ಅಹಮದಾಬಾದ್​:ಇದೇ ತಿಂಗಳ 24 ಮತ್ತು 25ನೇ ತಾರೀಖಿನಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹಾಗೂ ಆತನ ಪತ್ನಿ ಮೆಲಾನಿಯ ಟ್ರಂಪ್​ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದ್ದು ಅದಕ್ಕೆಂದು ಭಾರತ ಭಾರೀ ಸಿದ್ಧತೆಯನ್ನು ಮಾಡಿಕೊಳ್ಳಲಾರಂಭಿಸಿದೆ. ಅಹಮದಾಬಾದ್​ನಲ್ಲಿ ಟ್ರಂಪ್​ ಮತ್ತು ಮೋದಿ 22.ಕಿ.ಮೀ ರೋಡ್​ ಶೋನಲ್ಲಿ ಭಾಗವಹಿಸಲಿದ್ದು ದಾರಿಯುದ್ದಕ್ಕೂ ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಈ ಇಬ್ಬರು ನಾಯಕರಿಗೆ ಸ್ವಾಗತ ಕೋರಲಿದ್ದಾರೆ ಎನ್ನಲಾಗಿದೆ.
ಅಹಮದಾಬಾದ್​ನ ಮೊಟೆರಾದಲ್ಲಿ ನಿರ್ಮಿಸಲಾಗಿರುವ ಸರ್ದಾರ್​ ವಲ್ಲಭಾಯಿ ಪಟೇಲ್​ ಕ್ರೀಡಾಂಗಣವನ್ನು ಟ್ರಂಪ್​ ಫೆ.24ರಂದು ಉದ್ಘಾಟನೆ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೂ ಮೊದಲು ಸಬರಮತಿ ಆಶ್ರಮದಿಂದ ಕ್ರೀಡಾಂಗಣದವರೆಗೂ ಒಟ್ಟು 22ಕಿ.ಮೀ. ಅಂತರದಲ್ಲಿ ಉಭಯ ದೇಶದ ನಾಯಕರುಗಳು ರೋಡ್​ ಶೋ ನಡೆಸಲಿದ್ದಾರೆ. ದೇಶದ ಎಲ್ಲ ರಾಜ್ಯಗಳಿಂದ ಈ ರೋಡ್​ ಶೋ ನೋಡಲು ಜನ ಆಗಮಿಸಲಿದ್ದಾರೆ. ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಈ ರೋಡ್​ ಶೋನಲ್ಲಿ ನಾಯಕರುಗಳಿಗೆ ಸ್ವಾಗತ ಕೋರಲಿದ್ದಾರೆ ಎಂದು ಅಹಮದಾಬಾದ್​ನ ಮೇಯರ್​ ಬಿಜಾಲ್​ ಪಟೇಲ್​ ತಿಳಿಸಿದ್ದಾರೆ. ಈ ರೋಡ್​ ಶೋ ನಗರದಲ್ಲಿ ನಡೆಯುತ್ತಿರುವ ಅತೀ ದೊಡ್ಡ ರೋಡ್​ ಶೋ ಆಗಿರಲಿದೆ ಎಂದು ಆಕೆ ತಿಳಿಸಿದ್ದಾರೆ.
ರೋಡ್​ ಶೋನಲ್ಲಿ ಭಾಗವಹಿಸುವ ಬೇರೆ ರಾಜ್ಯದ ಜನರಿಗೆ ಅವರವರ ರಾಜ್ಯದ ಸಾಂಸ್ಕೃತಿಕ ಉಡುಗೆಯಲ್ಲಿ ಬರುವಂತೆ ತಿಳಿಸಲಾಗಿದೆ ಎಂದು ಬಿಜೆಪಿಯ ನಾಯಕರೊಬ್ಬರು ತಿಳಿಸಿದ್ದಾರೆ. ಒಟ್ಟಾರೆಯಾಗಿ 300ಕ್ಕೂ ಹೆಚ್ಚು ಸಂಘ ಸಂಸ್ಥೆಗಳ ಸದಸ್ಯರು ಈ ರೋಡ್​ ಶೋನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಡೊನಾಲ್ಡ್​ ಟ್ರಂಪ್​ ಮತ್ತು ಮೆಲಾನಿಯಾ ಟ್ರಂಪ್​ ಅಹಮದಾಬಾದ್​ಗೆ ಬರುತ್ತಿದ್ದು, ಅವರು ರೋಡ್​ ಶೋಗೆ ತೆರಳುವ ದಾರಿಯಲ್ಲಿ ಏಳು ಅಡಿಯ ಗೋಡೆಯನ್ನು ಕಟ್ಟಲಾಗುತ್ತಿದೆ. ಟ್ರಂಪ್​ ಕಣ್ಣಿಗೆ ನಗರದಲ್ಲಿರುವ ಕೊಳೆಗೇರಿ ಕಾಣದಿರುವಂತೆ ಮಾಡಲೆಂದು ಈ ಗೋಡೆಯನ್ನು ಕಟ್ಟಲಾಗುತ್ತಿದೆ ಎನ್ನುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಆದರೆ ಬಿಜೆಪಿ ನಾಯಕರುಗಳು ಈ ಆರೋಪವನ್ನು ತಳ್ಳಿ ಹಾಕಿದ್ದು ಸುರಕ್ಷತೆಯ ದೃಷ್ಟಿಯಿಂದ ಗೋಡೆ ನಿರ್ಮಿಸುತ್ತಿರುವುದಾಗಿ ತಿಳಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − eleven =
Remember me
