ಟಿನ ಕ್ವಾರಂಟೈನ್ ಮತ್ತು ಇತರೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಎಎಫ್​ಪಿ ಡೇಟಾ ವರದಿ ಹೇಳಿದೆ. ಈ ನಡುವೆ, ಭಾರತದಲ್ಲಿ ಕರೊನಾ ಪೀಡಿತರ ಸಂಖ್ಯೆ 649ಕ್ಕೆ ಏರಿಕೆಯಾಗಿದ್ದು, ಸಾವಿನ ಪ್ರಮಾಣ 13ಕ್ಕೇರಿದೆ.
ಅರ್ಜೆಂಟೀನಾ, ಬ್ರಿಟನ್​, ಫ್ರಾನ್ಸ್, ಇಂಡಿಯಾ, ಇಟಲಿ, ಅಮೆರಿಕ ಸೇರಿ ಬಹುತೇಕ ರಾಷ್ಟ್ರಗಳು ಕಡ್ಡಾಯ ಲಾಕ್​ಡೌನ್ ಘೋಷಿಸಿವೆ. ಇತರೆ ಕೆಲವು ರಾಷ್ಟ್ರಗಳಲ್ಲಿ ಸರ್ಕಾರಗಳು ಕರ್ಫ್ಯೂ, ಕ್ವಾರಂಟೈನ್​, #SocialDistancing ಮುಂತಾದ ಮುಂಜಾಗ್ರತಾ ಕ್ರಮಗಳನ್ನು ಜಾರಿಗೊಳಿಸಿವೆ. ಸಂಪೂರ್ಣ ಲಾಕ್​ಡೌನ್ ಘೋಷಿಸಿದ ರಾಷ್ಟ್ರಗಳ ಪಟ್ಟಿಗೆ ಬುಧವಾರ ಪನಾಮಾವೂ ಸೇರಿಕೊಂಢಿದೆ. ದಕ್ಷಿಣ ಆಫ್ರಿಕಾದಲ್ಲಿ ಇಂದಿನಿಂದ 21 ದಿನ ಲಾಕ್​ಡೌನ್ ಘೋಷಣೇಯಾಗಿದೆ. ಬಹುತೇಕ ರಾಷ್ಟ್ರಗಳಲ್ಲಿ ಇನ್ನೂ ಹೊರಗೆ ಹೋಗಿ ಕೆಲಸ ಮಾಡಲು ಮತ್ತು ದಿನಸಿ ಮತ್ತು ಇತರೆ ಅಗತ್ಯವಸ್ತುಗಳನ್ನು ಖರೀದಿಸುವುದು ಸಾಧ್ಯವಾಗಿದೆ. ಹಾಗೆಯೇ ವೈದ್ಯಕೀಯ ನೆರವು ಪಡೆಯುವುದಕ್ಕೂ ಸಾಧ್ಯವಿದೆ.
ಇರಾನ್​, ಜರ್ಮನಿ, ಕೆನಡಾ ಸೇರಿ ಏಳು ರಾಷ್ಟ್ರಗಳಲ್ಲಿ ಒಟ್ಟು 416 ದಶಲಕ್ಷ ಜನಸಂಖ್ಯೆ ಇದ್ದು, ಇಲ್ಲಿ ಎಲ್ಲರನ್ನೂ ಮನೆಯಲ್ಲೇ ಉಳಿದುಕೊಳ್ಳುವಂತೆ ಕಡ್ಡಾಯವಾಗಿ ಸೂಚಿಸಲಾಗಿದೆ. ರಷ್ಯಾದಲ್ಲಿ ಮುಂದಿನ ವಾರ ನಾನ್​-ವರ್ಕಿಂಗ್ ವೀಕ್​ ಎಂದು ಘೋಷಿಸಲಾಗಿದೆ. ಚಿಲಿ, ಈಜಿಪ್ಟ್​, ಐವರಿಕೋಸ್ಟ್​, ಸರ್ಬಿಯಾ ಸೇರಿ 18 ರಾಷ್ಟ್ರಗಳಲ್ಲಿ ಒಟ್ಟು 300 ದಶಲಕ್ಷ ಜನಸಂಖ್ಯೆ ಇದ್ದು ಈ ರಾಷ್ಟ್ರಗಳಲ್ಲಿ ಕರ್ಫ್ಯೂ ಜಾರಿಯಲ್ಲಿದೆ. ಈಕ್ವಿಡೋರ್​ನಲ್ಲಿ ಕಠಿಣ ಕರ್ಫ್ಯೂ ಜಾರಿಯಲ್ಲಿದ್ದು, ಜನ ಕಡ್ಡಾಯವಾಗಿ ಬೆಳಗ್ಗೆ 5ರಿಂದ ಅಪರಾಹ್ನ 2 ಗಂಟೆ ತನಕ ಮನೆಯಲ್ಲೇ ಇರಬೇಕು.
ಭಾರತದಲ್ಲಿ ಕರೊನಾ ಸೋಂಕು ಪೀಡಿತರ ಸಂಖ್ಯೆ ಗುರುವಾರ ಬೆಳಗ್ಗೆ 649ಕ್ಕೆ ಏರಿಕೆಯಾಗಿದೆ. ಈ ಪೈಕಿ 593 ಆ್ಯಕ್ಟಿವ್ ಕೇಸ್​ಗಳಾದರೆ, 42 ಆರೋಗ್ಯ ಸುಧಾರಿಸಿದವರು/ಬಿಡುಗಡೆಹೊಂದಿದವರು. ಇನ್ನು 13 ಜನ ಮೃತಪಟ್ಟವರು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.(ಏಜೆನ್ಸೀಸ್)
ರೈಲ್ವೆ ಬೋಗಿಗಳಾಗುತ್ತಿವೆ ಕರೊನಾ ಐಸೋಲೇಷನ್ ಯೂನಿಟ್ಸ್!

Total number of#COVID19positive cases rise to 649 in India (including 593 active cases, 42 cured/discharged people and 13 deaths): Ministry of Health and Family Welfarepic.twitter.com/mbn3okwvZp
— ANI (@ANI)March 26, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 6 =
Remember me
