ನವದೆಹಲಿ:ಭಾರತೀಯ ರೈಲ್ವೆ ಜನರ ಅನುಕೂಲಕ್ಕಾಗಿ ನವದೆಹಲಿಯಿಂದ 15 ಸ್ಥಳಗಳಿಗೆ ರಾಜಧಾನಿ ಸ್ಪೆಶಲ್​ ರೈಲುಗಳ ಸಂಚಾರ ಆರಂಭಿಸಿದೆ. ಐದು ದಿನಗಳಲ್ಲಿ ಅಂದಾಜು 3.5 ಲಕ್ಷ ಪ್ರಯಾಣಿಕರು ಈ ರೈಲಿನಲ್ಲಿ ಪ್ರಯಾಣಿಸಿದ್ದು, ಭಾರತೀಯ ರೈಲ್ವೆಗೆ 69 ಕೋಟಿ ರೂ. ಆದಾಯ ಬಂದಿದೆ.
ವಿವಿಧ ರಾಜ್ಯಗಳಲ್ಲಿರುವ ತಮ್ಮವರ ಭೇಟಿಗೆ ಅಥವಾ ಅನ್ಯ ಊರುಗಳಲ್ಲಿರುವ ತಮ್ಮ ಮಕ್ಕಳ ಬಳಿಗೆ ತೆರಳಲು ಜನರು ಈ ಸೌಲಭ್ಯವನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೇ 12ರಿಂದ ಸಂಚಾರ ಆರಂಭಿಸಿರುವ ಈ ರೈಲುಗಳು ಸಂಪೂರ್ಣ ಭರ್ತಿಯಾಗಿ ಚಲಿಸುತ್ತಿವೆ ಎಂದು ಭಾರತೀಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಶ್ರಮಿಕ ವಿಶೇಷ ರೈಲಿನಲ್ಲಿ ಬಳ್ಳಾರಿಯಿಂದ ಉತ್ತರ ಪ್ರದೇಶಕ್ಕೆ ವಲಸಿಗರ ಪ್ರಯಾಣ, ಜಿಲ್ಲಾಮಟ್ಟದ ಅಧಿಕಾರಿಗಳಿಂದ ಬೀಳ್ಕೊಡುಗೆ
ಮೇ 16ರಂದು ಗರಿಷ್ಠ 27,788 ಜನರು ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಭಾನುವಾರಕ್ಕೆ ಈ ಸಂಖ್ಯೆ 30,127ಕ್ಕೆ ಹೆಚ್ಚಳವಾಗಿರುವುದಾಗಿ ಹೇಳಲಾಗುತ್ತಿದೆ.ಭಾನುವಾರದವರೆಗೆ 1,87,827 ಜನರು ಟಿಕೆಟ್​ಗಳನ್ನು ಮುಂಗಡವಾಗಿ ಕಾಯ್ದಿರಿಸಿದ್ದಾರೆ. ಒಟ್ಟು 3,48,634 ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿಕೊಂಡಿದ್ದಾರೆ. ಈ ರೈಲುಗಳಿಂದ ಇದುವರೆಗೆ ಒಟ್ಟು 69,33,67,735 ರೂ. ಆದಾಯ ಬಂದಿದೆ. ಮೇ 27ರ ವೇಳೆಗೆ ಒಟ್ಟು 21 ರೈಲುಗಳು ಕಾರ್ಯಾಚರಣೆ ನಡೆಸಲಿವೆ ಎಂದು ಭಾರತೀಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಸ್​ ನಿಲ್ದಾಣದಲ್ಲಿ ಕರೊನಾ ಸೋಂಕಿತನ ಮೃತದೇಹ ಕಂಡು ಕಂಗಾಲಾದ ಜನ: ತನಿಖೆಗೆ ಆದೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
